ಮಂಗಳೂರು ಎಳನೀರು ಸವಿಗೆ ಮನಸೋತ ಪ್ರಧಾನಿ ಮೋದಿ

ಮಂಗಳೂರು, ಸೋಮವಾರ, 30 ಅಕ್ಟೋಬರ್ 2017 (14:24 IST)

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಹನಿ ನೀರು ಸೇವಿಸದೆ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಬಂದು ಮಂಜುನಾಥ ದೇವರ ದರ್ಶನ ಮಾಡಿ ಹೊರಟಿದ್ದಾರೆ. ಆದರೆ ವಿಶೇಷ ಅಂದ್ರೆ ಮಂಗಳೂರಿನ ಎಳನೀರಿಗೆ ಮೋದಿ ಮನಸೋತಿದ್ದಾರೆ.


ಪ್ರಧಾನಿ ಮೋದಿ ಆಸ್ತಿಕರು. ಹೀಗಾಗಿಯೇ ದೈವ ಭಕ್ತಿ ಹೆಚ್ಚಿದೆ. ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡುವ ಸಲುವಾಗಿ ಅವರು ಹನಿ ನೀರು ಕುಡಿಯದೆ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು. ಕ್ಷೇತ್ರದಲ್ಲಿ ಬಿಸಿಲಿನ ತಾಪ ಹೆಚ್ಚಿತ್ತು. ಆದರೆ ಪ್ರಧಾನಿ ಮೋದಿಯವರು ಈ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಹನಿ ನೀರು ಸಹ ಸೇವಿಸಿಲ್ಲ.

ಮಂಜುನಾಥ ದೇವರ ದರ್ಶನ ಮಾಡಿ ಅಲ್ಲಿ ಸಂಕಲ್ಪ ಮಾಡಿಸಿದ್ದಾರೆ. ಈ ಸಂದರ್ಭದಲ್ಲಿ ಮಾಡಿದ್ದು, ತೀರ್ಥ ಸೇವನೆಯಷ್ಟೆ. ಧ್ಯಾನ, ಪೂಜೆ ಮುಗಿಸಿದ ನಂತರ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಎಳನೀರಿನ ಜತೆ ಒಣ ಹಣ್ಣುಗಳನ್ನ ನೀಡಿದ್ದಾರೆ. ಆದರೆ ಉಪವಾಸ ಇರುವ ಕಾರಣ ಯಾವುದೂ ಬೇಡ ಎಂದಿದ್ದಾರೆ. ಆದರೆ ಎಳನೀರು ದೇವರ ಪ್ರಸಾದದಂತೆ ಸ್ವೀಕರಿಸಿ ಎಂದಾಗ ಪ್ರಧಾನಿ ಮೋದಿ ಸ್ಟ್ರಾ ಬಳಸದೆ ಎಳನೀರು ಸವಿದಿದ್ದಾರೆ. ಶಿವನ ಕ್ಷೇತ್ರದಲ್ಲಿ ಅಮೃತ ಕುಡಿದಂತಾಯ್ತು ಎಂದರು.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಲೆಯಾಳಂ ನಟಿಗೆ ವಿವಾಹವಾಗುವಂತೆ ಮ್ಯಾಸೇಜ್ ಕಳುಹಿಸುತ್ತಿದ್ದ ಆರೋಪಿ ಅರೆಸ್ಟ್

ಬೆಂಗಳೂರು: ಮಲೆಯಾಳಂ ಚಿತ್ರನಟಿಗೆ ವಿವಾಹವಾಗುವುದಾಗಿ ನಿರಂತರ ಮೊಬೈಲ್ ಸಂದೇಶಗಳನ್ನು ರವಾನಿಸಿ ಕಿರುಕುಳ ...

news

ಸಿಎಂ, ಜಾರ್ಜ್ ವಿರುದ್ಧ ಎಸಿಬಿಯಲ್ಲಿ ಮತ್ತೆ ದಾಖಲಾಯ್ತು ಕೇಸ್

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಹಾಗೂ ಜಾರ್ಜ್ ವಿರುದ್ಧ ಮತ್ತೆ ಎಸಿಬಿಯಲ್ಲಿ 2 ಪ್ರತ್ಯೇಕ ದೂರು

news

‘ಪ್ರಧಾನಿ ಮೋದಿಯಷ್ಟು ಹೊಲಸು ರಾಜಕಾರಣ ಮಾಡುವವರು ಯಾರೂ ಇಲ್ಲ’

ಬೆಂಗಳೂರು: ನಿನ್ನೆ ರಾಜ್ಯಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಹೋಗುವ ಮೊದಲು ಇಂಧನ ಸಚಿವ ಡಿಕೆ ಶಿವಕುಮಾರ್ ...

news

ಪ್ರಧಾನಿ ಮೋದಿ ಎದುರು ಮಮತಾಗೆ ಮುಖಭಂಗ

ನವದೆಹಲಿ: ಆಧಾರ್ ಲಿಂಕ್ ಮಾಡುವ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ಪ. ಬಂಗಾಲದ ಸಿಎಂ ...

Widgets Magazine