ಗುಂಡ್ಲುಪೇಟೆ ಕ್ಷೇತ್ರಕ್ಕೆ ಕನಕಪುರ ಗೂಂಡಾಗಳು ಬಂದಿದ್ದಾರೆ: ತೇಜಸ್ವಿನಿ ರಮೇಶ್

ಗುಂಡ್ಲುಪೇಟೆ, ಬುಧವಾರ, 5 ಏಪ್ರಿಲ್ 2017 (13:34 IST)

Widgets Magazine

ಗುಂಡ್ಲುಪೇಟೆ ಕ್ಷೇತ್ರಕ್ಕೆ ಗೂಂಡಾಗಳ ಆಗಮಿಸಿದ್ದು ಮಹಿಳೆಯರು ಹೆದರಿ ಮನೆಗಳಿಂದ ಹೊರಗೆ ಬಾರದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ನಾಯಕಿ ತೇಜಸ್ವಿನಿ ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.
 
ಉಪಚುನಾವಣೆ ಪ್ರಚಾರದಲ್ಲಿ ಆರೋಪ, ಪ್ರತ್ಯಾರೋಪಗಳ ಸುರಿಮಳೆಯಾಗುತ್ತಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಪರಸ್ಪರ ವಾಗ್ದಾಳಿಯಲ್ಲಿ ತೊಡಗಿದ್ದಾರೆ  
 
ಗೋವಿಂದರಾಜು ಡೈರಿಯಲ್ಲಿ ಉಲ್ಲೇಖವಾದ ಸಚಿವ ಯು.ಟಿ. ಖಾದರ್. ಎಂ.ಬಿ.ಪಾಟೀಲ್,ಡಿ.ಕೆ.ಶಿವಕುಮಾರ್, ಇಲ್ಲಿಯೇ ಠಿಕಾಣಿ ಹೂಡಿದ್ದಾರೆ. ಅಧಿಕಾರ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಸ್ತ್ರೀಶಕ್ತಿ ಸಹಾಯ ಸಂಘಗಳಿಗೆ ಹಣ ಹಂಚಲಾಗುತ್ತಿದೆ. ಕ್ಷೇತ್ರದಲ್ಲಿ ಬೀಡು ಬಿಟ್ಟಿರುವ ಪ್ರಭಾವಿ ಮುಖಂಡರನ್ನು ಹೊರಹಾಕಬೇಕು ಎಂದು ಗುಡುಗಿದ್ದಾರೆ. 
 
ಕಾಂಗ್ರೆಸ್ ಸೋಲಿನ ಹತಾಷೆಯಿಂದಾಗಿ ವಾಮಮಾರ್ಗ ಅನುಸರಿಸುತ್ತಿದೆ. ಬಿಜೆಪಿ ಹೆಣ್ಣುಮಕ್ಕಳು ವಾಸವಾಗಿರುವ ಮನೆಗಳನ್ನು ತಪಾಸಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
 
ಚುನಾವಣೆ ಪಾರದರ್ಶಖವಾಗಿ ನಡೆಯಲು ಕೇಂದ್ರ ಚುನಾವಣೆ ಆಯೋಗ ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿಗೊಳಿಸಬೇಕು ಎಂದು ಬಿಜೆಪಿ ನಾಯಕಿ ತೇಜಸ್ವಿನಿ ರಮೇಶ್ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪಾಕಿಸ್ತಾನ, ಸಿದ್ರಾಮಯ್ಯ ಮಾತ್ರ ಮೋದಿ ನಾಯಕತ್ವ ಒಪ್ಪಿಕೊಂಡಿಲ್ಲ: ಈಶ್ವರಪ್ಪ

ಮೈಸೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ನಾಯಕತ್ವವನ್ನು ಇಡೀ ವಿಶ್ವವೇ ಒಪ್ಪಿಕೊಂಡಿದೆ. ಆದರೆ, ಪಾಕಿಸ್ತಾನ, ...

news

ಗೋ ಸಾಗಣೆ ಮಾಡುತ್ತಿದ್ದಾಗ ಹಲ್ಲೆಗೊಳಗಾದ ವ್ಯಕ್ತಿ ಸಾವು

ರಾಜಸ್ಥಾನ: ಗೋ ಸಾಗಣಿಕೆ ಮಾಡುತ್ತಿದ್ದ ಮುಸ್ಲಿಂ ಸಮುದಾಯದ ವ್ಯಕ್ತಿಯ ಮೇಲೆ ಗೋ ರಕ್ಷಕರ ಗ್ಯಾಂಗ್ ಹಲ್ಲೆ ...

news

ಟ್ವಿಟ್ಟರ್`ನಲ್ಲಿ ಬೆಂಗಳೂರು ಯುವಕನನ್ನ ಫಾಲೋ ಮಾಡುತ್ತಿರುವ ಮೋದಿ.

ನರೇಂದ್ರಮೋದಿ ದೇಶದ ವಿವಿಧೆಡೆಯಿಂದ ಜನರು ಬರೆಯುವ ಪತ್ರಗಳಿಗೆ ಪ್ರತಿಕ್ರಿಯೆ ನೀಡುತ್ತಾರೆ. ಅವರ ...

news

ಗೋವಾದಲ್ಲಿ ಕನ್ನಡಿಗರಿಗೆ ರಕ್ಷಣೆ ಕೊಡಿ: ಪರಿಕ್ಕರ್`ಗೆ ಪರಮೇಶ್ವರ್ ಆಗ್ರಹ

ಗೋವಾದಲ್ಲಿರುವ ಕನ್ನಡಿಗರ ರಕ್ಷಣೆಗೆ ಗೋವಾ ಸಿಎಂ ಮನೋಹರ್ ಪಿಕ್ಕರ್ ಕ್ರಮ ಕೈಗೊಳ್ಳಬೇಕೆಂದು ಗೃಹ ಸಚಿವ ...

Widgets Magazine Widgets Magazine