ಶರತ್ ಮಡಿವಾಳ ಮನೆಗೆ ಬಂದ ಸಚಿವ ರಮಾನಾಥ್ ರೈ

Mangalore, ಬುಧವಾರ, 12 ಜುಲೈ 2017 (12:10 IST)

ಮಂಗಳೂರು: ಕೊನೆಗೂ ಮೊನ್ನೆಯಷ್ಟೇ ಸಾವಿಗೀಡಾದ ಆರ್ ಎಸ್ ಎಸ್ ಕಾರ್ಯಕರ್ತ ಮನೆಗೆ ಅರಣ್ಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ಭೇಟಿ ನೀಡಿದ್ದಾರೆ.


 
ವಿಪಕ್ಷಗಳು ಈ ಪ್ರಕರಣಕ್ಕೆ ರಮಾನಾಥ್ ರೈ ನೇರ ಹೊಣೆ ಎಂದು ಆರೋಪಿಸಿದ್ದರು. ಅಲ್ಲದೆ, ಸಚಿವರಾಗಲಿ, ಸಿಎಂ ಸಿದ್ದರಾಮಯ್ಯ ಆಗಲಿ, ಸಾಂತ್ವನ ಹೇಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಇದರ ಬೆನ್ನಲ್ಲೇ ಸಚಿ ರಮಾನಾಥ್ ರೈ ಶರತ್ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.  ಈ ಸಂದರ್ಭದಲ್ಲಿ ಮಾಧ್ಯಮಗಳನ್ನು ಸಂಪೂರ್ಣವಾಗಿ ದೂರವಿಟ್ಟಿದ್ದ ಸಚಿವರು, ರಹಸ್ಯವಾಗಿ ಕುಟುಂಬದವರನ್ನು ಭೇಟಿಯಾಗಿರುವುದು ಅಚ್ಚರಿಗೆ ಕಾರಣವಾಗಿತ್ತು.
 
ಈ ಸಂದರ್ಭದಲ್ಲಿ ಮಗನನ್ನು ನೆನೆದು ಶರತ್ ತಂದೆ ತನಿಯಪ್ಪ ಕಣ್ಣೀರು ಹಾಕಿದರು ಎನ್ನಲಾಗಿದೆ. ಅಲ್ಲದೆ, ತನ್ನ ಮಗನ ಸಾವಿನ ಬಗ್ಗೆ ಸರಿಯಾದ ತನಿಖೆ ನಡೆಸಿ ಅಪರಾಧಿಗಳಿಗೆ ಶಿಕ್ಷೆ ನೀಡಿ ಎಂದು ಒತ್ತಾಯಿಸಿದರು ಎನ್ನಲಾಗಿದೆ. ಇದೇ ವೇಳೆ ದ.ಕನ್ನಡ ಜಿಲ್ಲೆಯಲ್ಲಿ ನಡೆದ ಅಹಿತಕರ ಘಟನೆ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ಸಮಾಲೋಚನೆ ಸಭೆ ನಡೆದಿದೆ. ಅಲ್ಲದೆ, ಅಪರಾಧಿಗಳ ಪತ್ತೆಗೆ ಈ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ.
 
ಇದನ್ನೂ ಓದಿ.. ಇನ್ನೂ ಎರಡು ದಿನ ನಟ ದಿಲೀಪ್ ಪೊಲೀಸ್ ಕಸ್ಟಡಿಗೆ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ರಮಾನಾಥ್ ರೈ ಶರತ್ ಮಡಿವಾಳ ಆರ್ ಎಸ್ಎಸ್ ಕೊಲೆ ಪ್ರಕರಣ ಬಂಟ್ವಾಳ ಗಲಭೆ ರಾಜ್ಯ ಸುದ್ದಿಗಳು Rss Murder Ramanath Rai Sharath Madiwala Bantwala Violence State News

ಸುದ್ದಿಗಳು

news

20 ವರ್ಷಗಳಿಂದ ಕೊಠಡಿಯಲ್ಲಿ ಕೂಡಿ ಹಾಕಲಾಗಿದ್ದ ಮಹಿಳೆಯನ್ನ ರಕ್ಷಿಸಿದ ಪೊಲೀಸರು..!

20 ವರ್ಷಗಳಿಂದ ಕೊಠಡಿಯೊಂದರಲ್ಲಿ ಕೂಡಿ ಹಾಕಲಾಗಿದ್ದ 50 ವರ್ಷದ ಮಹಿಳೆಯನ್ನ ಪೊಲೀಸರು ರಕ್ಷಿಸಿರುವ ಘಟನೆ ...

news

ಭಾರತದ ವಿದ್ಯಾರ್ಥಿಗಳ ಜೊತೆ ಬಾಸ್ಕೆಟ್ ಬಾಲ್ ಆಡಿ ಸಂಭ್ರಮಪಟ್ಟ ಅಮೆರಿಕದ ನಾವಿಕರು

ಮಲಬಾರ್-2017 ಸಮರಾಭ್ಯಾಸದಲ್ಲಿ ಭಾಗವಹಿಸಲು ಭಾರತಕ್ಕೆ ಆಗಮಿಸಿರುವ ಅಮೆರಿಕದ ನೌಕಾಪಡೆಯ ನಾವಿಕರು ಮಂಗಳವಾರ ...

news

ಅಮರನಾಥ್ ಯಾತ್ರಿಗಳ ಮೇಲೆ ಮತ್ತಷ್ಟು ದಾಳಿ ಸಾಧ್ಯತೆ...!

ಕಾಶ್ಮಿರ: ಅಮರನಾಥ್ ಯಾತ್ರಿಕರ ಮೇಲೆ ನಡೆದ ಉಗ್ರರ ದಾಳಿ ಮಾಸುವ ಮುನ್ನವೇ ಉಗ್ರರು ಮತ್ತಷ್ಟು ದಾಳಿ ನಡೆಸುವ ...

news

ಐಸಿಸ್ ಯುಗಾಂತ್ಯ: ಅಲ್‌ಕೈದಾ ಮುಖ್ಯಸ್ಥ ಅಬೂಬಕರ್ ಅಲ್ ಬಾಗ್ದಾದಿ ಹತ್ಯೆ

ಮೊಸೂಲ್: ಜಾಗತಿಕ ಉಗ್ರಗಾಮಿ ಅಲ್‌ಕೈದಾ ಸಂಘಟನೆಯ ಮುಖ್ಯಸ್ಥ ಅಬೂಬಕರ್ ಅಲ್ ಬಾಗ್ದಾದಿಯನ್ನು ಹತ್ಯೆ ...

Widgets Magazine