ಸಚಿವ ಸ್ಥಾನಕ್ಕೆ ಮಹೇಶ್ ರಾಜೀನಾಮೆ: ರೇವಣ್ಣ ಹೇಳಿದ್ದೇನು ಗೊತ್ತಾ?

ಹಾಸನ, ಶುಕ್ರವಾರ, 12 ಅಕ್ಟೋಬರ್ 2018 (11:29 IST)

ಶಿಕ್ಷಣ ಎನ್. ಮಹೇಶ್ ರಾಜೀನಾಮೆ‌ ನೀಡಿರುವ ಬಗ್ಗೆ ನನಗೆ ಮಾಹಿತಿಯಿಲ್ಲ. ಹೆಚ್.ಡಿ.ಕುಮಾರಸ್ವಾಮಿಗೆ ಬೆಂಬಲ‌ ನೀಡೋದಾಗಿ ಅವರೇ ಹೇಳಿದ್ದಾರೆ ಎಂದು ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದಾರೆ.
 
ಯಾರೂ ಗಾಬರಿಪಡಬೇಕಿಲ್ಲ ಎಂದಿರುವ ಅವರು, ಬೆಂಗಳೂರಿಗೆ ಹೋಗಿ ಮಾಹಿತಿ ತಿಳಿದು ಹೇಳುತ್ತೇನೆ. ಎನ್.ಮಹೇಶ್ ನೀಡಿರುವ ರಾಜೀನಾಮೆ ಅದು ಅವರ ಪಕ್ಷದ ತೀರ್ಮಾನ ಇರಬಹುದು. ಅವರು ನೀಡಿರುವ ರಾಜಿನಾಮೆಯನ್ನು ಸಿಎಂ ಅಂಗೀಕರಿಸುತ್ತಾರೋ ಅಥವಾ ಮಾಯಾವತಿ ಜೊತೆ ಮಾತನಾಡುತ್ತಾರೊ ಎನೋ ಗೊತ್ತಿಲ್ಲ ಎಂದರು.

ಮೊದಲಬಾರಿ‌ ಗೆದ್ದು ಸಚಿವರಾಗಿರುವ ಎನ್.ಮಹೇಶ್, ಒಳ್ಳೆಯ ರಾಜಕಾರಣಿಯಾಗಿದ್ದಾರೆ ಎಂದು ಹಾಸನದಲ್ಲಿ ‌ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಹೇಳಿಕೆ ನೀಡಿದ್ದಾರೆ.

ಅವರು ರಾಜೀನಾಮೆ ನೀಡಬಾರದು. ಸರಕಾರದಲ್ಲಿ ಮುಂದುವರೆಯಿರಿ ಎಂದು ನಾವು ಹೇಳುತ್ತೇವೆ. ಅವರು ಏಕೆ‌ ರಾಜೀನಾಮೆ ನೀಡಿದ್ದಾರೊ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಎನ್.ಮಹೇಶ್ ಪರ ಪುಟ್ಟರಂಗಶೆಟ್ಟಿ ಬ್ಯಾಟಿಂಗ್

ಸಚಿವಸ್ಥಾನಕ್ಕೆ ರಾಜೀನಾಮೆ ನೀಡಿರುವ ಎನ್. ಮಹೇಶ್ ಪರ ಪುಟ್ಟರಂಗಶೆಟ್ಟಿ ಬ್ಯಾಟಿಂಗ್ ಮಾಡಿದ್ದಾರೆ.

news

ಮರಗಮ್ಮ ದೇವಸ್ಥಾನ ಹತ್ತಿರ ಗಂಡು ಶಿಶು ಪತ್ತೆ

ನವಜಾತ ಗಂಡು ಶಿಶು ಪತ್ತೆಯಾಗಿರುವ ಘಟನೆ ಬಿಸಿಲೂರು ಖ್ಯಾತಿಯ ಜಿಲ್ಲೆಯಲ್ಲಿ ನಡೆದಿದೆ.

news

ಯೋಗ ದಸರಾಗೆ ಅದ್ಧೂರಿ ಚಾಲನೆ

ಮೈಸೂರು ದಸರಾ ಮಹೋತ್ಸವ 2018ರ ಅಂಗವಾಗಿ ಯೋಗ ದಸರಾಗೆ ಉಸ್ತುವಾರಿ ಸಚಿವ ಚಾಲನೆ ನೀಡಿದ್ದಾರೆ.

news

ಯುವತಿಯ ಕೈಕಾಲು ಕಟ್ಟಿ ಅತ್ಯಾಚಾರ ಎಸಗಿದ ಕಾಮುಕ

ಕಲಬುರಗಿ : ವ್ಯಕ್ತಿಯೊಬ್ಬ ಯುವತಿಯ ಮನೆಗೆ ನುಗ್ಗಿ ಆಕೆಯ ಕೈ ಕಾಲು ಕಟ್ಟಿ ಅತ್ಯಾಚಾರ ಎಸಗಿದ ಘಟನೆ ...

Widgets Magazine