ನಟಿ ರಮ್ಯಾ ವಿರುದ್ಧ ‘ಪಲ್ಲಂಗ’ ಶಬ್ಧ ಬಳಸಿದ್ದಕ್ಕೆ ಜಗ್ಗೇಶ್ ಕೊಟ್ಟ ಸ್ಪಷ್ಟನೆ ಏನು ಗೊತ್ತಾ?

ಬೆಂಗಳೂರು, ಮಂಗಳವಾರ, 6 ಫೆಬ್ರವರಿ 2018 (09:42 IST)

ಬೆಂಗಳೂರು: ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ ನಟಿ, ಕಾಂಗ್ರೆಸ್ ನಾಯಕಿ ರಮ್ಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸುವಾಗ ನಟ, ಬಿಜೆಪಿ ನಾಯಕ ಜಗ್ಗೇಶ್  ‘ಪಲ್ಲಂಗ’ ಶಬ್ಧ ಬಳಸಿದ್ದು ಆಕ್ಷೇಪಕ್ಕೊಳಗಾಗುತ್ತಿರುವುದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ.
 

ರಮ್ಯಾ ಶ್ರಮವಿಲ್ಲದೇ ಪಲ್ಲಂಗದ ಏರಿದವರು ಎಂದು ಜಗ್ಗೇಶ್ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದರು. ಇದಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ ಎತ್ತಿದೆ. ಮಹಿಳೆಯ ಮೇಲೆ ಬಿಜೆಪಿ ನಾಯಕನ ಅಸಭ್ಯ ಪದ ಬಳಕೆ ಎಂದು ಜರೆಯುತ್ತಿದೆ.
 
ಇದಕ್ಕೆ ಸ್ಪಷ್ಟನೆ ಕೊಟ್ಟಿರುವ ಜಗ್ಗೇಶ್, ಪಲ್ಲಂಗ ಎಂದರೆ ಮಂಚ ಅಲ್ಲವೋ.. ಗ್ರಾಮ್ಯ ಭಾಷೆಯಲ್ಲಿ ಸುಖದ ಸುಪ್ಪತ್ತಿಗೆ ಅಂದರ್ಥ. ಗ್ರಾಮ್ಯ ಭಾಷೆಯ ಸೊಬಗು ಗೊತ್ತಿಲ್ಲದವರಿಗೆ ಅವರಿಗನಿಸಿದ್ದೇ ಅರ್ಥ ಎಂದು ಜಗ್ಗೇಶ್ ಸಮರ್ಥನೆ ಕೊಟ್ಟಿರುವ ಜಗ್ಗೇಶ್ ನಾನು ಹೇಳಿದ ಶಬ್ಧವೊಂದನ್ನೆ ಇಟ್ಟುಕೊಂಡು ನಿಜವಾದ ವಿವಾದವನ್ನು ಮರೆಮಾಚುತ್ತಿರುವ ಕಾಂಗ್ರೆಸಿಗರ ವಿರುದ್ಧ ಕಿಡಿ ಕಾರಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮತದಾರರಿಗೆ ಕುಕ್ಕರ್, ಮಿಕ್ಸಿ ವಿತರಿಸಿದ ಲಕ್ಷ್ಮೀ ಹೆಬ್ಬಾಳ್ಕರ್

ವಿಧಾನಸಭೆ ಚುನಾವಣೆಗಾಗಿ ಮತದಾರರನ್ನು ಒಲಿಸಿಕೊಳ್ಳಲು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ...

news

ಸದ್ಯಕ್ಕೆ ಪೆಟ್ರೋಲ್, ಡೀಸೆಲ್ ಜಿಎಸ್ ಟಿ ವ್ಯಾಪ್ತಿಗಿಲ್ಲ- ಅರುಣ್ ಜೇಟ್ಲಿ

ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ವ್ಯಾಪ್ತಿಗೆ ಪೆಟ್ರೋಲ್ ಹಾಗೂ ಡೀಸೆಲ್ ಒಳಪಡಿಸಲು ರಾಜ್ಯ ...

news

ರಾಹುಲ್ ಗಾಂಧಿ ವಾಸ್ತವ್ಯಕ್ಕೆ ನವೀಕರಣಗೊಂಡ ಸರ್ಕ್ಯೂಟ್ ಹೌಸ್

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಸ್ತವ್ಯದ ಹಿನ್ನೆಲೆಯಲ್ಲಿ ಮೂರು ತಿಂಗಳ ಹಿಂದೆ ಉದ್ಘಾಟನೆಗೊಂಡಿರುವ ...

news

ಕಾಂಗ್ರೆಸ್ ಸರ್ಕಾರದಿಂದ ಜನತೆಗೆ ಭ್ರಮನಿರಸನ- ಅನಂತಕುಮಾರ

ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ರಾಜ್ಯದಲ್ಲಿ ಕೊಲೆಗಳು ...

Widgets Magazine
Widgets Magazine