20 ವರ್ಷದ ಯುವತಿಗೆ ಬ್ಲ್ಯಾಕ್‌ಮೇಲ್ ಮಾಡಿ ಸಾಮೂಹಿಕ ಅತ್ಯಾಚಾರ

ಬೆಂಗಳೂರು, ಬುಧವಾರ, 11 ಅಕ್ಟೋಬರ್ 2017 (15:13 IST)

20 ವರ್ಷದ ಯುವತಿಗೆ ಬ್ಲ್ಯಾಕ್‌ಮೇಲ್ ಮಾಡಿ ಸಾಮೂಹಿಕವಾಗಿ ಅತ್ಯಾಚಾರವೆಸಗಿದ ಹೇಯ ಘಟನೆ ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.
20 ವರ್ಷದ ಯುವತಿಗೆ ಬ್ಲ್ಯಾಕ್‌ಮೇಲ್ ಮಾಡಿ ಬೆದರಿಸಿ ನಾಲ್ವರು ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.  
 
ನಿನ್ನ ಪ್ರಿಯಕರನೊಂದಿಗೆ ಸಲುಗೆಯಿಂದಿರುವ ವಿಡಿಯೋ ನಮ್ಮ ಬಳಿಯಿದ್ದು, ನಾವು ಹೇಳಿದಂತೆ ಕೇಳದಿದ್ದಲ್ಲಿ ವಿಡಿಯೋ ವೈರಲ್ ಮಾಡುತ್ತೇವೆ ಎಂದು ಬೆದರಿಸಿ, ಆಕೆಯನ್ನು ಅನೇಕಲ್‌ನಲ್ಲಿರುವ ಬೆಟ್ಟಕ್ಕೆ ಕರೆದುಕೊಂಡು ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಯುವತಿ ಗರ್ಭಿಣಿಯಾದ ನಂತರ ಪೋಷಕರು ಯುವತಿಯನ್ನು ವಿಚಾರಿಸಿದಾಗ ನಾಲ್ವರು ಕಾಮುಕರು ಆರು ತಿಂಗಳುಗಳಿಂದ ಅತ್ಯಾಚಾರವೆಸಗಿರುವ ಬಗ್ಗೆ ಬಾಯಿಬಿಟ್ಟಿದ್ದಾಳೆ. ಪೋಷಕರು ಆರೋಪಿಗಳ ವಿರುದ್ಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
 
ಸಾಮೂಹಿಕ ಅತ್ಯಾಚಾರ ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಟಾರಿಯಾಗೆ ಬೆದರಿಕೆ: ಶಾಸಕ ಶಿವಮೂರ್ತಿ ವಿರುದ್ಧ ಸಿಎಂ ಗರಂ

ಬೆಂಗಳೂರು: ಐಎಎಸ್ ಅಧಿಕಾರಿ ರಾಜೇಂದ್ರ ಕಟಾರಿಯಾಗೆ ಧಮ್ಕಿ ಹಾಕಿದ ವಿಚಾರಕ್ಕೆ ಸಂಬಂಧಪಟ್ಟಂತೆ ಸಿಎಂ ...

news

ಒಂದೇ ದೇಶ ಒಂದೇ ಮೋದಿ ಅನ್ನೋ ಕಾಲ ಬರುತ್ತೆ ಎಚ್ಚರ: ವೈಎಸ್‌ವಿ ದತ್ತಾ

ಬೆಂಗಳೂರು: ಒಂದೇ ದೇಶ ಒಂದೇ ಮೋದಿ ಎನ್ನುವ ಕಾಲ ಬರುತ್ತದೆ ಎಚ್ಚರವಾಗಿರಿ ಎಂದು ಜೆಡಿಎಸ್ ಮುಖಂಡ ವೈಎಸ್‌ವಿ ...

news

ಪರಿವರ್ತನಾ ಯಾತ್ರೆಯ ಹೊಣೆ ಆರ್.ಅಶೋಕ್‌ಗೆ ವಹಿಸಿದ ಬಿಎಸ್‌ವೈ

ಬೆಂಗಳೂರು: ರಾಜ್ಯದ 224 ಕ್ಷೇತ್ರಗಳಲ್ಲಿ ಸಂಚರಿಸಲಿರುವ ಪರಿವರ್ತನಾ ಯಾತ್ರೆಯ ಹೊಣೆಯನ್ನು ಬಿಜೆಪಿ ...

news

‘2-3 ವಾರಗಳಲ್ಲಿ ಬೆಂಗಳೂರು ಯಾವ ರೀತಿ ಅಭಿವೃದ್ಧಿ ಆಗುತ್ತೆ ನೀವೇ ನೋಡಿ’

ಬೆಂಗಳೂರು: ರಸ್ತೆ ಗುಂಡಿಯಿಂದಾಗಿ ಅಪಘಾತಗಳು ಪ್ರಕರಣಗಳು ಹೆಚ್ಚಾಗುತ್ತಿರುವ ಕುರಿತಂತೆ ಮಾಧ್ಯಮಗಳ ...

Widgets Magazine