ಮತ್ತೆ ಮೋದಿ ಪತ್ನಿಯ ವಿಚಾರ ಕೆದಕಿದ ರಮ್ಯಾ

ಬೆಂಗಳೂರು, ಶನಿವಾರ, 15 ಸೆಪ್ಟಂಬರ್ 2018 (10:33 IST)

ಬೆಂಗಳೂರು: ಪ್ರಧಾನಿ ಮೋದಿ ವೈಯಕ್ತಿಕ ವಿಚಾರವನ್ನು ಕೆದಕಿ ಮತ್ತೆ ಕಾಂಗ್ರೆಸ್‍ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಟೀಕೆ ಮಾಡಿದ್ದಾರೆ.
 
ಯುಜಿಸಿ ಅನುದಾನಿತ ವಿವಿಯೊಂದರಲ್ಲಿ ಮಹಿಳೆಯರಿಗೆ ಆದರ್ಶ ಸೊಸೆ ಹೇಗೆ ಆಗುವುದು ಎಂಬ ವಿಚಾರವನ್ನು ಪಠ್ಯದಲ್ಲಿ ಅಳವಡಿಸಲಾಗುತ್ತಿದೆ ಎಂಬ ಸುದ್ದಿ ಹಿನ್ನಲೆಯಲ್ಲಿ ರಮ್ಯಾ ಪ್ರಧಾನಿ ಮೋದಿ ವೈವಾಹಿಕ ವಿಚಾರವನ್ನು ಕೆಣಕಿದ್ದಾರೆ.
 
ಮೊದಲು ಪುರುಷರು ಆದರ್ಶ ಪತಿ ಆಗುವುದು ಹೇಗೆ ಎಂದು  ಪ್ರಧಾನಿ ಮೋದಿಯವರಿಂದಲೇ ಕೋರ್ಸ್ ಪ್ರಾರಂಭಿಸಿದರೆ ಹೇಗೆ? ಒಂದು ವೇಳೆ ಇದು ಅವರ ವೈಯಕ್ತಿಕ ಆಯ್ಕೆ ಎಂದಾದರೆ ಆ ನಿಯಮ ನಮಗೆ ಮಹಿಳೆಯರಿಗೂ ಅನ್ವಯವಾಗುತ್ತದೆ. ಸರ್ಕಾರ ಮಹಿಳೆಯರ ವೈಯಕ್ತಿಕ ವಿಚಾರದಲ್ಲಿ ಮೂಗು ತೂರಿಸಲಾಗದು. ನಾವು ಹೇಗಿರಬೇಕೆಂದು ಯಾರೂ ಹೇಳಿಕೊಡಬೇಕಾಗಿಲ್ಲ ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಪ್ರಧಾನಿ ಮೋದಿ ವೈವಾಹಿಕ ವಿಚಾರವನ್ನು ಕೆದಕಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪೊಲೀಸ್ ಅಧಿಕಾರಿಯ ಪುತ್ರನಿಂದ ಯುವತಿಗೆ ಹಿಗ್ಗಾಮುಗ್ಗಾ ಥಳಿತ

ನವದೆಹಲಿ: ದೆಹಲಿಯ ಪೊಲೀಸ್ ಅಧಿಕಾರಿಯೊಬ್ಬರ ಪುತ್ರ ಯುವತಿಯೊಬ್ಬಳ ಮೇಲೆ ಹಿಗ್ಗಾ ಮುಗ್ಗಾ ಥಳಿಸುತ್ತಿರುವ ...

news

ನನಗೂ, ಬಿಕ್ಕಟ್ಟಿಗೂ ಸಂಬಂಧವಿಲ್ಲ: ಸತೀಶ್ ಜಾರಕಿಹೊಳಿ

ಬೆಳಗಾವಿ: ಬೆಳಗಾವಿಯಲ್ಲಿ ಸದ್ಯಕ್ಕೆ ಉಂಟಾಗಿರುವ ಬಂಡಾಯಕ್ಕೂ ತಮಗೂ ಸಂಬಂಧವಿಲ್ಲ ಎಂದು ಸತೀಶ್ ಜಾರಕಿಹೊಳಿ ...

news

ಬೆಂಗಳೂರಿನ ಪಾಲಿಗೆ ನಿಜವಾಗುತ್ತಾ ಹವಾಮಾನ ಇಲಾಖೆಯ ಭವಿಷ್ಯ?!

ಬೆಂಗಳೂರು: ಕೇರಳ ಮತ್ತು ಕೊಡಗಿನಲ್ಲಿ ಪ್ರವಾಹ ಉಂಟಾದಾಗ ಸೆಪ್ಟೆಂಬರ್ ನಲ್ಲಿ ಬೆಂಗಳೂರಿನಲ್ಲೂ ಭಾರೀ ...

news

ಆಪರೇಷನ್ ಕಮಲ ಮಾಡಲು ಹೊರಟ ಬಿಜೆಪಿ ನಾಯಕರಿಗೆ ಅಮಿತ್ ಶಾ ಖಡಕ್ ಸೂಚನೆ?

ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷವಾಗಿರುವ ಕಾಂಗ್ರೆಸ್ ನ ಕೆಲವು ಶಾಸಕರನ್ನು ಬಿಜೆಪಿ ...

Widgets Magazine