ಮದುವೆ ಆಗ್ತೀನಿ ಅಂತ ನೀಚ ಕೆಲಸ ಮಾಡಿದವನಿಗೆ ಜೀವಾವಧಿ ಶಿಕ್ಷೆ

ಕಲಬುರಗಿ, ಸೋಮವಾರ, 12 ಆಗಸ್ಟ್ 2019 (17:26 IST)

ಮದುವೆಯಾಗೋದಾಗಿ ನಂಬಿಸಿ ಅಪ್ರಾಪ್ತ ಬಾಲಕಿಯೊಬ್ಬಳನ್ನು ಅಪಹರಿಸಿ ಅತ್ಯಾಚಾರ ಮಾಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ನೀಡಿದೆ.

17 ವರ್ಷದ ಯುವತಿಯನ್ನ ಮದುವೆಯಾಗೋದಾಗಿ ಪುಸಲಾಯಿಸಿ ಕಲಬುರಗಿ, ಮುಂಬೈಗೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನು ಆರೋಪಿ ಮಾರುತಿ ಶಂಕರ ಜಾಧವ (20).

ಆರೋಪಿ ವಿರುದ್ಧ ಕಲಬುರಗಿ ಜಿಲ್ಲೆ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿರೋ ಕಲಬುರಗಿ 2ನೇ ಅಪರ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಗೋಪಾಲಪ್ಪ ಎಸ್. ಅವರು ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ನೊಂದ ಯುವತಿಗೆ ಜಿಲ್ಲಾ ಕಾನೂನು ನೆರವು ಸಮಿತಿಯಿಂದ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶ ಹೊರಡಿಸಲಾಗಿದೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅಪ್ರಾಪ್ತ ಬಾಲಕಿಗೆ ಯುವಕರು ಮಾಡಿದ್ದೇನು?

ಶಾಲೆಗೆ ಹೋಗುವಾಗ ಅಪ್ರಾಪ್ತ ಬಾಲಕಿಗೆ ಯುವಕರು ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತು ಆ ಬಾಲಕಿ ...

news

ಪತ್ನಿ-ಹೆಣ್ಣುಮಕ್ಕಳಿಬ್ಬರ ಆತ್ಮಹತ್ಯೆಗೆ ಕಾರಣನಾದ ನೀಚ ತಂದೆ ಮಾಡಿದ್ದೇನು?

ಮದುವೆಯಾಗಿ ಇಬ್ಬರು ಹೆಣ್ಣು ಮಕ್ಕಳ ತಂದೆಯೇ ತನ್ನ ಪತ್ನಿ ಹಾಗೂ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳಲು ...

news

ಮಾಜಿ ಲವರ್ ಕಾಟ; ಕುಡುಕ ಗಂಡನಿಗೆ ಡಿವೋರ್ಸ್ ಕೊಡುವೆ ಅಂತಿದ್ದಾಳೆ

ಅವಳು ಕರೆ ಮಾಡಿ ನಾನು ನನ್ನ ಗಂಡನನ್ನು ಬಿಡುತ್ತೇನೆ. ನನ್ನ ಮಗುವಿಗೆ ನಿನೇ ತಂದೆಯಾಗು ಅಂತಿದ್ದಾಳೆ. ನನಗೆ ...

news

ನೀರಿನಿಂದ ಮಗನ ಶವ ಹೊರತೆಗೆದ ಅಪ್ಪ

ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಮಗನ ಶವವನ್ನು ಅಪ್ಪನೇ ಹೊರತೆಗೆದು ಹೊತ್ತುಕೊಂಡ ಬಂದ ಘಟನೆ ನಡೆದಿದೆ.