ಹುಬ್ಬಳ್ಳಿಯಲ್ಲಿ ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ನಾಲ್ವರ ರಕ್ಷಣೆ

ಹುಬ್ಬಳ್ಳಿ, ಬುಧವಾರ, 13 ಸೆಪ್ಟಂಬರ್ 2017 (14:56 IST)

ಹುಬ್ಬಳ್ಳಿ: ಹಳ್ಳದಲ್ಲಿ‌ಕೊಚ್ಚಿ ಹೋಗುತ್ತಿದ್ದ ನಾಲ್ವರನ್ನು ಸ್ಥಳೀಯರೇ ರಕ್ಷಿಸಿರುವ ಘಟನೆ ನವಲಗುಂದ ತಾಲೂಕಿನ ಶಿರೂರು ಮತ್ತು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇನಾಮಹೊಂಗಲ್ ಗ್ರಾಮದ ಮಧ್ಯೆ ನಡೆದಿದೆ.


ಭಾರೀ ಮಳೆಯಿಂದಾಗಿ ಕಲ್ಲಾಳ ಹಳ್ಳ  ಮತ್ತು ತುಪರಿ ಹಳ್ಳಿಗಳಿಂದ ಹೆಚ್ಚಾಗಿದೆ. ಸಂಜೆಯಾಗುತ್ತಿದ್ದಂತೆ ಹಳ್ಳದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಅದರ ಪರಿವೇ ಇಲ್ಲದೆ ಇಬ್ಬರು ಚಾಲಕರು ಎರಡು ಆಟೋಗಳನ್ನ ಹಳ್ಳ ದಾಟಿಸುವ ಯತ್ನ ಮಾಡಿದ್ದಾರೆ. ಆದಷ್ಟು ಬೇಗನೆ ಶಿರೂರು ಗ್ರಾಮ ತಲುಪುವ ಧಾವಂತದಲ್ಲಿದ್ದರು. ಆಟೋ ಚಾಲಕ ಮುಕ್ತುಂ, ಹನುಮಂತ ಲಕ್ಕಣ್ಣನವರ ಜತೆ ಇಬ್ಬರು ಪ್ರಯಾಣಿಕರ ಜತೆ ಹಳ್ಳದ ಮಧ್ಯೆ ಬರುತ್ತಿದ್ದಂತೆ ಪ್ರವಾಹ ಹೆಚ್ಚಾಗಿದೆ. ನೀರಿನ ರಭಸಕ್ಕೆ ಎರಡು ಆಟೋಗಳು ಕೊಚ್ಚಿ ಹೋಗಿವೆ.

ಇಬ್ಬರು ಚಾಲಕರು ಈಜಿ ದಡ ಸೇರಿದ್ದು, ಉಳಿದಿಬ್ಬರು ನೀರಿನಲ್ಲಿ ಕೊಚ್ಚಿಹೋಗಿ ಹೈಟೆನ್ಷನ್ ಕಂಬವೇರಿದ್ದರಾರೆ. ಸವದತ್ತಿ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿದರೂ, ಪ್ರವಾಹದ ಮಧ್ಯೆ ಅವರನ್ನು ಹೊರ ತರುವುದು ಕಷ್ಟವಾಗಿತ್ತು. ಒಂದು ಗಂಟೆ ಬಳಕ ಪ್ರವಾಹ ಇಳಿಯುತ್ತಿದ್ದಂತೆಯೇ ಗ್ರಾಮದ ಇಪ್ಪತ್ತರಿಂದ ಮೂವತ್ತು ಯುವಕರು ರಕ್ಷಣಾ ಕಾರ್ಯಕ್ಕೆ ಸಹಕರಿಸಿದ್ದು, ವಿದ್ಯುತ್ ಕಂಬವೇರಿದ್ದ ಸಂತೋಷ ಚಚಡಿ, ಆನಂದ ಚಚಡಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  
ಹುಬ್ಬಳ್ಳಿ ಸವದತ್ತಿ ರಕ್ಷಣೆ ಪ್ರವಾಹ Hubballi Rain

ಸುದ್ದಿಗಳು

news

ಜಾರಿ ನಿರ್ದೇಶನಾಲಯದಿಂದ ಕರೆ ಬಂದಿದ್ದು ನಿಜ: ಡಿ.ಕೆ. ಶಿವಕುಮಾರ್

ಜಾರಿ ನಿರ್ದೇಶನಾಲಯದಿಂದ ಕರೆ ಬಂದಿದ್ದು ನಿಜ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಕರೆ ...

news

ಸಚಿವ ಮಹದೇವಪ್ಪ ಪುತ್ರ ಸುನೀಲ್ ಬೋಸ್ ಗೆ ಮತ್ತೆ ಸಂಕಷ್ಟ

ಮೈಸೂರು: ಮರಳು ಸಾಗಾಣಿಕೆಗೆ ಅಕ್ರಮ ಲಂಚ ಸ್ವೀಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಮಹದೇವಪ್ಪ ಪುತ್ರ ...

news

ಯುವತಿಯ ಮೇಲೆ ಅತ್ಯಾಚಾರವೆಸಗಿದ ಬಿಜೆಪಿ ಕಾರ್ಪೋರೇಟರ್ ಅರೆಸ್ಟ್

ಮುಂಬೈ: ಠಾಣೆ ಪ್ರದೇಶದಲ್ಲಿ ವಾಸಿಸುತ್ತಿದ್ದ ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ ಆರೋಪದ ಹಿನ್ನೆಲೆಯಲ್ಲಿ ...

news

ಸಿಎಂ ಸಿದ್ದರಾಮಯ್ಯರಲ್ಲಿ ರಾಕ್ಷಸ, ರಾವಣ, ಕೌರವ, ಕಂಸನ ಗುಣಗಳಿವೆ: ಕಲ್ಲಡ್ಕ ಪ್ರಭಾಕರ್

ದಕ್ಷಿಣ ಕನ್ನಡ: ಸಿಎಂ ಸಿದ್ದರಾಮಯ್ಯರಲ್ಲಿ ರಾವಣ, ಕೌರವ, ಕಂಸನಿಗಿದ್ದ ರಾಕ್ಷಸಿಯ ಪ್ರವೃತ್ತಿಯಿದೆ ಎಂದು ...

Widgets Magazine