ಅಪರೂಪದ ಕೈ ಚಕ್ಕುಲಿ ಕಂಬಳ

ಶಿರಸಿ, ಬುಧವಾರ, 5 ಸೆಪ್ಟಂಬರ್ 2018 (17:28 IST)

ಗಣೇಶ ಚತುರ್ಥಿ ಅಗಮಿಸುತ್ತಿದ್ದಂತೆ ಎಲ್ಲರ ಮನೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ವಿಶೇಷವಾಗಿ ಗಣೇಶ ಚೌತಿಗೆ ಮಾಡುವ ಗಣೇಶನಿಗೆ ಪ್ರಿಯವಾದ ಚಕ್ಕುಲಿ ಮಾಡುವ ಕೆಲಸ ಎಲ್ಲೆಡೆ ಸಂಭ್ರಮದಿಂದ ಕೆಲಸ ಸಾಗಿದೆ.

ಶಿರಸಿಯ ಹೆಗಡೆಕಟ್ಟಾ ಸಮೀಪದ ಕಲ್ಮನೆ ಊರಿನಲ್ಲಿ ಎಲ್ಲರೂ ಚಕ್ಕುಲಿ ಕಂಬಳ ಮಾಡುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲೂ ಉತ್ತರಕನ್ನಡ ಜಿಲ್ಲೆ ಶಿರಸಿಯ  ಕೆಲವೇ ಕಡೆ ಮೊದಲಿನಿಂದಲೂ ರೂಢಿಯಲ್ಲಿರುವ ಕೈ ಚಕ್ಕುಲಿ ಕಂಬಳ ಶುರುವಾಗಿದೆ. ಎಲ್ಲ ಕಂಬಳದಂತೆ ಇಲ್ಲೂ ಕಲ್ಮನೆ ಹೆಗ್ಗಾರು, ಹೆಗಡೆಕಟ್ಟಾ ಸುತ್ತಮುತ್ತಲಿನ ಉರಿನವರು, ಸಂಬಂದಿಗಳು ಒಬ್ಬರು ಮತ್ತೊಬ್ಬರ ಮನೆಗೆ ಕಂಬಳಕ್ಕೆ ಸಹಕರಿಸುತ್ತಾರೆ.  ಕಂಬಳ ದಲ್ಲಿ ಬರೀ ಚಕ್ಕುಲಿ ಅಷ್ಟೇ ಅಲ್ಲದೆ,  ಅಕ್ಷರಗ ಳನ್ನು ಸಹ ಬರೆಯುತ್ತಾರೆ. ಕಾಲ ಬದಲಾದಂತೆ ಮನುಷ್ಯನು ವೈಜ್ಞಾನಿಕ ಉಪಕರಣಗಳಿಗೆ ಅಂಟಿಕೊಂಡಿದ್ದರು.

ಈ ಊರಲ್ಲಿ ಮಾತ್ರ ಎಲ್ಲರೂ ಪ್ರತಿವರ್ಷ ಕೈ ಕಂಬಳವನ್ನೇ ಮಾಡುತ್ತಾರೆ. ಹಿಂದಿನಿಂದ ಬಂದ ಸಂಪ್ರದಾಯ ಒಂದುಕಡೆ ಆಗಿದ್ರೆ, ಇಂತಹ ವಿಶೇಷ ಕಲೆ ಎಲ್ಲರಿಗೂ ಬರೋಲ್ಲ, ಈ ಚಕ್ಕುಲಿ ರುಚಿ ಹಾಗೂ ಬಾಳಿಕೆ ಜಾಸ್ತಿ. ಉಪಕರಣಗಳಿಂದ ಮಾಡಿದ ಚಕ್ಕುಲಿ ಕೆಲವೇ ದಿನ ಉಳಿದರೆ, ಇದನ್ನು ನಾಲ್ಕಾರು ತಿಂಗಳುಗಳ ಕಾಲ ಇಡಬಹುದು. ಹಬ್ಬದಲ್ಲಿ ಬಂದ ಸಂಬಂಧಿಕರಿಗೆ ಮತ್ತು ದೂರದ ಉರಲ್ಲಿರುವವರಿಗೆ  ಪಾರ್ಸಲ್ ಕಳಿಸಿಕೊಡುತ್ತಾರೆ. ಆದ್ದರಿಂದ ಈ ಊರಲ್ಲಿ ಪ್ರತಿ ಮನೆಯಲ್ಲಿಯೂ ಒಂದೇ ಬಾರಿ ಎರಡು, ಮೂರು ಕ್ಯಾನ್ ಗಟ್ಟಲೇ ಚಕ್ಕುಲಿ ಮಾಡಿ ತುಂಬಿಡುತ್ತಾರೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಗಳಿಗೆ ಮನಬಂದಂತೆ ಥಳಿಸಿದ ತಾಯಿ!

ತಾಯಿಯೋರ್ವಳು ಮಗಳಿಗೆ ಮನಬಂದಂತೆ ಹಲ್ಲೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

news

ಸರ್ಕಾರಿ ಶಾಲೆಯಲ್ಲೊಂದು ಪಾಠ ಹೇಳೋ ಶಾಲಾ ಕೊಠಡಿ

ಸಾಮಾನ್ಯವಾಗಿ ಸರ್ಕಾರಿ ಶಾಲೆಗಳು ಅಂದ್ರೆ ನೆನಪಾಗೋದು ಒಡೆದ ಹೆಂಚು, ಮುರಿದ ಕಿಟಕಿ, ಬಿರುಕು ಬಿಟ್ಟ ಗೋಡೆ. ...

news

ಖಾಸಗಿ ವಾಹಿನಿ ಕ್ಯಾಮೆರಾಮನ್ ಮೇಲೆ ಪೊಲೀಸರ ದರ್ಪ

ಖಾಸಗಿ ವಾಹಿನಿ ಕ್ಯಾಮರಾಮನ್ ಮೇಲೆ ಪೊಲೀಸರು ದರ್ಪ ಮೆರೆದ ಘಟನೆ ನಡೆದಿದೆ. ಮನಬಂದಂತೆ ಹಿಗ್ಗಾಮುಗ್ಗಾ ...

news

ಡಿಕೆಶಿ ಹಸ್ತಕ್ಷೇಪ ಮಾಡಲು ಬಿಡಲ್ಲ ಎಂದ ಜಾರಕಿಹೊಳಿ!

ನಮ್ಮ ಸಮಸ್ಯೆ ಇದ್ದಾಗ ನಾವು ಕರೆದರೆ ಬರಲಿ. ಅವರಾಗಿ ಹಸ್ತಕ್ಷೇಪ ಮಾಡಲು ನಾವು ಬಿಡಲ್ಲ. ಡಿಕೆಶಿ ಇರಲಿ ಯಾರೇ ...

Widgets Magazine