ಕೊನೆಗೂ ವಿಮಾನವೇರುವ ಮುನ್ನ ಈ ಕೆಲಸ ಮಾಡಿಯೇ ಬಿಟ್ಟರು ಪ್ರಧಾನಿ ಮೋದಿ!

ಬೆಂಗಳೂರು, ಸೋಮವಾರ, 30 ಅಕ್ಟೋಬರ್ 2017 (08:51 IST)

ಬೆಂಗಳೂರು: ರಾಜ್ಯಕ್ಕೆ ಒಂದು ದಿನದ ಪ್ರವಾಸಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿ ನಿನ್ನೆ ಧರ್ಮಸ್ಥಳ ದೇವರ ದರ್ಶನ ಪಡೆದು, ನಂತರ ಬೆಂಗಳೂರಿನಲ್ಲಿ ಸೌಂದರ್ಯ ಲಹರಿ ಕಾರ್ಯಕ್ರಮದಲ್ಲೂ ರಾಜಕೀಯ ಬೆರೆಸಲಿಲ್ಲ.


 
ಆದರೆ ಬೀದರ್ ನಲ್ಲಿ ರೈಲ್ವೇ ಹಳಿ ಉದ್ಘಾಟಿಸಿದ ನಂತರ ದೆಹಲಿ ವಿಮಾನವೇರುವ ಮುನ್ನ ಕಾಂಗ್ರೆಸ್ ಗೆ ಟಾಂಗ್ ಕೊಟ್ಟು ತೆರಳಿದರು. ಕೇಂದ್ರ ಸರ್ಕಾರ ಭ್ರಷ್ಟಾಚಾರ ವಿರೋಧಿ ಕೆಲಸ ಮಾಡುತ್ತಿದ್ದರೆ, ಕಾಂಗ್ರೆಸ್ ಬುದ್ಧಿಗೇಡಿಗಳಂತೆ ವರ್ತಿಸುತ್ತಿದೆ ಎಂದು ಅವರು ಆರೋಪಿಸಿದರು.
 
ಗುಜರಾತ್ ನ ಪ್ರವಾಹದಿಂದ ನರಳುತ್ತಿದ್ದರೆ, ಅಲ್ಲಿನ ಕಾಂಗ್ರೆಸ್ ಶಾಸಕರು ಬೆಂಗಳೂರಿನಲ್ಲಿ ಮೋಜು ಮಾಡಿದರು. ಇದೇ ಸಂದರ್ಭದಲ್ಲಿ ಇಲ್ಲಿನ ಕಾಂಗ್ರೆಸ್ ನಾಯಕರೊಬ್ಬರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆದು ಕಂತೆ ಕಂತೆ ಹಣ ಸಿಕ್ಕಿತು ಎಂದು ಸಚಿವ ಡಿಕೆ ಶಿವಕುಮಾರ್ ಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.
 
ಕರ್ನಾಟಕದ ಜನ ವಿಕಾಸ ಬಯಸಿದ್ದಾರೆ. ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ನನ್ನು ಅವರು ಶೀಘ್ರದಲ್ಲಿಯೇ ಕಿತ್ತೊಗೆಯುತ್ತಾರೆ. ವಿಕಾಸಕ್ಕಾಗಿ ಅವರು ಮುಂದಿನ ಚುನಾವಣೆವರೆಗೆ ಕಾಯಲು ಸಿದ್ಧರಿಲ್ಲ ಎಂದು ಮೋದಿ ವಾಗ್ದಾಳಿ ನಡೆಸಿದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಧರ್ಮಸ್ಥಳದಲ್ಲಿ ಪ್ರಧಾನಿ ಮೋದಿ ಎಕ್ಸ್ ಕ್ಲೂಸಿವ್ ಫೋಟೋಗಾಗಿ ಕ್ಲಿಕ್ ಮಾಡಿ

ಮಂಗಳೂರು: ಧರ್ಮಸ್ಥಳಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿಗೆ ಭರ್ಜರಿ ಸ್ವಾಗತ ನೀಡಲಾಯಿತು. ಅದರ ಕೆಲವು ಝಲಕ್ ...

news

`ನನ್ನನ್ನು ಕರೆದಿದ್ದರೆ ಹೋಗುತ್ತಿದ್ದೆ, ಕರೆಯದೇ ಹೋಗಲಾಗುತ್ತಾ?

ಮಂಡ್ಯ: ನನ್ನನ್ನು ಕರೆದಿದ್ದರೆ ಹೋಗುತ್ತಿದ್ದೆ, ಕರೆಯದೇ ಹೋಗಲಾಗುತ್ತಾ ಎಂದು ಸಿಎಂ ಸಿದ್ದರಾಮಯ್ಯ ...

news

`ಪರ್ ಡ್ರಾಪ್ ಮೋರ್ ಕ್ರಾಪ್’ ಜಾರಿಗೊಳಿಸೋಣ: ಪ್ರಧಾನಿ ಮೋದಿ

ಧರ್ಮಸ್ಥಳ: ಪ್ರಧಾನಿ ನರೇಂದ್ರ ಮೋದಿ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ದೇವರ ದರ್ಶನ ಪಡೆದು ಇದೀಗ ಉಜಿರೆಯ ...

news

ಧರ್ಮಸ್ಥಳಕ್ಕೆ ಆಗಮಿಸಿದ ಪ್ರಧಾನಿ: ಮಂಜುನಾಥ ದೇವರ ದರ್ಶನ ಪಡೆಯುತ್ತಿರುವ ಮೋದಿ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿಶೇಷ ವಿಮಾನದ ಮೂಲಕ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣಕ್ಕೆ ...

Widgets Magazine
Widgets Magazine