ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರ್ತಾರಾ? ಹೊಸ ಬಾಂಬ್ ಸಿಡಿಸಿದ ಕೋಟಾ ಶ್ರೀನಿವಾಸ ಪೂಜಾರಿ

ಬೆಳಗಾವಿ, ಬುಧವಾರ, 5 ಡಿಸೆಂಬರ್ 2018 (11:39 IST)

ಬೆಳಗಾವಿ : ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಸಿಡಿಸಿದ  ಹೊಸ ಬಾಂಬ್ ವೊಂದರಿಂದ ಸಚಿವ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರ್ತಾರಾ? ಎಂಬ ಅನುಮಾನ ಇದೀಗ ವ್ಯಕ್ತವಾಗಿದೆ.

ಹೌದು. ಮಾಧ್ಯಮದವರೊಂದಿದಗೆ ಮಾತನಾಡಿದ  ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರು, ‘ಸಚಿವ ರಮೇಶ್ ಜಾರಕಿಹೊಳಿ ಮಾನಸಿಕವಾಗಿ ಸರ್ಕಾರದಿಂದ ದೂರವಾಗಿದ್ದಾರೆ. ಆದರೆ ಅವರು ಬಿಜೆಪಿಗೆ ಬರ್ತಾರೆ ಅಂತಾ ನಾನು ಖಚಿತವಾಗಿ ಹೇಳುವುದಿಲ್ಲ. ಆದರೆ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷಕ್ಕೆ ಬರಬಹುದು ಎಂಬ ನಿರೀಕ್ಷೆ ಇದೆ’ ಎಂದು ಹೇಳಿದ್ದಾರೆ.

 

ಹಾಗೇ  ‘ಸಮ್ಮಿಶ್ರ ಸರ್ಕಾರ ಟೆಕಾ‍‍ಫ್ ಆಗಿಲ್ಲ. ಕೆಲವರು ಜಿಲ್ಲೆಗೆ ಮಂತ್ರಿ ಕೆಲವರು ಕ್ಷೇತ್ರಕ್ಕೆ ಮಂತ್ರಿ ಆಗಿದ್ದಾರೆ. ಮಂತ್ರಿಗಳು, ಸಿಎಂ ಯಾವುದೇ ಕೆಲಸ ಮಾಡುತ್ತಿಲ್ಲ’ ಎಂದು ಕೂಡ ಸರ್ಕಾರದ ವಿರುದ್ಧ ಕೋಟಾ ಶ್ರೀನಿವಾಸ ಪೂಜಾರಿ ವಾಗ್ದಾಳಿ ನಡೆಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಎಲ್ಲಾ ಬ್ಯಾಂಕ್ ಗಳ ಸಾಲ ತೀರಿಸ್ತೀನಿ ಎಂದ ವಿಜಯ್ ಮಲ್ಯ! ಅಷ್ಟಕ್ಕೂ ಮಲ್ಯ ಭಯಕ್ಕೆ ಕಾರಣವಾಗಿದ್ದು ಏನು ಗೊತ್ತಾ?!

ನವದೆಹಲಿ: ದೇಶದ ವಿವಿಧ ಬ್ಯಾಂಕ್ ಗಳಲ್ಲಿ ಸಾವಿರಾರು ಕೋಟಿ ರೂ. ಸಾಲ ಮಾಡಿ ತೀರಿಸದೆ ವಿದೇಶದಲ್ಲಿ ...

news

ಸೋನಿಯಾ, ರಾಹುಲ್ ಗಾಂಧಿ ಕೊರಳಿಗೆ ಉರುಳಾದ ಹೆರಾಲ್ಡ್ ಕೇಸ್

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಅವ್ಯವಹಾರ ಪ್ರಕರಣ ಕಾಂಗ್ರೆಸ್ ಧುರೀಣರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ...

news

ಯಡಿಯೂರಪ್ಪಗೆ ವಯಸ್ಸಾಯ್ತು, ಅವರಿನ್ನು ಮುಖ್ಯಮಂತ್ರಿ ಆಗಲ್ಲ ಎಂದವರು ಯಾರು ಗೊತ್ತೇ?!

ಬೆಂಗಳೂರು: ಒಂದೆಡೆ ಆಪರೇಷನ್ ಕಮಲ ಮೂಲಕ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿ ಅಧಿಕಾರ ಹಿಡಿಯಲು ಬಿಜೆಪಿ ...

news

ಸಿಎಂ ಯೋಗಿ ಬಳಿಕ ಹನುಮಾನ್ ಹೆಸರಿನಲ್ಲಿ ಮತ್ತೊಂದು ವಿವಾದ ಸೃಷ್ಟಿಸಿದ ಬಿಜೆಪಿ ಸಂಸದೆ

ಲಕ್ನೋ: ಹನುಮಾನ್ ಬಗ್ಗೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಇದೀಗ ...

Widgets Magazine
Widgets Magazine