ಕುಮಾರಸ್ವಾಮಿ ಸಿಎಂ ಆದ ನಂತ್ರ ಕೃಷಿಗೆ ಇಸ್ರೇಲ್ ತಂತ್ರಜ್ಞಾನ: ದೇವೇಗೌಡ

ಚಿತ್ರದುರ್ಗ, ಭಾನುವಾರ, 3 ಸೆಪ್ಟಂಬರ್ 2017 (17:58 IST)

Widgets Magazine

ಕುಮಾರಸ್ವಾಮಿ ಕೃಷಿ ಅಧ್ಯಯನಕ್ಕಾಗಿ ಇಸ್ರೇಲ್‌ಗೆ ತೆರಳಿದ್ದಾರೆ. ಮುಂದೆ ಸಿಎಂ ಆದ ಬಳಿಕ ರಾಜ್ಯದಲ್ಲಿ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಿದ್ದಾರೆ. ಎಂದು  ಮಾಜಿ ಪ್ರಧಾನಿ ಹೇಳಿದ್ದಾರೆ.
ಜಿಲ್ಲೆಯ ಚಳ್ಳೇಕೇರಿ ತಾಲೂಕಿನ ಪರಶುರಾಂಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೋಟಗಾರಿಕೆ ಕೃಷಿ ಹಾನಿಯ ಬಗ್ಗೆ ಅಧ್ಯಯನ ನಡೆಸುವಂತೆ ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದೆ. ಆದರೆ, ಸಿಎಂ ನನ್ನ ಪತ್ರಕ್ಕೆ ಉತ್ತರ ನೀಡುವ ಗೋಜಿಗೆ ಹೋಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 
 
ದೇಶದಲ್ಲಿ ನದಿಗಳ ಜೋಡಣೆ ಹೇಗೆ ಸಾಧ್ಯವಾಗುತ್ತದೆ? ನದಿಗಳ ಜೋಡಣೆಗೆ ಸಂವಿಧಾನ ತಿದ್ದುಪಡಿ ತರಬೇಕಾಗುತ್ತದೆ.ನದಿಗಳ ಜೋಡಣೆಗೆ ಎಲ್ಲಾ ರಾಜ್ಯಗಳು ಸಮ್ಮತಿ ಸೂಚಿಸಬೇಕಾಗುತ್ತದೆ. ನದಿಗಳ ಜೋಡಣೆ ನೋಡಲು ನಾನು ಇರುತ್ತೇನೆಯೋ ಇಲ್ಲವೋ ಗೊತ್ತಿಲ್ಲ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
 
ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರ ರೈತರ ಪರವಾಗಿ ಕೆಲಸ ಮಾಡುತ್ತಿಲ್ಲ. ಸರಕಾರಕ್ಕೆ ರೈತರ ಏಳಿಗೆ ಬೇಕಾಗಿಲ್ಲ. ಕೇವಲ ಅವರ ಓಟು ಮಾತ್ರ ಬೇಕಾಗಿದೆ ಎಂದು ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ವ್ಯಂಗ್ಯವಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಎಚ್.ಡಿ.ಕುಮಾರಸ್ವಾಮಿ ಎಚ್.ಡಿ.ದೇವೇಗೌಡ ಜೆಡಿಎಸ್ Jds Congress H.d.kumarswamy H.d.devegowda

Widgets Magazine

ಸುದ್ದಿಗಳು

news

ಉತ್ತರ ಕೊರಿಯಾದಿಂದ ಹೈಡ್ರೋಜನ್ ಬಾಂಬ್ ಪರೀಕ್ಷೆ

ಪೊಂಗ್‌ಯಾಂಗ್: ಉತ್ತರ ಕೊರಿಯಾ ಮತ್ತೆ ಉದ್ಧಟತನ ಮೆರೆದು ಇಂದು ಯಶಸ್ವಿಯಾಗಿ ಹೈಡ್ರೋಜನ್ ಬಾಂಬ್ ಪರೀಕ್ಷೆ ...

news

ರಾಜ್ಯದಲ್ಲಿ ಬಿಜೆಪಿ ಇನ್ನೂ 20 ವರ್ಷ ಅಧಿಕಾರಕ್ಕೆ ಬರಲ್ಲ: ವೀರಪ್ಪ ಮೊಯ್ಲಿ

ಬೆಂಗಳೂರು: ರಾಜ್ಯದ ಜನತೆ ಈಗಾಗಲೇ ಬಿಜೆಪಿಗೆ ಅಧಿಕಾರ ಕೊಟ್ಟು ನೋಡಿದ್ದಾರೆ. ಬಿಜೆಪಿ ದುರಾಡಳಿತದ ...

news

ಜಿ.ಪರಮೇಶ್ವರ್ ವಿರುದ್ಧ ಸಿಎಂ ಸಿದ್ದರಾಮಯ್ಯ ದೂರು

ಬೆಂಗಳೂರು: ಸಚಿವರ ಪ್ರತಿಜ್ಞಾವಿಧಿ ಸಮಾರಂಭಕ್ಕೆ ಗೈರುಹಾಜರಾಗಿರುವ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ...

news

ಜಿ.ಪರಮೇಶ್ವರ್ ವಿರುದ್ಧ ವೇಣುಗೋಪಾಲ್ ಅಸಮಾಧಾನ

ಬೆಂಗಳೂರು: ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಗೈರುಹಾಜರಾಗಿದ್ದ ಕೆಪಿಸಿಸಿ ಅಧ್ಯಕ್ಷ ...

Widgets Magazine