Widgets Magazine
Widgets Magazine

ವಿವಾದಕ್ಕೆಡೆ ಮಾಡಿರುವ ಕರ್ನಾಟಕ ಬಂದ್ ದಿನಾಂಕ!

ಬೆಂಗಳೂರು, ಮಂಗಳವಾರ, 23 ಜನವರಿ 2018 (09:01 IST)

Widgets Magazine

ಬೆಂಗಳೂರು: ಮಹದಾಯಿ ನದಿ ನೀರಿಗಾಗಿ ಫೆಬ್ರವರಿ 4 ರಂದು ವಿವಿಧ ಸಂಘಟನೆಗಳು ಬಂದ್ ಗೆ ಕರೆ ನೀಡಿರುವುದು ಇದೀಗ ಆಡಳಿತಾರೂಢ ಕಾಂಗ್ರೆಸ್ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
 

ಫೆಬ್ರವರಿ 4 ರಂದು ಬಿಜೆಪಿಯ ಕರ್ನಾಟಕ ಪರಿವರ್ತನಾ ರ್ಯಾಲಿಯ ಸಮಾರೋಪ ಸಮಾರಂಭ ಆಯೋಜಿಸಲಾಗಿದ್ದು, ಇದರಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಭಾಗಿಯಾಗಲಿದ್ದಾರೆ. ಇದೇ ದಿನ ಬಂದ್ ನಡೆಸಿರುವುದಕ್ಕೆ ಈಗ ಪ್ರತಿಪಕ್ಷ ಬಿಜೆಪಿ ಟೀಕಾಪ್ರಹಾರ ನಡೆಸಿದೆ.
 
ಪ್ರಧಾನಿ ಕಾರ್ಯಕ್ರಮಕ್ಕೆ ಬೇಕೆಂದೇ ಅಡ್ಡಿಪಡಿಸಲು ಕಾಂಗ್ರೆಸ್ ಕರ್ನಾಟಕ ಬಂದ್ ಗೆ ಬೆಂಬಲ ಸೂಚಿಸಿದೆ ಮತ್ತು ಅದೇ ದಿನ ಬಂದ್ ನಡೆಸಲು ಕುಮ್ಮಕ್ಕು ನೀಡಿದೆ ಎಂಬ ಆರೋಪ ಮಾಡಿದೆ. ಹೀಗಾಗಿ ಇದೀಗ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ಅತ್ತ ಪ್ರಧಾನಿ ಕಾರ್ಯಕ್ರಮಕ್ಕೆ ಯಾವುದೇ ತೊಂದರೆಯಿಲ್ಲದಂತೆ ನೋಡಿಕೊಳ್ಳುವ ಅನಿವಾರ್ಯತೆಗೆ ಸರ್ಕಾರ ಸಿಲುಕಿದೆ. ಅಷ್ಟೇ ಅಲ್ಲ, ಬಿಜೆಪಿ ಯಾತ್ರೆಗೆ ತೊಂದರೆ ನೀಡುವುದಕ್ಕಾಗಿಯೇ ಕರ್ನಾಟಕ ಬಂದ್ ಗೆ ಬೆಂಬಲ ನೀಡುತ್ತಿದೆ ಎಂದು ಜನರ ಮನದಲ್ಲಿ ಭಾವನೆ ಮೂಡದಂತೆ ನೋಡಿಕೊಳ್ಳುವ ಅನಿವಾರ್ಯತೆ ಎದುರಾಗಿದೆ.
 
ಇದೀಗ ಉಭಯ ಪಕ್ಷಗಳ ನಡುವಿನ ಕೆಸರೆರಾಚಟಕ್ಕೆ ನಾಂದಿ ಹಾಡಿದೆ. ಇದೊಂದು ಹೇಸಿಗೆ ರಾಜಕಾರಣ ಎಂದು ಬಿಜೆಪಿ ಆರೋಪಿಸಿದರೆ, ಅತ್ತ ಸಿಎಂ ಸಿದ್ದರಾಮಯ್ಯ, ಹೀಗೊಂದು ಆರೋಪ ಮಾಡುವವರಿಗೆ ಕನಿಷ್ಠ ಸಾಮಾನ್ಯ ಜ್ಞಾನವೂ ಇಲ್ಲ ಎಂದು ತಿರುಗೇಟು ನೀಡಿದ್ದಾರೆ. ಅಂತೂ ಯಾವ ಉದ್ದೇಶಕ್ಕಾಗಿ ಬಂದ್ ಗೆ ಕರೆ ನೀಡಲಾಗಿದೆಯೋ ಅದನ್ನು ಮರೆತು ರಾಜಕೀಯ ಪಕ್ಷಗಳು ತಮ್ಮ ಕೆಸರೆರಾಚಟದಲ್ಲಿ ತೊಡಗಿರುವುದು ಮಾತ್ರ ವಿಪರ್ಯಾಸ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಸುಪ್ರೀಂ ನಲ್ಲಿ ಇಂದು 'ಪದ್ಮಾವತ್' ವಿಚಾರಣೆ

ನವದೆಹಲಿ: ‘ಪದ್ಮಾವತ್‌’ ಚಿತ್ರ ಬಿಡುಗಡೆಗೆ ಇದೇ 25ರಂದು ನೀಡಿದ್ದ ಆದೇಶ ವಾಪಸ್‌ ಪಡೆಯುವಂತೆ ಕೋರಿ ...

news

ರಾಜಕೀಯ ಪಕ್ಷಗಳ ವಿರುದ್ಧ ಸಾಹಿತಿ ದೇವನೂರು ಮಹಾದೇವ ಗರಂ

ದಾವಣಗೆರೆ : ಸಾಹಿತಿ ದೇವನೂರು ಮಹದೇವ್ ಅವರು ಪ್ರಧಾನಿ ಮೋದಿ ಹಾಗು ಕಾಂಗ್ರೆಸ್ ಪಕ್ಷದವರು ...

news

ಗಣರಾಜ್ಯೋತ್ಸವ ದಿನಕ್ಕೆ ಈ ಬಾರಿ ಬರಲಿದ್ದಾರೆ ಏಷಿಯಾನ್ ನಾಯಕರು!

ನವದೆಹಲಿ: 69 ನೇ ಗಣರಾಜ್ಯೋತ್ಸವಕ್ಕೆ ಪ್ರತಿ ವರ್ಷ ಸ್ನೇಹ ರಾಷ್ಟ್ರದ ನಾಯಕರೊಬ್ಬರು ಮುಖ್ಯ ಅತಿಥಿಗಳಾಗಿ ...

news

ಗಣರಾಜ್ಯೋತ್ಸವ ಹಿನ್ನೆಲೆ: ದೆಹಲಿಯಲ್ಲಿ ಬಿಗಿ ಭದ್ರತೆ

ನವದೆಹಲಿ: ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬಿಗಿ ಭದ್ರತೆಯನ್ನು ...

Widgets Magazine Widgets Magazine Widgets Magazine