ಕರ್ನಾಟಕ ಚುನಾವಣೆ: ಮತದಾನ ಜನರಿಗೆ ತಂದ ಸಂಕಟವೇನು ಗೊತ್ತಾ?!

ಬೆಂಗಳೂರು, ಶುಕ್ರವಾರ, 11 ಮೇ 2018 (08:00 IST)

ಬೆಂಗಳೂರು: ಮೇ 12 ರಂದು ಅಂದರೆ ಶನಿವಾರ ಕರ್ನಾಟಕ ವಿಧಾನಸಭೆ ಚುನಾವಣೆ ದಿನವಾಗಿರುವುದರಿಂದ ಬೆಂಗಳೂರಿನಲ್ಲಿ ಇಂದು ರಶ್ಶೋ ರಶ್ಶು!
 
ಶನಿವಾರ ಮತದಾನ ಮಾಡಲು ಊರಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿರುವುದರಿಂದ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಿದೆ. ಮೆಜೆಸ್ಟಿಕ್ ತೆರಳುವ ಪ್ರಯಾಣಿಕರು ಹೆಚ್ಚಾಗಿರುವುದರಿಂದ ಇಂದು ನಾಳೆ ಇದೇ ಸಮಸ್ಯೆ ಗ್ಯಾರಂಟಿ. ಇದೂ ಸಾಲದೆಂಬಂತೆ ನಿನ್ನೆ ರಾತ್ರಿ ನಗರದಾದ್ಯಂತ ಮಿಂಚು ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಟ್ರಾಫಿಕ್ ಸಮಸ್ಯೆ ಮುಗಿಲು ಮುಟ್ಟಿತ್ತು.
 
ಇದಲ್ಲದೆ ಪಾನಪ್ರಿಯರೂ ಇಂದೇ ಮದ್ಯದಂಗಡಿ ಮುಂದೆ ಜಮಾಯಿಸಿದ್ದಾರೆ. ತಮ್ಮ ತಮ್ಮ ವಾಹನಗಳಲ್ಲಿ ಈ ವೀಕೆಂಡ್ ಕಳೆಯಲು ಬೇಕಾದಷ್ಟು ಮದ್ಯ ಖರೀದಿಯಲ್ಲಿ ತೊಡಗಿರುವ ದೃಶ್ಯ ಸಾಮಾನ್ಯವಾಗಿತ್ತು. ಚುನಾವಣೆಯಾಗಿರುವುದರಿಂದ ಎರಡು ದಿನ ರಾಜ್ಯದಲ್ಲಿ ಮದ್ಯದಂಗಡಿಗಳಿಗೆ ಬೀಗ ಬೀಳಲಿದೆ. ಈ ಕಾರಣಕ್ಕೆ ಈ ಮುಂಜಾಗ್ರತೆ!
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಭಾಷಣ ಮಾಡುವಾಗ ತಪ್ಪು ಮಾಹಿತಿ ಕೊಟ್ಟರೇ ಪ್ರಧಾನಿ ಮೋದಿ?

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರ ಸಮಾವೇಶದಲ್ಲಿ ಮಾತನಾಡುವಾಗ ನೆಹರೂ ಕುಟುಂಬದ ಬಗ್ಗೆ ...

news

ಇಂದಿನಿಂದ ಮನೆ ಮನೆಗೆ ಬರಲಿದ್ದಾರೆ ಅಭ್ಯರ್ಥಿಗಳು!

ಬೆಂಗಳೂರು: ಮೇ 12 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಬಹಿರಂಗ ಪ್ರಚಾರದ ಅವಧಿ ನಿನ್ನೆಗೆ ...

news

ನ್ಯಾಯಮೂರ್ತಿಗೆ ಲಂಚ ನೀಡಲು 160 ಕೋಟಿ ರೂ. ಡೀಲ್ ಕುದುರಿಸಿದರೇ ಬಿ ಶ್ರೀರಾಮುಲು?!

ಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಜನಾರ್ಧನ ರೆಡ್ಡಿಯವರನ್ನು ಹೊರತರಲು ...

news

ಮೈಸೂರು: ಅಭ್ಯರ್ಥಿಯನ್ನೇ ಥಳಿಸಿದ ಅಪರಿಚಿತ ವ್ಯಕ್ತಿಗಳು

ಕೆ.ಆರ್.ನಗರ ತಾಲೂಕಿನ ಲಾಲನಹಳ್ಳಿ ಗ್ರಾಮದಲ್ಲಿ ಪಕ್ಷೇತರ ಅಭ್ಯರ್ಥಿಯಾದ ಹೊಸಹಳ್ಳಿ ವೆಂಕಟೇಶ್ ಪ್ರಚಾರ ...

Widgets Magazine