ರಾಜ್ಯಕ್ಕೆ ಬಂದ ಆಡ್ವಾಣಿಯವರಿಗೆ ಕ್ಯಾರೆ ಎನ್ನದ ಬಿಜೆಪಿ ನಾಯಕರು

ಮೈಸೂರು, ಶನಿವಾರ, 2 ಡಿಸೆಂಬರ್ 2017 (16:23 IST)

ಬಿಜೆಪಿ ನಾಯಕರಿಂದ ಉಕ್ಕಿನ ಮನುಷ್ಯ, ಭೀಷ್ಮ ಎಂದು ಕರೆಸಿಕೊಳ್ಳುತ್ತಿದ್ದ ಹಿರಿಯ ನಾಯಕ ಆಡ್ವಾಣಿ ರಾಜ್ಯಕ್ಕೆ ಬಂದರೂ ರಾಜ್ಯ ಬಿಜೆಪಿ ನಾಯಕರು ಕ್ಯಾರೆ ಎನ್ನದಿರುವ ಅಂಶ ಬೆಳಕಿಗೆ ಬಂದಿದೆ.

ಅವಧೂತ ದತ್ತಪೀಠದ ಶ್ರೀಗಣಪತಿ ಸಚ್ಚಿದಾನಂದ ಆಶ್ರಮದ ಆಂಜನೇಯ ವಿಗ್ರಹಕ್ಕೆ ಅಳವಡಿಸಿರುವ ವಿಶೇಷ ಶಾಶ್ವತ ಪ್ರೊಜೆಕ್ಷನ್ ಪ್ರದರ್ಶನವನ್ನು ಲೋಕಾರ್ಪಣೆ ಮಾಡಲು ರಾಜ್ಯಕ್ಕೆ ಆಗಮಿಸಿದ್ದ ಆಡ್ವಾಣಿಯವರನ್ನು ಸ್ವಾಗತಿಸಲು ಕೂಡಾ ಯಾರೊಬ್ಬ ಪ್ರಮುಖ ನಾಯಕರು ಉಪಸ್ಥಿತರಿರಲಿಲ್ಲವೆಂದು ಮೂಲಗಳು ತಿಳಿಸಿವೆ. 
 
ಮಾಜಿ ಉಪಪ್ರಧಾನಿ ಆಡ್ವಾಣಿಯವರ ಭೇಟಿ ಬಹುದಿನಗಳ ಹಿಂದೆಯೇ ನಿಗದಿಯಾಗಿದ್ದರೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರಾಗಲಿ, ಕಾರ್ಯದರ್ಶಿಗಳಾಗಲಿ, ಮಾಜಿ ಸಚಿವರು, ಶಾಸಕರು ಹಾಜರಿರದಿರುವುದು ಬಿಜೆಪಿ ಪಕ್ಷದಲ್ಲಿರುವ ಅಪಸ್ವರ ಹೊರಹಾಕಿದೆ ಎನ್ನಲಾಗುತ್ತಿದೆ.
 
ಬಿಜೆಪಿ ಪಕ್ಷದ ಏಳಿಗೆಗಾಗಿ ಹಗಲಿರಳು ಶ್ರಮಿಸಿದ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಯಾವುದೇ ಕೆಲಸಕ್ಕೆ ಬಾರದವರು ಎನ್ನುವಂತೆ ಬಿಜೆಪಿ ನಾಯಕರು ನಡೆದುಕೊಂಡ ರೀತಿ ಮುಂದೆ ಅಧಿಕಾರ ಕಳೆದುಕೊಂಡ ಕೂಡಲೇ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಿಗೆ ಬಂದರೂ ಬರಬಹುದು ಎಂದು ಆಡ್ವಾಣಿ ಅಭಿಮಾನಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿರುವುದು ಕಂಡುಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಾಂಗ್ರೆಸ್, ಬಿಜೆಪಿಗಿಂತ ಮೊದಲು ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ- ಕುಮಾರಸ್ವಾಮಿ

ಮುಂಬರುವ ವಿಧಾನಸಭೆ ಚುನಾವಣೆಗೆ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಗಿಂತ ಮುನ್ನವೇ ಜೆಡಿಎಸ್ ...

news

ಯುಪಿಯಲ್ಲೂ ಖಾತೆ ತೆರೆದ ಆಮ್ ಆದ್ಮಿ ಪಾರ್ಟಿ: 39 ಸ್ಥಾನಗಳಲ್ಲಿ ಗೆಲುವು

ಲಕ್ನೋ: ಉತ್ತರ ಪ್ರದೇಶ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಖಾತೆ ತೆರೆದು ಅಚ್ಚರಿ ಮೂಡಿಸಿದೆ.

news

ಮತಯಂತ್ರ ದೋಷ? ಸಹರಣ್‌ಪುರ್ ಅಭ್ಯರ್ಥಿಗೆ ಶೂನ್ಯ ಮತ, ನನ್ನ ಮತವೇ ಕಾಣೆ ಎಂದ ಅಭ್ಯರ್ಥಿ

ಸಹರಣಪುರ್: ಉತ್ತರಪ್ರದೇಶದ ಸಹರಣಪುರ್ ಜಿಲ್ಲೆಯಲ್ಲಿ ನಡೆದ ಪಾಲಿಕೆ ಚುನಾವಣೆಯಲ್ಲಿ ಸ್ವತಂತ್ರ ...

news

ಮತಯಂತ್ರಗಳಿಂದ ಬಿಜೆಪಿಗೆ ಗೆಲುವು: ತಾಕತ್ತಿದ್ರೆ ಬ್ಯಾಲೆಟ್ ಪೇಪರ್ ಬಳಸಿ ಗೆಲ್ಲಿ: ಬಿಜೆಪಿಗೆ ಸವಾಲ್

ನವದೆಹಲಿ: ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ತಿರುಚಿ ಬಿಜೆಪಿ ಗೆಲುವು ಸಾಧಿಸುತ್ತಿದೆ. ತಾಕತ್ತಿದ್ರೆ ...

Widgets Magazine
Widgets Magazine