ವಿ.ಶ್ರೀನಿವಾಸ್‌ಪ್ರಸಾದ್‌ಗೆ ಸಚಿವ ಎಚ್.ಎಂ.ರೇವಣ್ಣ ತರಾಟೆ

ಬೆಂಗಳೂರು, ಸೋಮವಾರ, 9 ಅಕ್ಟೋಬರ್ 2017 (16:29 IST)

Widgets Magazine

ಮುಂದಿನ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯರನ್ನು ಸೋಲಿಸುವುದೇ ಗುರಿ ಎಂದಿರುವ ಬಿಜೆಪಿ ಮುಖಂಡ ವಿ.ಶ್ರೀನಿವಾಸ್‌ ಪ್ರಸಾದ್‌ಗೆ ಸಾರಿಗೆ ಖಾತೆ ಸಚಿವ ತರಾಟೆಗೆ ತೆಗೆದುಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯರನ್ನು ಸೋಲಿಸುವುದು, ಗೆಲ್ಲಿಸುವುದು ಮತದಾರರಿಗೆ ಬಿಟ್ಟ ವಿಷಯವಾಗಿದೆ. ಮತದಾರರು ಮನಸ್ಸು ಮಾಡಿದಲ್ಲಿ ಗೆಲ್ಲಿಸುತ್ತಾರೆ, ಇಲ್ಲವೇ ಸೋಲಿಸುತ್ತಾರೆ ಎಂದರು.
 
ಸಿಎಂ ಸಿದ್ದರಾಮಯ್ಯರನ್ನು ಸೋಲಿಸುವ ತವಕದಲ್ಲಿರುವ ಶ್ರೀನಿವಾಸ್ ಪ್ರಸಾದ್ ಯಾಕೆ ನಂಜನಗೂಡು ಉಪ ಚುನಾವಣೆಯಲ್ಲಿ ಸೋತಿದ್ದಾರೆ ಎಂದು ಪ್ರಶ್ನಿಸಿದ ಅವರು, ವಿರೋಧ ಪಕ್ಷದ ನಾಯಕರಿಗೆ ಮಾಡಲು ಕೆಲಸವಿಲ್ಲ. ಇಂತಹ ಆರೋಪಗಳನ್ನು ಮಾಡುವುದೇ ಕಾಯಕವಾಗಿದೆ ಎಂದು ತಿರುಗೇಟು ನೀಡಿದರು.
 
ಸಿಎಂ ಸಿದ್ದರಾಮಯ್ಯರ ಜನಪರ, ರೈತಪರ ಯೋಜನೆಗಳಿಂದ ವಿಪಕ್ಷಗಳು ಕಂಗಾಲಾಗಿವೆ. ಸರಕಾರದ ಜನಪ್ರಿಯತೆಯನ್ನು ಸಹಿಸಲು ವಿಪಕ್ಷಗಳಿಗೆ ಸಾಧ್ಯವಾಗುತ್ತಿಲ್ಲ ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಎಚ್.ಎಂ.ರೇವಣ್ಣ ಶ್ರೀನಿವಾಸ್ ಪ್ರಸಾದ್ ಕಾಂಗ್ರೆಸ್ ಬಿಜೆಪಿ ಸಿಎಂ ಸಿದ್ದರಾಮಯ್ಯ Srinivasprasad Congress Bjp Cm Siddaramaiah H.m.revanna

Widgets Magazine

ಸುದ್ದಿಗಳು

news

ಬಿಜೆಪಿಯ ಪೊಳ್ಳು ಮಾಹಿತಿಗೆ ಜನ ತಲೆಕೆಡಿಸಿಕೊಳ್ಳಲ್ಲ: ಯು.ಟಿ.ಖಾದರ್

ಬೆಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಬಿಜೆಪಿಗೆ ಅನಾವಶ್ಯಕ ವಿಚಾರಗಳು ತಲೆಗೆ ಬರುತ್ತವೆ ಎಂದು ...

news

34 ಕೆಎಎಸ್ ಅಧಿಕಾರಿಗಳಿಗೆ ಐಎಎಸ್ ಬಡ್ತಿ

ಬೆಂಗಳೂರು: 34 ಕೆಎಎಸ್ ಅಧಿಕಾರಿಗಳಿಗೆ ಐಎಎಸ್ ಪದೋನ್ನತಿಗೆ ಕೇಂದ್ರ ಲೋಕಸೇವಾ ಆಯೋಗ ಮಹತ್ವದ ತೀರ್ಮಾನ ...

news

ರಾಜ್ಯ ಮುಕ್ತ ವಿವಿ ಮುಚ್ಚುವ ಪ್ರಶ್ನೆಯೇ ಇಲ್ಲ: ರಾಯರೆಡ್ಡಿ

ಬೆಂಗಳೂರು: ರಾಜ್ಯ ಮುಕ್ತ ವಿಶ್ವವಿದ್ಯಾಲಯವನ್ನು ಮುಚ್ಚುವ ಪ್ರಶ್ನೆಯೇ ಇಲ್ಲ ಎಂದು ಉನ್ನತ ಶಿಕ್ಷಣ ಖಾತೆ ...

news

ಬಿಎಸ್‌ವೈ-ಅನಂತ್‌ ಸಿಡಿ: ಪೊಲೀಸರಿಂದ ಸೂಕ್ತ ಕ್ರಮ ಎಂದ ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: ಹೈಕಮಾಂಡ್‌ಗೆ ಕಪ್ಪ ಕಾಣಿಕೆ ನೀಡುವ ಬಗ್ಗೆ ಸಿಡಿಯಲ್ಲಿ ದಾಖಲಾಗಿರುವ ಧ್ವನಿ ಯಡಿಯೂರಪ್ಪ ಮತ್ತು ...

Widgets Magazine