Widgets Magazine
Widgets Magazine

ಎಂಎಲ್‌ಸಿ‌ಗಳ ಪ್ರತಿಭಟನೆ: ಸರಕಾರದ ಧೋರಣೆಗೆ ಜಗದೀಶ್ ಶೆಟ್ಟರ್ ಕಿಡಿ

ಬೆಂಗಳೂರು, ಮಂಗಳವಾರ, 12 ಸೆಪ್ಟಂಬರ್ 2017 (13:15 IST)

Widgets Magazine

ಶಿಕ್ಷಕರ ಕ್ಷೇತ್ರದ ಸಮಸ್ಯೆಗಳ ಬಗೆಹರಿಸಲು ಶಿಕ್ಷಕರು ಹಗಲಿರಲು ಹೋರಾಟ ನಡೆಸುತ್ತಿದ್ದರೂ ಸರಕಾರದ ಮೌನ ಧೋರಣೆ ತೀವ್ರ ಖಂಡನೀಯ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಶಿಕ್ಷಕರ ಮೇಲೆ ತೋರುತ್ತಿರುವ ಧೋರಣೆ ಖಂಡಿಸಿ ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲೂ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಒಂದು ವೇಳೆ, ಪ್ರತಿಭಟನೆ ಕೈ ಮೀರಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದರೆ ಸರಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
 
ವಿಧಾನಪರಿಷತ್ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದರೂ ನಿರ್ಲಕ್ಷ್ಯ ತೋರುತ್ತಿರುವ ಸರಕಾರ, ಸಾಮಾನ್ಯ ಜನತೆಯ ಹೋರಾಟಕ್ಕೆ ಯಾವ ರೀತಿ ಸ್ಪಂದಿಸುತ್ತದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಗುಡುಗಿದ್ದಾರೆ.
 
ಸಿಎಂ ಸಿದ್ದರಾಮಯ್ಯ ಸರಕಾರ ಪ್ರತಿಯೊಂದು ಕ್ಷೇತ್ರದಲ್ಲಿಯೂ ವಿಫಲವಾಗಿದೆ. ಸರಕಾರ ಯಾವ ಪ್ರತಿಭಟನೆಗೂ ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಟೀಕಿಸಿದ್ದಾರೆ.    

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಪತ್ರಿಕಾ ರಂಗಕ್ಕೆ ಗೌರವವಿದೆ, ಟೀಕಿಸುವುದು ಸರಿಯಲ್ಲ: ಆರ್.ವಿ.ದೇಶಪಾಂಡೆ

ಕಾರವಾರ: ಮಾಧ್ಯಮಗಳ ವಿರುದ್ಧ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ವಿಚಾರ ಕುರಿತಂತೆ ...

news

ಅಣ್ಣಾಡಿಎಂಕೆ ಪಕ್ಷದ ಹುದ್ದೆಯಿಂದ ಶಶಿಕಲಾ ವಜಾ

ನಿರೀಕ್ಷೆಯಂತೆ ಜಯಲಲಿತಾ ಆಪ್ತೆ ಶಶಿಕಲಾ ಅವರನ್ನ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಜಾ ...

news

ಗಣಪತಿಗೆ ಕುರಿ ಮಾಂಸದ ಊಟ: ವಿವಾದ ಸೃಷ್ಟಿಸಿದ ಆಸ್ಟ್ರೇಲಿಯಾ ಜಾಹೀರಾತು

ಹಿಂದೂಗಳ ದೈವ ಗಣೇಶ ಮೂರ್ತಿ ಕುರಿ ಮಾಂಸ ತಿನ್ನುವ ರೀತಿ ಜಾಹೀರಾತು ನಿರ್ಮಿಸಿರುವ ಆಸ್ಟ್ರೇಲಿಯಾ ಕಂಪನಿ ...

news

ಅಣ್ಣಾಡಿಎಂಕೆ ಜನರಲ್ ಕೌನ್ಸಿಲ್ ಸಭೆ: ಶಶಿಕಲಾ ಉಚ್ಚಾಟನೆ ಸಾಧ್ಯತೆ

ಜಯಲಲಿತಾ ನಿಧನದ ಬಳಿಕ ದಿನಕ್ಕೊಂದು ವಿವಾದದ ಮೂಲಕ ಸುದ್ದಿಯಾಗುತ್ತಿರುವ ತಮಿಳುನಾಡಿನ ಻ಣ್ಣಾಡಿಎಂಕೆ ...

Widgets Magazine Widgets Magazine Widgets Magazine