‘ಹರಿಹರ ಬ್ರಹ್ಮಾದಿಗಳು ಬಂದ್ರೂ ನನ್ನ ಗೆಲುವು ಖಚಿತ’

ವಿಜಯಪುರ, ಮಂಗಳವಾರ, 5 ಡಿಸೆಂಬರ್ 2017 (11:20 IST)

ವಿಜಯಪುರ: ನನ್ನ ವಿರುದ್ಧ ಯಾರು ಏನೇ ಮಾಡಿದರೂ, ತಲೆ ಕೆಳಗೆ ಮಾಡಿ ನಿಂತರೂ ಈ ಬಾರಿ ಚುನಾವಣೆಯಲ್ಲಿ ನನ್ನ ಗೆಲುವು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
 

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹರಿ ಹರ ಬ್ರಹ್ಮಾದಿಗಳು ಬಂದರೂ ನನ್ನ ಗೆಲುವು ತಡೆಯಲು ಸಾಧ್ಯವಿಲ್ಲ. ನಾನು 50 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ ನೋಡುತ್ತಿರಿ ಎಂದು ಸವಾಲು ಹಾಕಿದ್ದಾರೆ.
 
ಇದೇ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಪಾಟೀಲ್, ಯಡಿಯೂರಪ್ಪ ನನ್ನ ವಿರುದ್ಧ ಹಗರಣಗಳ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದಿದ್ದಾರೆ. ಆದರೆ ಅವರು ಬಿಡುಗಡೆ ಮಾಡುತ್ತಾರೋ ಬಿಡುತ್ತಾರೋ ಗೊತ್ತಿಲ್ಲ. ಆದರೆ ನಾನಂತೂ ಯಡಿಯೂರಪ್ಪ ಹಗರಣಗಳ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಎಂಬಿ ಪಾಟೀಲ್ ಬಿಎಸ್ ಯಡಿಯೂರಪ್ಪ ಬಿಜೆಪಿ ಕಾಂಗ್ರೆಸ್ ರಾಜ್ಯ ಸುದ್ದಿಗಳು Bjp Congress Mb Patil Bs Yedyurappa State News

ಸುದ್ದಿಗಳು

news

ಅಮ್ಮನಿಲ್ಲದ ತಮಿಳುನಾಡಿಗೆ ಒಂದು ವರ್ಷ!

ಚೆನ್ನೈ: ಕಳೆದ ವರ್ಷ ಇದೇ ದಿನ ತಮಿಳುನಾಡು ಅಲ್ಲೋಲಕಲ್ಲೋವಾಗಿತ್ತು. ಸಿಎಂ ಜಯಲಲಿತಾ ಅಪೋಲೋ ಆಸ್ಪತ್ರೆಯಲ್ಲಿ ...

news

ಜಯಲಲಿತಾ ಮೊದಲ ವರ್ಷದ ಪುಣ್ಯತಿಥಿ

ಚೆನ್ನೈ: ಜೆ. ಜಯಲಲಿತಾ ನಿಧನದ ಮೊದಲ ಪುಣ್ಯತಿಥಿ ಹಿನ್ನೆಲೆ ಜಯಲಲಿತಾ ಸಮಾಧಿಯತ್ತ ಜನಸಮೂಹವೇ ...

news

ಅಮಿತ್ ಶಾ ಭೇಟಿಯ ನಂತರ ಬಿಜೆಪಿಯವರ ಬಾಯಿ ಹೊಲಸು- ರೇವಣ್ಣ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರಾಜ್ಯಕ್ಕೆ ಬಂದು ಹೋದ ಮೇಲೆ ಬಿಜೆಪಿಯವರ ಬಾಯಿ ...

news

ರಾಹುಲ್ ಗಾಂಧಿ ನಮ್ಮ ಡಾರ್ಲಿಂಗು ಎಂದು ಮನಮೋಹನ್ ಸಿಂಗ್

ನವದೆಹಲಿ: ನಿನ್ನೆಯಷ್ಟೇ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿಯನ್ನು ಮಾಜಿ ...

Widgets Magazine