ಎಂ.ಬಿ.ಪಾಟೀಲ್ ವಿರುದ್ಧ ಪರೋಕ್ಷ ಟಾಂಗ್ ನೀಡಿದ ಜೆಡಿಎಸ್ ವರಿಷ್ಠ

ವಿಜಯಪುರ, ಗುರುವಾರ, 11 ಅಕ್ಟೋಬರ್ 2018 (19:51 IST)

ವಿಜಯಪುರ ಜಿಲ್ಲೆಯ ನೀರಾವರಿ ಅಭಿವೃದ್ಧಿ ಮಾಡುವಲ್ಲಿ ವಿಫಲವಾಗಿದೆ ಎಂದು ಮಾಜಿ ಸಚಿವ ಎಂ. ಬಿ. ಪಾಟೀಲ ವಿರುದ್ಧ ಪರೋಕ್ಷವಾಗಿ  ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಟೀಕೆ ಮಾಡಿದ್ದಾರೆ.
 
ನಾವು ಅಧಿಕಾರದಲ್ಲಿ ಇದ್ದಾಗ ವಿಜಯಪುರ ಜಿಲ್ಲೆಯ ನೀರಾವರಿಗಾಗಿ ಕೋಟ್ಯಾಂತರ ಹಣ ಬಿಡುಗಡೆ ಮಾಡಿದ್ದೇವೆ.  ಅಲ್ಲದೆ ಈಗ ಇಲ್ಲಿ ಇರುವ ಕಾಲುವೆಗಳು ಖಾಲಿ ಕಾಣುತ್ತಿವೆ ಇದು ನೋವಿನ ಸಂಗತಿಯಾಗಿದೆ ಎಂದರು. ಈ
ಹಿಂದೆ ಸರಕಾರ ನೀರಾವರಿಗಾಗಿ ಕೋಟ್ಯಂತರ ಹಣ ಬಿಡುಗಡೆ ಮಾಡಿದ್ದರೂ ಕಾಮಗಾರಿ ಸಂಪೂರ್ಣ ಆಗಿದ್ದರ ಬಗ್ಗೆ ಕಾಣುತ್ತಿಲ್ಲ, ಕಾಲುವೆ ನೀರು ಕಾಣುತ್ತಿಲ್ಲ ಎಂದರು.
 
ಬರದ ನಾಡಿಗೆ ನೀರು ಅವಶ್ಯಕತೆ ಇದೆ. ಈಗಿರುವ ನೀರಾವರಿ ಸಚಿವರು ಕೂಡಾ ವಿಜಯಪುರ ಜಿಲ್ಲೆಯ ನೀರಾವರಿ ಗಾಗಿ  ಶ್ರಮಿಸಬೇಕು ಎಂದರು.    
 
ಉಪಚುಣಾವಣೆಯಲ್ಲಿ ನಾವು ಒಗ್ಗಟ್ಟಿನಿಂದ ಇರುತ್ತೇವೆ. ಅಷ್ಟೆ ಅಲ್ಲದೆ ಎಲ್ಲಾ ಸ್ಥಾನಗಳಲ್ಲಿಯೂ ಗೆಲ್ಲುತ್ತೇವೆ ಎಂದರು.  
ಮುಳವಾಡ ಏತ ನೀರಾವರಿ, ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆ ಮಾಡುವಲ್ಲಿ ನನ್ನ ಪಾತ್ರ ಇದೆ ಎಂದು ಹೆಚ್.ಡಿ.ದೇವೇಗೌಡರು ಹೇಳಿದರು.

 

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಶಬರಿಮಲೆ ಉಳಿಸಿ: ಪ್ರತಿಭಟನೆ

ಕೇರಳದ ಶಬರಿಮಲೈನಲ್ಲಿನ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಬೇಕೆಂಬ ನ್ಯಾಯಾಲಯದ ...

news

ಮಾಲೀಕಯ್ಯ ಗುತ್ತೇದಾರ್ ಕ್ಷೇತ್ರದಲ್ಲಿ ಸಚಿವ ಪ್ರಿಯಾಂಕಗೆ ಅದ್ಧೂರಿ ಸನ್ಮಾನ

ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಮೊದಲ‌ ಬಾರಿ ಅಫಜಲಪುರಕ್ಕೆ ಆಗಮಿಸಿರುವ ಸಚಿವ ಪ್ರಿಯಾಂಕ್ ...

news

ದೀಪಾವಳಿಗೆ ಬಡವರ ಬಂಧು ಯೋಜನೆ ಶುರು

ರಾಜ್ಯದಲ್ಲಿರುವ ಬೀದಿ ವ್ಯಾಪಾರಿಗಳಿಗೆ 'ಬಡವರ ಬಂಧು' ಮೂಲಕ ದೀಪಾವಳಿ ವೇಳೆ ಸಹಾಯಧನ ನೀಡಲಾಗುವುದು ಎಂದು ...

news

10 ವರ್ಷದಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನ

ಕಳೆದ 10 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಕೊನೆಗೂ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

Widgets Magazine