ಪ್ರೀತಿಸಿ ಮದುವೆಯಾಗಿ ಬಂದವಳ ಕೊಲೆಗೈದನಾ ಪ್ರಿಯತಮ!

ಬೆಳಗಾವಿ, ಭಾನುವಾರ, 12 ಆಗಸ್ಟ್ 2018 (15:38 IST)

ಮನೆ ಬಿಟ್ಟು ನಂಬಿ ಬಂದ ಯುವತಿ ಜತೆಗೆ ಸುಖ ಸಂಸಾರ ನಡೆಸಬೇಕಿದ್ದ ಕಿರಾತಕ ಪತಿ ತನ್ನ ಪತ್ನಿಯನ್ನೇ ಕತ್ತು ಹಿಸುಕಿ ಕೊಲೆ ಮಾಡಿರುವ ಘೋರ ಘಟನೆ ನಡೆದಿದೆ.
ಬೆಳಗಾವಿಯಲ್ಲಿ ಪ್ರೀತಿಸಿ ಕೈ ಹಿಡಿದು ಬಂದವಳನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ.

ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದ ಸುಮಾ ಅಬ್ಬಾರ (21) ಕೊಲೆಯಾದ ದುರ್ದೈವಿ. ಸುಮಾ ಪತಿ ಯುವರಾಜ ತನ್ನ ಕುಟುಂಬ ಸದಸ್ಯರ ಜತೆಗೆ ಸೇರಿಕೊಂಡು ತಡರಾತ್ರಿ ಸುಮಾಳ ಮೇಲೆ ಹಲ್ಲೆ ಮಾಡಿ, ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಘಟನೆ ಬಳಿಕ ಮನೆಯಲ್ಲೇ ಶವ ಬಿಟ್ಟು, ಸುಮಾಳ ಪತಿ ಯುವರಾಜ, ಮಾವ ಬಸಪ್ಪ ಅಬ್ಬಾರ, ಅತ್ತೆ ಮಹಾದೇವಿ ಅಬ್ಬಾರ, ಮೈದುನ ವೀರಣ್ಣ ಹಾಗೂ ಯಲ್ಲಪ್ಪ ಅಬ್ಬಾರ ಪರಾರಿಯಾಗಿದ್ದಾರೆ. ಹುಡುಗನ ಕುಟುಂಬ ಸದಸ್ಯರು ಸೇರಿಕೊಂಡೇ ನನ್ನ ಪುತ್ರಿಯನ್ನು ಕೊಲೆಗೈದಿದ್ದಾರೆ ಎಂದು ಸುಮಾಳ ಪಾಲಕರು ಆರೋಪಿಸುತ್ತಿದ್ದಾರೆ. ಕೆಲ ವರ್ಷಗಳಿಂದ ಸುಮಾ ಹಾಗೂ ಯುವರಾಜ ಪ್ರೀತಿಸುತ್ತಿದ್ದರು. ಈ ವಿಷಯ ಮನೆಯಲ್ಲಿ ಗೊತ್ತಾಗುತ್ತಿದ್ದಂತೆ ಉಭಯ ಕುಟುಂಬಸ್ಥರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಕುಟುಂಬಸ್ಥರ ವಿರೋಧದ ನಡುವೆಯೂ 8 ತಿಂಗಳ ಹಿಂದೆಯಷ್ಟೇ ಸುಮಾ ಮತ್ತು ಯುವರಾಜ ಬೈಲಹೊಂಗಲ ಸಬ್‌ರಿಜಿಸ್ಟರ್‌ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಿಕೊಂಡಿದ್ದರು. ಬಳಿಕ ಗ್ರಾಮಸ್ಥರ ಸಮ್ಮುಖದಲ್ಲಿ ಯುವರಾಜನ ಪಾಲಕರು ಈ ಜೋಡಿಯನ್ನು ಮನೆ ತುಂಬಿಸಿಕೊಂಡಿದ್ದರು.

ಆದರೆ ಯುವರಾಜ ತನ್ನ ಕುಟುಂಬ ಸದಸ್ಯರ ಮಾತು ಕೇಳಿ ಸುಮಾಳ ವಿರುದ್ಧ ತಿರುಗಿ ಬಿದ್ದು, ಈ ಕೃತ್ಯ ಎಸಗಿದ್ದಾನೆ ಎಂಬ ಆರೋಪವನ್ನು ಸುಮಾ ಪಾಲಕರು ಮಾಡುತ್ತಿದ್ದಾರೆ. ಈ ಕುರಿತು ದೊಡವಾಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕೆಲವೇ ಗಂಟೆಯಲ್ಲಿ ಆರೋಪಿ ಗಂಡ ಸೇರಿದಂತೆ ಆತನ ಮನೆಯವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.  

 
 
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಲಂಡನ್ ನಲ್ಲಿ ಚಿನ್ನದ ಟಾಯ್ಲೆಟ್ ಬಳಸುತ್ತಾರಂತೆ ವಿಜಯ್ ಮಲ್ಯ

ಮುಂಬೈ : ಭಾರತೀಯ ಬ್ಯಾಂಕ್ ಗಳಿಗೆ ಸುಮಾರು 9 ಸಾವಿರ ಕೋಟಿ ರೂ. ವಂಚಿಸಿ ದೇಶ ಬಿಟ್ಟಿರುವ ವಿಜಯ್ ಮಲ್ಯ ಅವರು ...

news

ಕೆ.ಆರ್.ಎಸ್ ಸಾರ್ವಜನಿಕರ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲು ಸಿಎಂ ಸೂಚನೆ

ಕೆ.ಆರ್.ಎಸ್. ಜಲಾಶಯ ವೀಕ್ಷಣೆಗೆ ಸಾರ್ವಜನಿಕರಿಗೂ ಅವಕಾಶ ಕಲ್ಪಿಸುವಂತೆ ಅಧಿಕಾರಿಗಳಿಗೆ ಸಿಎಂ ...

news

ಇಹಲೋಕ ತ್ಯಜಿಸಿದ ನೊಬೆಲ್ ಪ್ರಶಸ್ತಿ ವಿಜೇತ ವಿ.ಎಸ್.ನೈಪಾಲ್

ಲಂಡನ್ : ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಪುರಸ್ಕೃತ ಲೇಖಕ ಮತ್ತು ಕಾದಂಬರಿಕಾರ ವಿ.ಎಸ್.ನೈಪಾಲ್ (85) ಇಂದು ...

news

ಸಿಸಿಟಿವಿ ಜಖಂಗೊಳಿಸಿದ್ರು; ಸರಣಿ ಕಳ್ಳತನ ಮಾಡಿದ್ರು

ಸಿಸಿ ಟಿವಿ ಜಖಂಗೊಳಿಸಿ ಅಂಗಡಿಗಳ ಬಾಗಿಲು ಮುರಿದು ಕಳ್ಳತನ ಮಾಡಿರುವ ಘಟನೆ ನಡೆದಿದೆ.

Widgets Magazine