ಸಿಡಿಯಲ್ಲಿರುವುದು ನಮ್ಮ ಧ್ವನಿಯೇ? ಏನ್ ಮಾಡ್ತೀರಾ?: ಬಿಎಸ್‌ವೈ ಸವಾಲ್

ಬೆಂಗಳೂರು, ಸೋಮವಾರ, 9 ಅಕ್ಟೋಬರ್ 2017 (13:44 IST)

ಬಿಎಸ್‌ವೈ-ಅನಂತ್ ಕುಮಾರ್ ಆಡಿಯೋ ಸಂಭಾಷಣೆ ಸಾಬೀತು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಿಡಿಯಲ್ಲಿರುವುದು ನಮ್ಮ ಧ್ವನಿ ಅಲ್ಲ ಎಂದು ನಾವೆಂದು ಹೇಳಿಲ್ಲ. ನಮ್ಮ ಮೇಲೆ ಎಷ್ಟೇ ಎಫ್‍ಐಆರ್ ದಾಖಲಿಸಿದರು ಹೆದರೊಲ್ಲ ಎಂದು ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಸಿದ್ದಪಡಿಸಿದ ಸಿಡಿಯಲ್ಲಿರುವುದು ನಮ್ಮ ಧ್ವನಿಯೇ. ಆದರೆ, ಸಿಡಿಯಲ್ಲಿರುವ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
 
ಸಿಡಿ ಇಟ್ಕೊಂಡು ಏನೋ ಸಾಧನೆ ಮಾಡಿದವರಂತೆ ಸರಕಾರ ಬೀಗುತ್ತಿದೆ. ಇಂತಹ ದ್ವೇಷದ ರಾಜಕಾರಣದಿಂದ ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ. 
 
ಸಿಡಿಯನ್ನು ಫೋರೆನ್ಸಿಕ್ ಲ್ಯಾಬ್‌ಗೆ ಕಳುಹಿಸುವ ಅಗತ್ಯವಿರಲಿಲ್ಲ. ಸಿಡಿಯಲ್ಲಿರುವುದು ನಮ್ಮ ಧ್ವನಿಯೆಂದು ಬಹಿರಂಗವಾಗಿ ಹೇಳಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಟಾಂಗ್ ನೀಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 



ಇದರಲ್ಲಿ ಇನ್ನಷ್ಟು ಓದಿ :  
ಬಿಎಸ್‌ವೈ ಅನಂತ್ ಕುಮಾರ್ ಸಿಎಂ ಸಿದ್ದರಾಮಯ್ಯ ಸಿಡಿ ವಿವಾದ Bsy Anantkumar Cm Siddaramaiah Cd Contervercy

ಸುದ್ದಿಗಳು

news

ಜನರಕ್ಷಾ ಯಾತ್ರೆ ಬೆಂಬಲಿಸಿ ಬಿಜೆಪಿ ಪಾದಯಾತ್ರೆ: ಸಿಪಿಎಂ ಕಚೇರಿ ಮುತ್ತಿಗೆಗೆ ಯತ್ನ

ಬೆಂಗಳೂರು: ಬಿಜೆಪಿ ಕೇರಳದಲ್ಲಿ ನಡೆಸುತ್ತಿರುವ ಜನರಕ್ಷಾ ಯಾತ್ರೆ ಬೆಂಬಲಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ...

news

ಜಮ್ಮು ಕಾಶ್ಮೀರ ವಿಮಾನ ನಿಲ್ದಾಣದಲ್ಲಿ ಯೋಧರ ನೋಡಿ ಎದ್ದು ನಿಂತ ಪ್ರಯಾಣಿಕರು

ಜಮ್ಮು ಕಾಶ್ಮೀರ: ಯೋಧರನ್ನು ಎಲ್ಲಿಯೇ ಕಂಡರೂ ಎದ್ದು ನಿಂತು ಗೌರವ ಸಲ್ಲಿಸಿ ಎಂದು ಪ್ರಧಾನಿ ಮೋದಿ ...

news

ದೀಪಾವಳಿಗೆ ಕೆಲವೇ ದಿನಗಳ ಮೊದಲು ಸುಪ್ರೀಂ ಕೋರ್ಟ್ ನೀಡಿದ ಶಾಕ್

ನವದೆಹಲಿ: ಪಟಾಕಿ ಹಬ್ಬ ದೀಪಾವಳಿಗೆ ಇನ್ನು ಕೇವಲ ಒಂದು ವಾರ ಬಾಕಿಯಿದೆ. ಆದರೆ ಅಷ್ಟರಲ್ಲೇ ದೆಹಲಿ ಜನತೆಗೆ ...

news

ಬಿಎಸ್ ವೈ, ಅನಂತ ಕುಮಾರ್ ವಿರುದ್ಧ ಎಫ್ ಐಆರ್ ಬಲೆ ಹಣಿಯಲು ಸಿಎಂ ಸಭೆ

ಬೆಂಗಳೂರು: ಹೈಕಮಾಂಡ್ ಗೆ ಕಪ್ಪ ನೀಡಿರುವ ಕುರಿತು ಕಾರ್ಯಕ್ರಮವೊಂದರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ...

Widgets Magazine
Widgets Magazine