ಮಾನಸಿಕ ಸ್ಥಿಮಿತತೆ ಕಳೆದುಕೊಂಡಿರುವ ಪುಟ್ಟಸ್ವಾಮಿ- ಬಂಗೇರಾ

ಬೆಂಗಳೂರು, ಗುರುವಾರ, 28 ಡಿಸೆಂಬರ್ 2017 (08:34 IST)

ಬಿಜೆಪಿ ಮುಖಂಡ ಬಿ.ಜೆ.ಪುಟ್ಟಸ್ವಾಮಿ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆ ಎಂದು ಶಾಸಕ ವಸಂತ ಬಂಗೇರಾ ವ್ಯಂಗವಾಡಿದ್ದಾರೆ.

ಭೂಪಸಂದ್ರ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಮುಖ್ಯಮಂತ್ರಿ ಪಾತ್ರವಲ್ಲ. ಮಾನಸಿಕ ಸ್ಥಿಮಿತತೆ ಕಳೆದುಕೊಂಡಿರುವ ಪುಟ್ಟಸ್ವಾಮಿ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ ಎಂದಿದ್ದಾರೆ.

ಭೂಪಸಂದ್ರದ ಸರ್ವೇ ನಂಬರ್ 20,21 ರ ಡಿನೋಟಿಫಿಕೇಶನ್ ಅಕ್ರಮ, ನಾನು ಎರಡು ಪತ್ರಗಳನ್ನ ಬರೆದಿದ್ದಕ್ಕೆ ಡಿನೋಟಿಫಿಕೇಶನ್ ಮಾಡಿದ್ದಾರೆ ಎನ್ನುವುದು ಸುಳ್ಳು. ಭೂ ಮಾಲೀಕರು ಕೋರ್ಟ್ ನಲ್ಲಿ ಪ್ರಕರಣ ದಾಖಲಿಸಿ ಗೆದ್ದುಕೊಂಡಿದ್ದಾರೆ ಎಂದರು.  

ಕೋರ್ಟ್ ಆದೇಶ ಇರುವುದರಿಂದ ಸಕ್ರಮ ಮಾಡುವಂತೆ ಪತ್ರ ನೀಡಿದ್ದೆ. ಪರಿಶೀಲನೆ ಬಳಿಕ ಮುಖ್ಯಮಂತ್ರಿ ಬಿಡಿಎ ಆಯುಕ್ತರಿಗೆ ಪತ್ರ ಬರೆದಿದ್ದಾರೆ ಅಷ್ಟೇ. ಬಳಿಕ ಸೈಟ್‌ಗಳನ್ನು ಸಕ್ರಮಗೊಳಿಸಲು  ಸಾಧ್ಯವಿಲ್ಲವೆಂದು ಬಿಡಿಎ ಆಯುಕ್ತರು ಸರ್ಕಾರಕ್ಕೆ ಪತ್ರ ಬರೆದಿದ್ದರು. 2014ರಲ್ಲೇ ಪತ್ರ ಬರೆದು, ಪ್ರಕರಣ ಮುಗಿದ ಅಧ್ಯಾಯವಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅನಂತಕುಮಾರ ಹೆಗಡೆಯಿಂದ ನೀಚ ರಾಜಕಾರಣ- ತನ್ವೀರ್ ಸೇಠ್

ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರು ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡಿ ನೀಚ ರಾಜಕಾರಣ ಮಾಡುತ್ತಿದ್ದಾರೆ ...

news

ಸೋನಿಯಾ ಗಾಂಧಿ ಹೇಳಿಕೆ ತಪ್ಪೆಂದು ಹೇಳಿ ನೋಡೋಣ- ಸಿದ್ದರಾಮಯ್ಯರಿಗೆ ಪ್ರತಾಪಸಿಂಹ ಪ್ರಶ್ನೆ

ಮಹಾದಾಯಿ ನದಿ ನೀರನ್ನು ತಿರುವಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹೇಳಿದ್ದು ...

news

ಯೋಗಿ ಆದಿತ್ಯನಾಥ್ ವಿರುದ್ಧದ 22 ವರ್ಷಗಳ ಹಿಂದಿನ ಪ್ರಕರಣ ಹಿಂದಕ್ಕೆ ಪಡೆದ ಸರ್ಕಾರ

ನಿಷೇಧಾಜ್ಞೆ ಉಲ್ಲಂಘಿಸಿ ಸಭೆ ನಡೆಸಿದ ಆರೋಪದ ಮೇರೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ...

news

ಮಹಾದಾಯಿ ವಿವಾದ: ಪರಿಕ್ಕರ್ ಪತ್ರ ರಾಜಕೀಯ ಗಿಮಿಕ್ ಎಂದ ಗೋವಾ ಸಚಿವ

ಮಹಾದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ...

Widgets Magazine
Widgets Magazine