Widgets Magazine
Widgets Magazine

ಪ್ರೀತಿ ಭಾಷೆಯಲ್ಲಿ ಒಂದಾದ ಕಾರವಾರದ ಹುಡುಗ, ರಷ್ಯಾದ ಹುಡುಗಿ

ಕಾರವಾರ, ಬುಧವಾರ, 11 ಜನವರಿ 2017 (07:57 IST)

Widgets Magazine

ಅವರಿಬ್ಬರಿಗೂ ಮಾತು ಬರಲ್ಲ. ಕಿವಿಯೂ ಕೇಳಿಸಲ್ಲ. ದೇಶ ಬೇರೆ. ಸಂಪ್ರದಾಯ, ಸಂಸ್ಕೃತಿ ಬೇರೆ. ಆದರೆ ಅವರಿಬ್ಬರಲ್ಲಿ ಪ್ರೀತಿ ಮೂಡಲು ಇದ್ಯಾವುದೂ ಅಡ್ಡಿಯಾಗಲಿಲ್ಲ. ಇದು ಭಾರತದ ಮತ್ತು ರಷ್ಯಾದ ಯುವತಿಯ ಸುಂದರ ಪ್ರೇಮ ಕಥೆ.


 
ಉತ್ತರಕನ್ನಡದ ಜಿಲ್ಲಾ ಕೇಂದ್ರ ಕಾರವಾರದ ನಂದನಗದ್ದಾದ ಯುವಕ ಮೆಲ್ವಿನ್ ಬ್ರಿಟೋ ರುಜಾರಿಯಾ(28) ರಷ್ಯಾದ ಒಲೇಗ್ ಬುಷ್ಮಾಗಿಯಾ ಎಂಬ 20 ವರ್ಷದ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದಾರೆ,
 
ಸದಾಶಿವಗಡದ ಕಲ್ಯಾಣ ಮಂಟಪದಲ್ಲಿ ಎರಡು ಕಡೆಯ ಬಂಧುಬಾಂಧವರ ಸಮ್ಮುಖದಲ್ಲಿ ಇಬ್ಬರ ವಿವಾಹ ಸಂಪನ್ನವಾಯಿತು.
ಜಿಲ್ಲಾ ನೋಂದಣಾಧಿಕಾರಿ ಕಚೇರಿಯಲ್ಲಿ ಕೂಡ ಇವರ ವಿವಾಹ ನೋಂದಣಿಯಾಗಿದೆ.
 
ಹುಟ್ಟಿನಿಂದ ಮೂಕ-ಕಿವುಡರಾಗಿರುವ ಮೆಲ್ವಿನ್,  ಬೆಂಗಳೂರಿನ ಕಿವುಡ-ಮೂಕ ಶಾಲೆಯಲ್ಲಿ ಐಟಿಐ ಓದಿದ್ದರು. ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಒಲೇಗ್ ಪರಿಚಯವಾಗಿತ್ತು. ಬಳಿಕ ಅದು ಪ್ರೇಮಕ್ಕೆ ತಿರುಗಿತು.
 
ಮತ್ತೀಗ ಎರಡು ಕಡೆ ಪೋಷಕರ ಒಪ್ಪಿಗೆಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಗುರುಗಳಿಗಾಗಿ ಪರಿತಪಿಸುತ್ತಾ ಪ್ರಾಣ ಬಿಟ್ಟ ಗೌರಿಶಂಕರ ಸ್ವಾಮೀಜಿ

ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಯವರ ಮಾಜಿ ಶಿಷ್ಯ ಅನಾರೋಗ್ಯದಿಂದ ಬಳಲುತ್ತಿದ್ದ ಗೌರಿಶಂಕರ ...

news

70 ವರ್ಷಗಳಲ್ಲಿ ಇಂತಹ ಆರ್ಥಿಕ ದಿವಾಳಿಯಾಗಿರಲಿಲ್ಲ: ಪ್ರಧಾನಿ ಮೋದಿ ವಿರುದ್ಧ ಪರಮೇಶ್ವರ್ ವಾಗ್ದಾಳಿ

ನೋಟು ನಿಷೇಧದಿಂದ ದೇಶದ ಆರ್ಥಿಕತೆ ಬುಡಮೇಲಾಗಿದೆ. ಸ್ವಾತಂತ್ರ್ಯ ಬಂದು 70 ವರ್ಷಗಳ ಅವಧಿಯಲ್ಲಿ ಇಂತಹ ...

news

ಬಿಜೆಪಿಯಿಂದ ಹೊರಹಾಕುವ ತಾಕತ್ತು ಯಾರಿಗೂ ಇಲ್ಲ: ಯಡಿಯೂರಪ್ಪಗೆ ಈಶ್ವರಪ್ಪ ಬಹಿರಂಗ ಸವಾಲ್

ಯಾವುದೇ ಕಾರಣಕ್ಕೂ ನನ್ನನ್ನು ಬಿಜೆಪಿ ಪಕ್ಷದಿಂದ ಹೊರ ಹಾಕಲ್ಲ. ನನಗೆ ನೋಟಿಸ್ ನೀಡಲು ಸಹ ಯಾರಿಂದಲೂ ...

news

ಮತ್ತೊಬ್ಬ ಶಾಸಕನಿಂದ ಅಧಿಕಾರಿಗೆ ಧಮ್ಕಿ: ಇದೇನು ಗುಂಡಾರಾಜ್ಯವೇ?

ವೈದ್ಯರ ಮೇಲೆ ಸಂಸದ ಅನಂತ್ ಕುಮಾರ್ ಹೆಗಡೆ ನಡೆಸಿದ ಹಲ್ಲೆ ಪ್ರಕರಣ ಹಾಗೂ ಶಾಸಕ ರಾಜು ಕಾಗೆ ಪುತ್ರಿಯ ...

Widgets Magazine Widgets Magazine Widgets Magazine