ಸಾಲಮನ್ನಾ: ರೈತರಿಗೆ ಋಣಮುಕ್ತ ಪತ್ರ ವಿತರಿಸಿದ ಸಚಿವರು..!

ಕಲಬುರಗಿ, ಶನಿವಾರ, 8 ಡಿಸೆಂಬರ್ 2018 (14:59 IST)

ರಾಜ್ಯ ಸಮ್ಮಿಶ್ರ ಸರ್ಕಾರ ಘೋಷಿಸಿದ್ದ ರೈತರ ಸಾಲಮನ್ನಾ ಯೋಜನೆಯಡಿ ರೈತರಿಗೆ ವಿತರಣೆ ಮಾಡಲಾಯಿತು.

ರೈತರ ಸಾಲಮನ್ನಾ ಮೊದಲ ಹಂತವಾಗಿ 50 ಸಾವಿರ ರೂಪಾಯಿಯವರೆಗೂ ಸಾಲ ಮನ್ನಾ ಋಣಮುಕ್ತ ಪತ್ರ ವಿತರಣೆಗೆ ಚಾಲನೆ ನೀಡಲಾಗಿದೆ.

ಅರ್ಹ ಫಲಾನುಭವಿ ರೈತರಿಗೆ ಋಣಮುಕ್ತ ಪತ್ರವನ್ನು ಸಚಿವರಾದ ಪ್ರಿಯಾಂಕ್ ಖರ್ಗೆ ಮತ್ತು ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ವಿತರಣೆ ಮಾಡಿದರು.

ಸಹಕಾರಿ ಬ್ಯಾಂಕ್‌ಗಳಲ್ಲಿ ಸಾಲ ಪಡೆದ 24 ರೈತರಿಗೆ ಋಣಮುಕ್ತ ಪತ್ರ ವಿತರಣೆ ಮಾಡಿದರು.  ಪ್ರಾಯೋಗಿಕವಾಗಿ ಸಾಲಮನ್ನಾವನ್ನು ರಾಜ್ಯದ ಎರಡು ತಾಲೂಕುಗಳಲ್ಲಿ ಜಾರಿಗೆ ತರಲಾಗಿತ್ತು.

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕು ಹಾಗೂ ದೊಡ್ಡಬಳ್ಳಾಪುರ ತಾಲೂಕು ಆಯ್ಕೆ ಮಾಡಿಕೊಳ್ಳಲಾಗಿತ್ತು. ಸೇಡಂ ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ರೈತರ ಸಾಲಮನ್ನಾ ಋಣಮುಕ್ತ ಪತ್ರ ವಿತರಣೆ ಕಾರ್ಯಕ್ರಮ ನಡೆಯಿತು.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರತ್ಯೇಕ ಧ್ವಜ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಮತ್ತೆ ಮೊಳಗಿದ್ಯಾಕೆ?

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹಾಗೂ ಪ್ರತ್ಯೇಕ ಧ್ವಜಾರೋಹಣಕ್ಕಾಗಿ ಸಿದ್ಧತೆ ಸದ್ದಿಲ್ಲದೇ

news

ಬೆಳ್ಳಿ ರಥದ ಮೆರವಣಿಗೆಯಲ್ಲಿ ಕನ್ನಡ ಸಾಹಿತಿಯ ಮೆರವಣಿಗೆ..!

ಅಲ್ಲಿ ಎಲ್ಲೆಲ್ಲೂ ಕನ್ನಡದ ಬಾವುಟಗಳು ಹಾರಾಡುತ್ತಿದ್ದವು… ಕನ್ನಡ ಕಸ್ತೂರಿಯ ಕಂಪು ಎಲ್ಲೆಡೆ ಮನೆಮಾಡಿತ್ತು… ...

news

ಅಂಬಿ ಹುಟ್ಟೂರಿಗೆ ಭೇಟಿಗೆ ಮುನ್ನ ಮನೆ ದೇವರ ದರ್ಶನ ಪಡೆದ ಸುಮಲತಾ

ದಿವಂಗತ ಅಂಬರೀಶ್ ಹುಟ್ಟೂರಿಗೆ ಭೇಟಿಗೆ ಮುನ್ನ ಮನೆ ದೇವರ ದರ್ಶನವನ್ನು ಸುಮಲತಾ ಪಡೆದುಕೊಂಡರು.

news

ಡಿಸ್ನಿಲ್ಯಾಂಡ್ ನಿರ್ಮಾಣ ಸ್ಥಳ ಪರಿಶೀಲಿಸಿದ ಸಚಿವರು, ಸ್ಥಳೀಯ ಶಾಸಕ ಗೈರಾಗಿದ್ದೇಕೆ?

ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಕೆಆರ್ ಎಸ್ ಅಭಿವೃದ್ಧಿಗೆ ಸರಕಾರ ಚಿಂತನೆ ನಡೆಸಿದ್ದು, ಅದಕ್ಕೆ ಪೂರಕವಾಗಿ ...

Widgets Magazine