ಡಿ.ಕೆ. ಶಿವಕುಮಾರ್ ಆಪ್ತನ ಮನೆ ಮೇಲೆ ಐಟಿ ದಾಳಿ

ಬೆಂಗಳೂರು, ಬುಧವಾರ, 30 ಆಗಸ್ಟ್ 2017 (11:11 IST)

Widgets Magazine

ಡಿ.ಕೆ. ಶಿವಕುಮಾರ್ ಅವರ ಮನೆ ಮೇಲಿನ ಐಟಿ ದಾಳಿ ಬಳಿಕ ಇದೀಗ ಡಿ.ಕೆ. ಶಿವಕುಮಾರ್ ಆಪ್ತ ಮನೆ ಮೇಲೆ ಐಟಿ ದಾಳಿ ನಡೆದಿದೆ. ಬೆಂಗಳೂರಿನ ರಾಜಾಜಿನಗರದ 2ನೇ ಹಂತದಲ್ಲಿರುವ ವಿಜಯ್ ಮುಳಗುಂದ ಮನೆ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆ ಪತ್ರಗಳ ಪರಿಶೀಲನೆ ನಡೆಸುತ್ತಿದ್ದಾರೆ.


ವಿಜಯ್ ಮುಳಂಗುಂದ ಅವರು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ವಿಲಾಸ್ ರಾವ್ ದೇಶ್ ಮುಖ್ ಮೂಲಕ ಡಿ.ಕೆ. ಶಿವಕುಮಾರ್ ಅವರಿಗೆ ಪರಿಚಯವಾಗಿದ್ದರು. ಅಂದಿನಿಂದ ಡಿ.ಕೆ. ಶಿವಕುಮಾರ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರು ಎನ್ನಲಾಗಿದೆ. ಗುಜರಾತ್ ರಾಜ್ಯಸಭಾ ಚುನಾವಣೆ ಸಂದರ್ಭ ಆಪರೇಶನ್ ಕಮಲದಿಂದಾಗಿ 41 ಕಾಂಗ್ರೆಸ್ ಶಾಸಕರು ಕರ್ನಾಟಕಕ್ಕೆ ಆಗಮಿಸಿದ್ದರು. ಈ ಸಂದರ್ಭ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಸಂಬಂಧಿಕರ ಮನೆ ಮೇಲೆ ಐಟಿ ದಾಳಿ ನಡೆದಿತ್ತು.

ಕಳೆದ ತಿಂಗಳಿಂದೀಚೆಗೆ ಕಾಂಗ್ರೆಸ್ ನಾಯಕರ ಮೇಲೆ ನಡೆದ 2ನೇ ಐಟಿ ದಾಳಿ ಇದಾಗಿದೆ. 10 ಐಟಿ ಅಧಿಕಾರಿಗಳು ವಿಜಯ್ ಮುಳಗುಂದ ಮನೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 . Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಡಿಕೆಶಿವಕುಮಾರ್ ಐಟಿ ದಾಳಿ ವಿಜಯ್ ಮುಳಗುಂದ Dkshivakumar Vijay Mulagunda It Raid

Widgets Magazine

ಸುದ್ದಿಗಳು

news

ರಾಹುಲ್ ಗಾಂಧಿ ಮದುವೆ ವಿಚಾರ: ಸಿಎಂ ಸಿದ್ದು, ಡಿಕೆಶಿ ಹೇಳಿದ್ದೇನು?

ಬೆಂಗಳೂರು: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಮದುವೆಯಾಗಲು ದಲಿತರ ಹೆಣ್ಣು ಮಗಳನ್ನು ನೀಡಲು ಸಿದ್ಧ ...

news

ರಾಹುಲ್ ಗಾಂಧಿ ತಪ್ಪು ಫೋಟೋ ಬಳಕೆ ಮಾಡಿ ಬಿಜೆಪಿ ಎಡವಟ್ಟು

ಮುಂಬೈ: ಡೇರಾ ಸಚ್ಚಾ ಬಾಬಾ ಪ್ರಕರಣದಲ್ಲಿ ಬಿಜೆಪಿ ಮೇಲೆ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ಗೆ ...

news

ಡೇರಾ ಬಾಬಾ ನಂತರ ಅಸ್ಸಾರಾಂ ಬಾಪು ಕರಾಳ ಸತ್ಯಗಳು

ನವದೆಹಲಿ: ಡೇರಾ ಸಚ್ಚಾ ಮುಖ್ಯಸ್ಥ ರಾಮ್ ರಹೀಂ ಸಿಂಗ್ ನಂತೆ ಸ್ವಯಂ ಘೋಷಿತ ದೇವಮಾನವ ಎಂದು ಜನರನ್ನು ಮರಳು ...

news

ಪತ್ನಿಗೆ ಇಷ್ಟವಿಲ್ಲದಿದ್ದರೂ ಸೆಕ್ಸ್ ನಡೆಸಿದರೆ ಅಪರಾಧವಲ್ಲ!

ನವದೆಹಲಿ: ಇನ್ನು ವಿವಾಹಿತ ಪುರುಷರು ಸೆಕ್ಸ್ ಗೆ ತಮ್ಮ ಪತ್ನಿಯ ಒಪ್ಪಿಗೆ ಪಡೆಯಬೇಕಿಲ್ಲ. ಒಂದು ವೇಳೆ ...

Widgets Magazine