ಪೆಂಟಾವಲೆಂಟ್ ಚುಚ್ಚುಮದ್ದು ನೀಡಿದ ಬಳಿಕ ಒಂದೂವರೆ ತಿಂಗಳ ಗಂಡು ಮಗು ದುರ್ಮರಣ

ಮಂಡ್ಯ, ಶನಿವಾರ, 8 ಡಿಸೆಂಬರ್ 2018 (10:05 IST)

: ಪೆಂಟಾವಲೆಂಟ್ ಚುಚ್ಚುಮದ್ದು ನೀಡಿದ ಬಳಿಕ ಒಂದೂವರೆ ತಿಂಗಳ ಗಂಡು ಮಗು ಸಾವನಪ್ಪಿದ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕಾಡುಕೊತ್ತನಹಳ್ಳಿ ಗ್ರಾಮದಲ್ಲಿ ನಡೆದಿದೆ.


ಜ್ಯೋತಿ ಮತ್ತು ಸ್ವಾಮಿ ದಂಪತಿಯ ಗಂಡು ಮಗುವಿಗೆ ಗುರುವಾರ ಕಾಡುಕೊತ್ತನಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚುಚ್ಚುಮದ್ದು ಕೊಡಿಸಲಾಗಿತ್ತು. ಚುಚ್ಚುಮದ್ದು ಕೊಡಿಸಿದ ನಂತರ ಅಸ್ವಸ್ಥಗೊಂಡಿದ್ದ ಮಗು ಶುಕ್ರವಾರ ಬೆಳಗ್ಗೆ ಮೃತಪಟ್ಟಿದೆ. ಭಾನುವಾರ ಮೃತ ಮಗುವಿನ ನಾಮಕರಣ ಕಾರ್ಯ ಹಮ್ಮಿಕೊಳ್ಳಲಾಗಿದ್ದು, ಇದೀಗ. ಮಗುವನ್ನು ಕಳೆದುಕೊಂಡು ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.


ಪೋಷಕರು ಮಗು ಪೆಂಟಾವಲೆಂಟ್ ಚುಚ್ಚುಮದ್ದು ನೀಡಿದ್ದರಿಂದ ಸಾವನಪ್ಪಿದೆ ಎಂದು ಅರೋಪಿಸಿ ಮಗು ಸಾವಿಗೆ ತನಿಖೆ ನಡೆಸುವಂತೆ ಪೋಷಕರು ಒತ್ತಾಯಿಸುತ್ತಿದ್ದಾರೆ. ಆದರೆ ಮಗು ಸಾವಿಗೂ ಚುಚ್ಚುಮದ್ದಿಗೂ ಸಂಬಂಧವಿಲ್ಲ ಅಂತ ಡಿಎಚ್‍ ಒ  ನಾಗರಾಜ್ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಇಂದು ಶ್ರೀಗಳಿಗೆ ಡಾ. ರವೀಂದ್ರ ಹಾಗೂ ರೇಲಾ ತಂಡದಿಂದ ಶಸ್ತ್ರಚಿಕಿತ್ಸೆ

ಚೆನ್ನೈ : ಸಿದ್ಧಗಂಗಾ ಶ್ರೀಗಳು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಿರುವ ಹಿನ್ನಲೆಯಲ್ಲಿ ಚೆನ್ನೈನ ರೇಲಾ ...

news

ಇಂದು ಸಿಎಂ ಕುಮಾರಸ್ವಾಮಿಯಿಂದ ರೈತರಿಗೆ ಋಣಮುಕ್ತ ಪತ್ರ ವಿತರಣೆ

ಬೆಂಗಳೂರು : ಸಾಲಮನ್ನಾ ವಿಚಾರದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಇಂದು ಸಿಎಂ ...

news

ವಿದ್ಯಾರ್ಥಿನಿಯರ ಹಾಸ್ಟೆಲ್ ಗೆ ನುಗ್ಗಿ ವಿಕೃತ ಕಾಮಿ ಅಲ್ಲಿ ಮಾಡಿದ್ದೇನು ಗೊತ್ತಾ?

ಹಾಸನ : ಹಾಸನದ ವಿದ್ಯಾನಗರ ಬಡಾವಣೆಯಲ್ಲರುವ ವಿದ್ಯಾರ್ಥಿನಿಯರ ಹಾಸ್ಟೆಲ್ ಒಂದಕ್ಕೆ ವಿಕೃತ ಕಾಮಿಯೊಬ್ಬ ...

news

ರಷ್ಯಾದ ಈ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳ ಬಟ್ಟೆ ಬಿಚ್ಚಿಸುತ್ತಾರಂತೆ!

ರಷ್ಯಾ : ರಷ್ಯಾದಲ್ಲಿರುವ ಡೈಮಾಂಡ್ ಫ್ಯಾಕ್ಟರಿಯೊಂದರಲ್ಲಿ ಮಹಿಳಾ ಉದ್ಯೋಗಿಗಳ ಜೊತೆ ನಡೆದುಕೊಳ್ಳುವ ...

Widgets Magazine
Widgets Magazine