ಬಿಬಿಎಂಪಿ ಮೈತ್ರಿ ಬಗ್ಗೆ ಯಾರ ಬಳಿಯೂ ಚರ್ಚಿಸಿಲ್ಲ: ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಸೋಮವಾರ, 11 ಸೆಪ್ಟಂಬರ್ 2017 (17:20 IST)

Widgets Magazine

ಬೆಂಗಳೂರು: ಬಿಬಿಎಂಪಿ ಮೈತ್ರಿ ಮುಂದುವರಿಕೆ ಬಗ್ಗೆ ಇನ್ನು ನಾವು ಯಾರ ಬಳಿಯೂ ಮಾತನಾಡಿಲ್ಲ ಎಂದು ಸಿಎಂ  ಹೇಳಿದ್ದಾರೆ.


ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಬಿಎಂಪಿ ಮೈತ್ರಿ ಬಗ್ಗೆ ಒಂದು ಬಾರಿ ದೇವೇಗೌಡರ ಜೊತೆ ರೋಷನ್ ಬೇಗ್ ಚರ್ಚೆ ಮಾಡಿದ್ದಾರೆ ಅಷ್ಟೆ. ಮೇಯರ್ ಸ್ಥಾನ ಕೊಟ್ರೆ ಬೆಂಬಲ ಅನ್ನೋ ಕುಮಾರಸ್ವಾಮಿ‌ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ನಾವು ಇನ್ನೂ ಮಾತೇ ಆಡಿಲ್ಲ. ನೀವೇ ವಕಾಲತ್ತು ವಹಿಸ್ತೀರಾ ಅಂತ ಗರಂ ಆದ್ರು. ಕೂಡಲೇ ಶಾಂತರಾದ ಸಿಎಂ, ನಾವು ಇನ್ನು ಮಾತನಾಡಿಲ್ಲ. ಮಾತಾಡಿದ ಬಳಕ‌ ಎಲ್ಲ ನಿರ್ಧಾರ ಆಗುತ್ತೆ ಎಂದು ಹೇಳಿದರು.

ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಸತ್ಯಾಗ್ರಹಕ್ಕೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರದ ಸಾಕಷ್ಟು ಸಚಿವರ ಮೇಲೆ ಆರೋಪಗಳಿವೆ. ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದೆ. ಕೇಂದ್ರ ಮಂತ್ರಿಗಳ ವಿರುದ್ಧ ತನಿಖೆ ನಡೆಯುತ್ತಿದೆ. ಮೊದಲು ಅವರು ರಾಜೀನಾಮೆ ನೀಡಲಿ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ.

ಬೆಂಗಳೂರು ಮಳೆ ಹಾನಿಗೆ ಸರ್ಕಾರದ ವೈಫಲ್ಯವೇ ಕಾರಣ ಎಂಬ ಬಿಎಸ್ ವೈ ಆರೋಪ ಸುಳ್ಳು. ಅವರು ಸುಳ್ಳು ಹೇಳ್ತಾರೆ. ಹೀಗಾಗಿ ಅವರ ಹೇಳಿಕೆಗೆ ಪ್ರತಿಕ್ರಿಯೆ ಕೊಡೋದು ಬಿಟ್ಟಿದ್ದೀನಿ ಎಂದರು.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಭಾಸ್ಕರ್ ಶೆಟ್ಟಿ ಕೊಲೆ ಆರೋಪಿಗಳ ಮೇಲೆ ಜೈಲಿನಲ್ಲಿ ಹಲ್ಲೆ

ಮಂಗಳೂರು ಜೈಲಿನಲ್ಲಿ ಮಾರಾಮಾರಿ ನಡೆದಿದೆ. ಉದ್ಯಮಿ ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣದ ಆರೋಪಿಗಳಾದ ಸವನೀತ್ ...

news

ವಿಧಾನಸೌಧಕ್ಕೆ ಬಾಂಬ್ ಬೆದರಿಕೆ ಕರೆ: ತೀವ್ರಗೊಂಡ ತಪಾಸಣೆ

ವಿಧಾನಸೌಧದಲ್ಲಿ ಬಾಂಬ್ ಇಡುವುದಾಗಿ ಬಾಂಬ್ ಬೆದರಿಕೆ ಕರೆ ಬಂದಿದೆ. ಮಧ್ಯಾಹ್ನ 12.30ರ ಸುಮಾರಿಗೆ ವಿಧಾನಸೌಧ ...

news

ಸೆಲ್ ಫೋನ್ ಆಸೆ ತೋರಿಸಿ ವಿದ್ಯಾರ್ಥಿ ಜೊತೆ ಹಾಸಿಗೆ ಹಂಚಿಕೊಂಡಿದ್ದ ಗಣಿತ ಶಿಕ್ಷಕಿ ಅರೆಸ್ಟ್..1

ಕಾಮಕ್ಕೆ ಕಣ್ಣಿಲ್ಲ ಎಂಬ ಮಾತು ಈ ಸುದ್ದಿಯನ್ನ ನೋಡಿದರೆ ಗೊತ್ತಾಗುತ್ತೆ. ವಿದ್ಯಾ ಬುದ್ಧಿ ಕಲಿಸಬೇಕಾದ ...

news

ಶೀಘ್ರದಲ್ಲೇ ಸಿಎಂ ಅಕ್ರಮದ ಬಗ್ಗೆ ದಾಖಲೆ ಬಿಡುಗಡೆ: ಬಿಎಸ್ ವೈ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೊಸ ಬಾಂಬ್ ...

Widgets Magazine Widgets Magazine