ಕರ್ನಾಟಕ- ಆಂಧ್ರ ಗಡಿಯಲ್ಲಿ ಆನೆ ಹಾವಳಿಗೆ ಜನ ತತ್ತರ

ಕೋಲಾರ, ಸೋಮವಾರ, 14 ಜನವರಿ 2019 (12:13 IST)

ಕಾಡಾನೆಗಳ ಹಿಂಡು ದಾಳಿ ನಡೆಸಿ ಮಾಡುತ್ತಿರುವುದರಿಂದ ಕರ್ನಾಟಕ – ಆಂಧ್ರಪ್ರದೇಶ ಗಡಿ ಭಾಗದ ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ.  

ಕೋಲಾರ ಜಿಲ್ಲೆ ಹಾಗೂ ಆಂಧ್ರಪ್ರದೇಶದ ಗಡಿ ಭಾಗದಲ್ಲಿ ಕಾಡಾನೆಗಳ ಹಿಂಡು ಕಾಣಿಸಿಕೊಂಡಿದೆ.  ಕರ್ನಾಟಕ ಹಾಗೂ ಅಂಧ್ರ ಗಡಿ ಭಾಗದ ಅರಣ್ಯದಲ್ಲಿ ಬೀಡುಬಿಟ್ಟಿರುವ ಗಜಪಡೆಯಿಂದಾಗಿ ಅಲ್ಲಿನ ಜನರು ನೆಮ್ಮದಿ ಕಳೆದುಕೊಳ್ಳುವಂತಾಗಿದೆ.
 50ಕ್ಕೂ ಹೆಚ್ಚು ಕಾಡಾನೆಗಳು ಎರಡು ಗುಂಪುಗಳಾಗಿ ವಿಂಗಡಣೆಯಾಗಿವೆ.  ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ  ಆಂಧ್ರದ ಗುಡಿಪಲ್ಲಿ ಮಂಡಲಂನಲ್ಲಿರುವ ಕಾಡಾನೆಗಳು ಬೆಳೆ ನಾಶಪಡಿಸುತ್ತಲೇ ಇವೆ.

ಆನೆಗಳು ಲಗ್ಗೆಯಿಟ್ಟ ಹಿನ್ನಲೆ ಬಂಗಾರಪೇಟೆ ಗಡಿ ಭಾಗದ ಗ್ರಾಮಸ್ಥರಿಗೂ ಶುರುವಾಗಿದೆ. ಎರಡು ವಾರಗಳಿಂದ ಬೆಳೆಗಳನ್ನ ನಾಶ ಮಾಡುತ್ತಿರುವ ಕಾಡಾನೆಗಳು ಜನರಲ್ಲಿ ಆತಂಕಕ್ಕೆ ಕಾರಣವಾಗಿವೆ.

ತಮಿಳುನಾಡಿನ ಅರಣ್ಯಕ್ಕೆ ಕಾಡಾನೆಗಳನ್ನ ಓಡಿಸಲು ಆಂಧ್ರ ಹಾಗೂ ಕೋಲಾರ ಜಿಲ್ಲೆಯ ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಇನ್ಮುಂದೆ 5-8ನೇ ತರಗತಿಯ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಸ್ ಆದರೆ ಮಾತ್ರ ಮುಂದಿನ ತರಗತಿಗೆ ತೇರ್ಗಡೆ-ಕೇಂದ್ರ ಸರ್ಕಾರ

ನವದೆಹಲಿ : ಒಂದನೇ ತರಗತಿಯಿಂದ ಎಂಟನೇ ತರಗತಿವರೆಗೆ ಮಕ್ಕಳನ್ನು ಫೇಲ್ ಮಾಡಬಾರದು ಎಂಬ 2009ರಲ್ಲಿ ಯುಪಿಎ ...

news

ಕಾರು ಡಿಕ್ಕಿಯಾಗಿ ಜಿಂಕೆ ಸಾವು: ಕಳಚಿದ ಲೋಗೋದಿಂದ ಸಿಕ್ಕ ಸುಳಿವು

ರಸ್ತೆ ದಾಟುತ್ತಿದ್ದ ಜಿಂಕೆಗೆ ಬೆಂಜ್ ಕಾರೊಂದು ಡಿಕ್ಕಿಯಾಗಿ ಪರಾರಿಯಾಗಿರುವ ಘಟನೆ ತಡರಾತ್ರಿ ನಡೆದಿದೆ.

news

ಮೋದಿಯ ಸ್ವಚ್ಛತೆಯ ಪಾಠ ಮಾಡಿದ ಬಿ.ಎಸ್.ಪಿ ಶಾಸಕ!

ಪ್ರಧಾನಿ ನರೇಂದ್ರ ಮೋದಿಯವರ ಹಾದಿಯನ್ನು ರಾಜ್ಯದ ಏಕೈಕ ಬಿ.ಎಸ್.ಪಿ. ಶಾಸಕರು ಹಿಡಿದಿದ್ದಾರಾ? ಇಂತಹದ್ದೊಂದು ...

news

ಸಂಕ್ರಾಂತಿ ನಂತರ ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಾರಾ ಶಾಸಕ ಡಾ. ಉಮೇಶ್ ಜಾಧವ್?

ಬೆಂಗಳೂರು : ಸಚಿವ ಸ್ಥಾನ ಸಿಗದ ಕಾರಣ ಮುನಿಸಿಕೊಂಡಿರುವ ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ. ಉಮೇಶ್ ...