ಅಪ್ರಾಪ್ತ ಮಲಮಗಳ ಮೇಲೆ ಅತ್ಯಾಚಾರವೆಸಗಿದ ಆರೋಪಿ ಅರೆಸ್ಚ್

ಬೆಂಗಳೂರು, ಗುರುವಾರ, 12 ಅಕ್ಟೋಬರ್ 2017 (13:47 IST)

13 ವರ್ಷ ವಯಸ್ಸಿನ ಮಲಮಗಳ ಮೇಲೆ ಅತ್ಯಾಚಾರವೆಸಗಿದ 24 ವರ್ಷ ವಯಸ್ಸಿನ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 

ಆನೇಕಲ್‌ನ ಚಂದಾಪುರದಲ್ಲಿರುವ ಬೇಕರಿಯಲ್ಲಿ ಉದ್ಯೋಗಿಯಾಗಿರುವ ಶಂಕಿತ ಆರೋಪಿ ರಂಜಿತ್ ಕೇರಳ ಮೂಲದವನಾಗಿದ್ದು, ಆತನ ವಿರುದ್ಧ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 
 
ಪೊಲೀಸ್ ಮೂಲಗಳ ಪ್ರಕಾರ, ರಂಜಿತ್  ಪಶ್ಚಿಮ ಬಂಗಾಳದ ವಿಚ್ಚೇದಿತ ಮಹಿಳೆಯ ಸ್ನೇಹಿತನಾಗಿದ್ದ. ಮಹಿಳೆಗೆ 13 ಮತ್ತು 14 ವರ್ಷ ವಯಸ್ಸಿನ ಇಬ್ಬರು ಪುತ್ರಿಯರಿದ್ದಾರೆ. ಕೆಲ ವರ್ಷಗಳ ಸಂಬಂಧದ ನಂತರ ಕಳೆದ ವರ್ಷ ವಿವಾಹವಾಗಿದ್ದರು ಎನ್ನಲಾಗಿದೆ.
 
ಚಂದಾಪುರದಲ್ಲಿ ಬಾಡಿಗೆ ಕೋಣೆಯೊಂದನ್ನು ಪಡೆದಿದ್ದ ರಂಜಿತ್, ಬೇಕರಿಯಲ್ಲಿ ಕೆಲಸ ಮುಗಿದ ನಂತರ ಮುರುಗೇಶ್‌ಪಾಳ್ಯದಲ್ಲಿರುವ ಪತ್ನಿ ಮತ್ತು ಪೋಷಕರನ್ನು ಭೇಟಿಯಾಗಲು ತೆರಳುತ್ತಿದ್ದ ಎಂದು ಮೂಲಗಳು ತಿಳಿಸಿವೆ.
 
ರಂಜಿತ್ ಹಿರಿಯ ಪುತ್ರಿಯ ಮೇಲೆ ಅತ್ಯಾಚಾರವೆಸಗಿರುವುದು ಗೊತ್ತಾಗಿದೆ. ಸಿನೆಮಾ ತೋರಿಸುವುದಾಗಿ ಚಂದಾಪುರದಲ್ಲಿರುವ ಬಾಡಿಗೆ ಕೋಣೆಗೆ ಕರೆದುಕೊಂಡು ಹೋಗಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.
 
ಹಿರಿಯ ಪುತ್ರಿಯ ನಡತೆಯಿಂದ ಸಂಶಯಗೊಂಡ ಮಹಿಳೆ, ಪುತ್ರಿಯನ್ನು ವಿಚಾರಣೆಗೊಳಪಡಿಸಿದಾಗ ಸತ್ಯ ಬಹಿರಂಗವಾಗಿದೆ. ಕೂಡಲೇ ಮಹಿಳೆ ಪೊಲೀಸ್ ಠಾಣೆಗೆ ತೆರಳಿ ಆರೋಪಿ ಪತಿಯ ವಿರುದ್ಧ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿಎಂ ಪುತ್ರನ ಪರ ಸಚಿವ ಎಚ್‌‍.ಸಿ.ಮಹಾದೇವಪ್ಪ ಬ್ಯಾಟಿಂಗ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಯಾವುದೇ ಭೂ ಅಕ್ರಮದಲ್ಲಿ ಭಾಗಿಯಾಗಿಲ್ಲ ಎಂದು ...

news

ಶೋಭಾ, ಅಶೋಕ್ ಮಾತ್ರ ನಾಯಕರೇ? ಪಕ್ಷದಲ್ಲಿ ಬೇರೆಯವರಿಲ್ಲವೇ?: ಬಿಎಸ್‌ವೈಗೆ ಟಾಂಗ್

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಬಿಜೆಪಿ ನಾಯಕರೇ ಅಸಮಾಧಾನ ...

news

ಗುಜರಾತ್, ಹಿಮಾಚಲ ಪ್ರದೇಶ ಚುನಾವಣೆಗೆ ದಿನಾಂಕ ಇಂದು ಫಿಕ್ಸ್

ನವದೆಹಲಿ: ಮುಂಬರುವವ ಗುಜರಾತ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಚುನಾವಣಾ ಆಯೋಗ ...

news

ದೆಹಲಿಯತ್ತ ದೌಡಾಯಿಸಿದ ಸಿಎಂ ಸಿದ್ದರಾಮಯ್ಯ ಬಳಗ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮತ್ತು ಆಪ್ತ ಸಚಿವರ ಬಳಗ ದೆಹಲಿಯತ್ತ ಪ್ರಯಾಣ ಬೆಳೆಸಿದೆ. ದೆಹಲಿಯಲ್ಲಿ ...

Widgets Magazine
Widgets Magazine