ಪ್ರಿಯಕರನ ಜೊತೆಗೆ ಪಾರ್ಕ್ ನಲ್ಲಿ ಕುಳಿತಿದ್ದ ಬಾಲಕಿಯ ಮೇಲೆ ಅತ್ಯಾಚಾರ

ಹುಬ್ಬಳ್ಳಿ, ಸೋಮವಾರ, 14 ಜನವರಿ 2019 (10:30 IST)

ಹುಬ್ಬಳ್ಳಿ : ಪ್ರಿಯಕರನ ಜೊತೆಗೆ ಏಕಾಂತದಲ್ಲಿ ಕುಳಿತು ಮಾತನಾಡುತ್ತಿದ್ದ 15 ವರ್ಷದ ಬಾಲಕಿಯನ್ನು ಹೆದರಿಸಿ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಎಸಗಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.


ರೈಲ್ವೇ ಕ್ವಾಟರ್ಸ್ ಸಮೀಪ ಸೆಲ್ಟಮೆಂಟ್ ಪ್ರದೇಶದ ಕಿರಣ್ ಚಂದ್ರಶೇಖರ್ ಗೋಕಾಕ್ (28) ಅತ್ಯಾಚಾರ ಎಸಗಿದ ಕಾಮುಕನಾಗಿದ್ದು, ಅಭಿಷೇಕ್ ಬಳ್ಳಾರಿ (23), ರಾಹುಲಾ ಜಾಧವ್ (33) ಹಾಗೂ ಕನ್ನಯ್ಯ ಕೊರವರ (24) ಆತನಿಗೆ ಸಹಾಯ ಮಾಡಿದ ಆರೋಪಿಗಳು. ಬಾಲಕಿ ತನ್ನ ಪ್ರಿಯಕರನ ಜೊತೆ ಹಳೇ ಹುಬ್ಬಳ್ಳಿಯ ಮಂಟೂರು ರಸ್ತೆಯ ಪಾರ್ಕ್ ಒಂದರಲ್ಲಿ ಏಕಾಂತದಲ್ಲಿ ಕುಳಿತು ಮಾತನಾಡುತ್ತಿದ್ದ ವೇಳೆ ಅಲ್ಲಿಗೆ ಬಂದ ಕಿರಣ್ ಚಂದ್ರಶೇಖರ್ ಗೋಕಾಕ್ ತನ್ನ  ಸಹಚರರ ಸಹಾಯದಿಂದ  ಬಾಲಕಿಯನ್ನು ಬೆದರಿಸಿ ಎತ್ತಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.


ಈ ಘಟನೆಯ ಬಗ್ಗೆ ಸಂತ್ರಸ್ತ ಬಾಲಕಿ ತನ್ನ ಪೋಷಕರಿಗೆ ತಿಳಿಸಿದ್ದು,  ಈ ಸಂಬಂಧ ಅತ್ಯಾಚಾರ ಸಂತ್ರಸ್ತ ಬಾಲಕಿಯ ಪೋಷಕರು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕ್ಲರ್ಕ್ ಎಂದು ಕರೆದ ಮೋದಿಗೆ ತಿರುಗೇಟು ನೀಡಿದ ಸಿಎಂ ಕುಮಾರಸ್ವಾಮಿ

ಮೈಸೂರು : ಸಿಎಂ ಕುಮಾರಸ್ವಾಮಿಯನ್ನು ಕ್ಲರ್ಕ್ ಅಂತ ಕರೆದಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದೀಗ ...

news

ಮಹಿಳೆಯರು ಪತಿಯ ಬದಲು ಯಾರ ಜೊತೆ ಮಲಗಿದರೆ ನೆಮ್ಮದಿಯಿಂದ ನಿದ್ರಿಸುತ್ತಾರಂತೆ ಗೊತ್ತಾ?

ನ್ಯೂಯಾರ್ಕ್ : ಹೆಚ್ಚಾಗಿ ಮಹಿಳೆಯರು ತಮ್ಮ ಪತಿಯ ಜೊತೆ ಅಥವಾ ಮಕ್ಕಳ ಜೊತೆ ಮಲಗಲು ಇಷ್ಟಪಡುತ್ತಾರೆ ಎಂದು ...

news

ಅಣ್ಣನನ್ನು ಮದುವೆಯಾದ ಮಗಳಿಗೆ ತಾಯಿ ಮಾಡಿದ್ದೇನು ಗೊತ್ತಾ?

ಚಂಡೀಗಢ : ಸಂಬಂಧದಲ್ಲಿ ಅಣ್ಣನಾದ ವ್ಯಕ್ತಿಯನ್ನು ಮದುವೆಯಾದ ಕಾರಣಕ್ಕೆ ತಾಯಿಯೇ ಮಗಳ ಮೇಲೆ ಚಾಕುವಿನಿಂದ ...

news

ಅತ್ಯಾಚಾರ ಸಂತ್ರಸ್ತೆ ಕೋರ್ಟ್ ನಲ್ಲಿ ಸಾಕ್ಷಿ ಹೇಳಬಾರದೆಂದು ದುಷ್ಕರ್ಮಿಗಳು ಮಾಡಿದ್ದೇನು ಗೊತ್ತಾ?

ಗುಜರಾತ್ : ನ್ಯಾಯಾಲಯದಲ್ಲಿ ಸಾಕ್ಷಿ ಹೇಳಬಾರದು ಎಂದು ಅತ್ಯಾಚಾರ ಸಂತ್ರಸ್ತೆಗೆ ದುಷ್ಕರ್ಮಿಗಳು ...