ನಮ್ಮ ಬಳಿಯೂ ಅಸ್ತ್ರ, ಬ್ರಹ್ಮಾಸ್ತ್ರಗಳಿವೆ: ಐಟಿ ದಾಳಿ ಬಗ್ಗೆ ಡಿಕೆಶಿ ಮಾರ್ಮಿಕ ಉತ್ತರ

ಬೆಂಗಳೂರು, ಬುಧವಾರ, 30 ಆಗಸ್ಟ್ 2017 (13:37 IST)

Widgets Magazine

ಐಟಿ ಇಲಾಖೆ ಮತ್ತೆ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಆಪ್ತರ ಮೇಲೆ ಕೆಂಗಣ್ಣು ಬೀರಿದೆ. ಬೆಳ್ಳಂ ಬೆಳಗ್ಗೆ ಮನೆ ಸೇರಿ ಕೆಲ ಆಪ್ತರ ಮನೆಗಳ ಮೇಲೆ ದಾಳಿ ನಡೆದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿ.ಕೆ. ಶಿವಕುಮಾರ್, ನಮ್ಮ ಬಳಿಯೂ ಅಸ್ತ್ರ ಬ್ರಹ್ಮಾಸ್ತ್ರಗಳಿವೆ ಎಂದು ಮಾರ್ಮಿಕವಾಗಿ ಉತ್ತರಿಸಿದ್ಧಾರೆ.


 ಕಾನೂನಿನ ಬಗ್ಗೆ ಗೌರವವಿದೆ. ಇಲಾಖೆಗಳಿಗೆ ಗೌರವ ಕೊಡುತ್ತೇವೆ. ಆದರೆ, ವಿನಾಕಾರ ಬೇರೆಯವರಿಗೆ ತೊಂದರೆ ಕೊಡುತ್ತಿದ್ದಾರೆ. ರೆಸಾರ್ಟ್`ನಲ್ಲಿ ಶಾಸಕರನ್ನ ನೋಡಿಕೊಂಡಿದ್ದ ವಿಜಯ್ ಅವರ ಮನೆಗಳ ಮೇಲೆ ದಾಳಿ ನಡೆಸಿ ತೊಂದರೆ ಕೊಡುತ್ತಿದ್ದಾರೆ. ನಮ್ಮ ಬಳಿಯೂ ಅಸ್ತ್ರಗಳಿವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಐಟಿ ದಾಳಿ ಬಳಿಕ ಇದೇ ಮೊದಲ ಬಾರಿಗೆ ಶಕ್ತಿ ದೇವತೆಗಳಾದ ಕಬ್ಬಾಳಮ್ಮ ದೇವಿ ದೇಗುಲ ಮತ್ತು ಚಾಮುಂಡಿಬೆಟ್ಟಕ್ಕೆ ತೆರಳಿ ಡಿ.ಕೆ. ಶಿವಕುಮಾರ್ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ಐಟಿ ದಾಳಿ ಹಿಂದೆ ರಾಜಕೀಯ ಉದ್ದೇಶದ ಬಗ್ಗೆ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.

ಬೆಳಗ್ಗೆಯಿಂದ 10 ಐಟಿ ಅಧಿಕಾರಿಗಳ ತಂಡ ಡಿ.ಕೆ. ಶಿವಕುಮಾರ್ ಆಪ್ತ ವಿಜಯ್ ಮುಳಗುಂದ ಅವರ ರಾಜಾಜಿನಗರದ ನಿವಾಸದ ಮೇಲೆ ದಾಳಿ ನಡೆಸಿದ್ದು, ದಾಖಲೆ ಪತ್ರಗಳ ಪರಿಶೀಲನೆ ನಡೆಸುತ್ತಿದ್ಧಾರೆ.   

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಬಿಜೆಪಿ ಸಭೆಯಲ್ಲಿ ಆರ್‌.ಅಶೋಕ್ ವಿರುದ್ಧ ಅಸಮಾಧಾನ

ಬೆಂಗಳೂರು: ಆರೆಸ್ಸೆಸ್‌ನ ಕೇಶವಕೃಪಾದಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಮಾಜಿ ಸಚಿವ ಆರ್‌.ಅಶೋಕ್ ವಿರುದ್ಧ ...

news

ಬಿ.ಎಸ್.ಯಡಿಯೂರಪ್ಪ ವಿರುದ್ಧ ನಟ ಚೇತನ್ ವಾಗ್ದಾಳಿ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ನಟ ಚೇತನ್ ವಾಗ್ದಾಳಿ ನಡೆಸಿರುವುದು ...

news

ಚುನಾವಣೆ ರಣತಂತ್ರ: ಆರೆಸ್ಸೆಸ್ ಕೇಶವಕೃಪಾದಲ್ಲಿ ಬಿಜೆಪಿ ನಾಯಕರ ಸಭೆ

ಬೆಂಗಳೂರು: ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಆರೆಸ್ಸೆಸ್‌ನ ಕೇಶವಕೃಪಾದಲ್ಲಿ ...

news

ವೈದ್ಯರ ಕಿತ್ತಾಟಕ್ಕೆ ತಾಯಿ ಗರ್ಭದಲ್ಲಿಯೇ ಕಂದಮ್ಮ ಸಾವು

ಜೈಪುರ: ವೈದ್ಯರ ಕಿತ್ತಾಟದಿಂದ ಆಗ ತಾನೆ ಕಣ್ಣು ಬಿಡಬೇಕಿದ್ದ ಎಳೆ ಕಂದಮ್ಮ ತಾಯಿಯ ಗರ್ಭದಲ್ಲಿಯೇ ಪ್ರಾಣ ...

Widgets Magazine