ರಮ್ಯಾಗೆ ಎಐಸಿಸಿಯಿಂದ ಸಿಗಲಿದೆಯಂತೆ ಬಿಗ್ ಗಿಫ್ಟ್…!

ಬೆಂಗಳೂರು, ಮಂಗಳವಾರ, 17 ಅಕ್ಟೋಬರ್ 2017 (10:00 IST)

Widgets Magazine

ಬೆಂಗಳೂರು: ಸದ್ಯ ರಮ್ಯಾ ರಾಷ್ಟ್ರೀಯ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮುಖ್ಯಸ್ಥೆಯಾಗಿ ಕೆಲಸ ಮಾಡ್ತಿದ್ದಾರೆ. ಇನ್ನೇನು 2018 ಚುನಾವಣೆಗೆ ಸ್ವಲ್ಪ ದಿನವೇ ಬಾಕಿಯಿದೆ. ಇದರ ನಡುವೆ ರಾಜ್ಯರಾಜಕಾರಣಕ್ಕೆ ರಮ್ಯಾ ವಾಪಸ್ ಬರ್ತಾರ ಅನ್ನೋ ಚರ್ಚೆ ಶುರುವಾಗಿದೆ.


ನಿನ್ನೆ ಎಐಸಿಸಿ ಬಿಡುಗಡೆ ಮಾಡಿರುವ ರಾಜ್ಯ ಕೆಪಿಸಿಸಿ ಕಾರ್ಯಕಾರಿಣಿ ಸಮಿತಿಯಲ್ಲಿ ಮೋಹಕ ತಾರೆ ರಮ್ಯಾಗೂ ಸ್ಥಾನ ನೀಡಲಾಗಿದೆ. 94 ನೂತನ ಕಾರ್ಯಕಾರಿಣಿ ಸದಸ್ಯರ ಪಟ್ಟಿಯಲ್ಲಿ ಮಂಡ್ಯ ಜಿಲ್ಲೆಯಿಂದ ರಮ್ಯಾರನ್ನು ಆಯ್ಕೆ ಮಾಡಿ ಎಐಸಿಸಿ ಆದೇಶ ಹೊರಡಿಸಿದೆ. ಹೀಗಾಗಿ ರಮ್ಯಾ ಮತ್ತೆ ರಾಜ್ಯ ರಾಜಕಾರಣಕ್ಕೆ ಮತ್ತೆ ವಾಪಸ್ ಆಗುವ ಸಾ‍ಧ್ಯತೆಗಳು ಇವೆ ಎನ್ನಲಾಗ್ತಿದೆ.

ರಮ್ಯಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾದ ಬಳಿಕ ಕಾಂಗ್ರೆಸ್ ಗೆ ಸಂಬಂಧಪಟ್ಟ ಸೋಷಿಯಲ್ ಮೀಡಿಯಾಗಳು ಹೆಚ್ಚು ಆ್ಯಕ್ಟೀವ್ ಆಗಿವೆ. ರಮ್ಯಾ ಕೂಡ ಈ ಮೂಲಕ ಚಾರ್ಮ್ ಹೆಚ್ಚಿಸಿಕೊಂಡಿದ್ದಾರೆ. ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ನಿದ್ದೆ ಬಿಟ್ಟು ಕೆಲಸ ಮಾಡುತ್ತಿರುವ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಟೀಂ, ನಿತ್ಯವೂ ಬಿಜೆಪಿ ವಿರುದ್ಧ ಟೀಕೆಗಳ ಸುರಿಮಳೆ ಹರಿಸುತ್ತಿವೆ.

ಹೀಗಾಗಿ ಮುಂದೊಂದು ದಿನ ರಮ್ಯಾಗೆ ಎಐಸಿಸಿ ದೊಡ್ಡ ಹುದ್ದೆ ನೀಡಿದರೂ ಆಶ್ಚರ್ಯವಿಲ್ಲ. ಯಾಕಂದ್ರೆ ಸದ್ಯ ಕಾಂಗ್ರೆಸ್ ನಲ್ಲಿರುವ ಪವರ್ ಫುಲ್ ವುಮೆನ್ ಕ್ಯಾಂಡಿಡೇಟ್ ರಮ್ಯಾ ಮೇಡಂ. ಹೀಗಾಗಿ ಅವರ ಮಂತ್ರಿಯಾದರೂ, ಸಿಎಂ ಆದರೂ ಅಚ್ಚರಿ ಪಡಬೇಕಿಲ್ಲ ಎನ್ನಲಾಗ್ತಿದೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

‘ನೆಹರೂ-ಗಾಂಧಿ ಕುಟುಂಬಕ್ಕೆ ಗುಜರಾತ್ ಎಂದರೆ ಕಣ್ಣು ಕುಕ್ಕುತ್ತದೆ’

ಅಹಮ್ಮದಾಬಾದ್: ಗುಜರಾತ್ ಚುನಾವಣೆ ಹತ್ತಿರ ಬರುತ್ತಿದ್ದಂತೆ ವಿಪಕ್ಷ ಕಾಂಗ್ರೆಸ್ ಮತ್ತು ನೆಹರೂ-ಗಾಂಧಿ ...

news

ಅಕ್ಟೋಬರ್ ಅಂತ್ಯಕ್ಕೆ ಧರ್ಮಸ್ಥಳಕ್ಕೆ ಪ್ರಧಾನಿ ಮೋದಿ

ಮಂಗಳೂರು: ಪ್ರಧಾನಿ ಮೋದಿ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಧರ್ಮಸ್ಥಳಕ್ಕೆ ಅಕ್ಟೋಬರ್ 29 ಕ್ಕೆ ಭೇಟಿ ...

news

ದೇವೇಗೌಡರ ಬಗ್ಗೆ ಆಕ್ಷೇಪಾರ್ಹವಾಗಿ ಹೇಳಿಕೆ ನೀಡಿ ಸಂಕಷ್ಟಕ್ಕೆ ಸಿಲುಕಿದ ಜಮೀರ್ ಅಹಮ್ಮದ್

ಬೆಂಗಳೂರು: ದೇವೇಗೌಡರು ಮೃತಪಟ್ಟ ನಂತರ ಎಚ್ ಡಿ ರೇವಣ್ಣ ಕಾಂಗ್ರೆಸ್ ಸೇರ್ತಾರೆ ಎಂದಿದ್ದ ಜಮೀರ್ ಅಹಮ್ಮದ್ ...

news

ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ

ಮಡಿಕೇರಿ: ಕನ್ನಡ ನಾಡಿನ ಜೀವನದಿ ಕಾವೇರಿಯ ತೀರ್ಥೋದ್ಭವಕ್ಕೆ ತಲಕಾವೇರಿಯಲ್ಲಿ ಕ್ಷಣಗಣನೆ ಪ್ರಾರಂಭವಾಗಿದೆ. ...

Widgets Magazine