ಗೌರಿ ಲಂಕೇಶ್ ಹತ್ಯೆ ಖಂಡಿಸಿ ಇಂದು ಪ್ರತಿರೋಧ ಸಮಾವೇಶ

ಬೆಂಗಳೂರು, ಮಂಗಳವಾರ, 12 ಸೆಪ್ಟಂಬರ್ 2017 (09:02 IST)

ಬೆಂಗಳೂರು: ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಇಂದು ಸೆಂಟ್ರಲ್ ಕಾಲೇಜು ಆವರಣದಲ್ಲಿ ವಿವಿಧ ಸಂಘಟನೆಗಳು ಪ್ರತಿರೋಧ ಸಮಾವೇಶ ಆಯೋಜಿಸಿದೆ.


 
ಈ ಸಮಾವೇಶಕ್ಕೆ ವಿವಿಧ ವಿದ್ಯಾರ್ಥಿ ಸಂಘಟನೆಗಳು, ದಲಿತ ಸಂಘಟನೆಗಳು, ರೈತಪರ ಸಂಘಟನೆಗಳು ಸಾಥ್ ಕೊಡುತ್ತಿವೆ. ಸಮಾವೇಶದಲ್ಲಿ ಸಿಪಿಎಂ ನೇತಾರ ಸೀತಾರಾಂ ಯಚೂರಿ, ವಕೀಲ ಪ್ರಶಾಂತ್ ಭೂಷಣ್, ಸಾಮಾಜಿಕ ಹೋರಾಟಗಾರ ತೀಸ್ತಾ ಸೆಟಲ್ ವಾಡ್, ಪತ್ರಕರ್ತ ಸಾಯಿನಾಥ್, ಮುಂತಾದವರು ಪಾಲ್ಗೊಳ್ಳಲಿದ್ದಾರೆ. ಅಲ್ಲದೆ ಗೌರಿ ಲಂಕೇಶ್ ತಾಯಿ ಇಂದಿರಾ, ಸಹೋದರಿ ಕವಿತಾ ಲಂಕೇಶ್ ಕೂಡಾ ಭಾಗವಹಿಸುವ ನಿರೀಕ್ಷೆಯಿದೆ.
 
ಬೆಳಗ್ಗೆ 10 ಗಂಟೆಗೆ ಸಿಟಿ ರೈಲು ನಿಲ್ದಾಣದಿಂದ ಜಾಥಾ ಹೊರಡಲಿದ್ದು ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಸೇರಲಿದೆ. ನಂತರ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ವೇದಿಕೆ ಕಾರ್ಯಕ್ರಮಗಳು ನಡೆಯಲಿವೆ.
 
ಇದನ್ನೂ ಓದಿ.. ಗೌರಿ ಹತ್ಯೆ ಆರ್ ಎಸ್ ಎಸ್ ಮಾಡಿದ್ದು ಎಂದ್ರೆ ಕೇಸ್!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಗೌರಿ ಲಂಕೇಶ್ ಹತ್ಯೆ ರಾಜ್ಯ ಸುದ್ದಿಗಳು Gauri Lankesh State News

ಸುದ್ದಿಗಳು

news

ಗೌರಿ ಹತ್ಯೆ ಆರ್ ಎಸ್ ಎಸ್ ಮಾಡಿದ್ದು ಎಂದ್ರೆ ಕೇಸ್!

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಮಾಡಿದ್ದು ಸಂಘ ಪರಿವಾರದ ಸದಸ್ಯರು ಎಂದು ಕೆಲವು ...

news

ಯಡಿಯೂರಪ್ಪರಿಂದ ಇಂತಹ ಹೇಳಿಕೆ ನಿರೀಕ್ಷಿಸಿರಲಿಲ್ಲ: ಪರಮೇಶ್ವರ್

ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ರಾಹುಲ್ ಗಾಂಧಿಯವರನ್ನು ತನಿಖೆಗೆ ಒಳಪಡಿಸಬೇಕು ಅನ್ನೋದು ...

news

ಗೌರಿ ಲಂಕೇಶ್ ಪತ್ರಿಕೆಯ 3 ವರ್ಷದ ಸಂಚಿಕೆ ಪರಿಶೀಲಿಸುತ್ತಿರುವ ಎಸ್`ಐಟಿ.. ಯಾಕೆ ಗೊತ್ತಾ..?

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಕುರಿತಂತೆ ತನಿಖೆ ನಡೆಸುತ್ತಿರುವ ಎಸ್ಐಟಿ ತಂಡ ಎಲ್ಲ ಆಂಗಲ್`ಗಳಲ್ಲೂ ...

news

ಬಿಬಿಎಂಪಿ ಮೈತ್ರಿ ಬಗ್ಗೆ ಯಾರ ಬಳಿಯೂ ಚರ್ಚಿಸಿಲ್ಲ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬಿಬಿಎಂಪಿ ಮೈತ್ರಿ ಮುಂದುವರಿಕೆ ಬಗ್ಗೆ ಇನ್ನು ನಾವು ಯಾರ ಬಳಿಯೂ ಮಾತನಾಡಿಲ್ಲ ಎಂದು ಸಿಎಂ ...

Widgets Magazine