ಈಶ್ವರಪ್ಪಗೆ ಟಿಕೆಟ್ ತಪ್ಪಿದರೆ ರಾಯಣ್ಣ ಬ್ರಿಗೇಡ್ ಮುನ್ನೆಲೆಗೆ

ಬೆಂಗಳೂರು, ಗುರುವಾರ, 15 ಫೆಬ್ರವರಿ 2018 (22:28 IST)

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರಿಗೆ ಟಿಕೆಟ್ ದೊರೆಯದಿದ್ದರೆ ಪಕ್ಷ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮುಖಂಡರು ಎಚ್ಚರಿಸಿದ್ದಾರೆ.

ಶಿವಮೊಗ್ಗ ನಗರ ಕ್ಷೇತ್ರದಿಂದ ಈಶ್ವರಪ್ಪ ಅವರಿಗೆ ಟಿಕೆಟ್ ನೀಡಬಾರದು ಎಂಬ ಚರ್ಚೆ ಯಡಿಯೂರಪ್ಪ ಅವರ ನಿವಾಸದಲ್ಲಿ ನಡೆದಿತ್ತು. ಈ ಹಿನ್ನೆಲೆಯಲ್ಲಿ ರಾಯಣ್ಣ ಬ್ರಿಗೇಡ್ ಮುಖಂಡರು ಅಮಿತ್ ಶಾ ಅವರಿಗೆ ಪತ್ರವನ್ನು ಬರೆದಿದ್ದು, ಈಶ್ವರಪ್ಪ ಅವರಿಗೆ ಟಿಕೆಟ್ ತಪ್ಪಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದಿದ್ದಾರೆ.

ಆನೇಕಲ್ ದೊಡ್ಡಯ್ಯ ಬರೆದಿರುವ ನಾಲ್ಕು ಪುಟಗಳ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಿಂದುಳಿದ ವರ್ಗದವರಿಗೆ ಸರಿಯಾದ ಸ್ಥಾನಗಳು ನೀಡುವುದಿಲ್ಲ ಎಂಬ ಆರೋಪಗಳಿದ್ದರೂ ಈಶ್ವರಪ್ಪ ಅವರು ಪಕ್ಷ ನೀಡಿದ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಇಂತಹವರಿಗೆ ಟಿಕೆಟ್ ತಪ್ಪುವುದೆಂದರೆ ಪಕ್ಷದಲ್ಲಿ ಸಾಮಾಜಿಕ ನ್ಯಾಯಕ್ಕೆ ಬೆಲೆ ಇದೆಯೇ ಎಂಬ ಪ್ರಶ್ನೆ ಎದುರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ, ಸಿದ್ದರಾಮಯ್ಯ ಮುಖ್ಯಮಂತ್ರಿ- ಮಹದೇವಪ್ಪ

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ...

news

ಡಿ.ಕೆ.ಶಿವಕುಮಾರಗೆ ಐಟಿ ಶಾಕ್- ಮೂರು ಎಫ್ಐಆರ್

ಇಂಧನ ಸಚಿವ ಡಿ.ಕೆ.ಶಿವಕುಮಾರ ಅವರಿಗೆ ಐಟಿ ಇಲಾಖೆ ಶಾಕ್ ನೀಡಿದ್ದು, ಮೂರು ಎಫ್ಐಆರ್ ದಾಖಲು ಮಾಡಲಾಗಿದೆ.

news

ಅಟೋ ಚಾಲಕನಿಗೆ ವಿಧಾನಪರಿಷತ್ ಸ್ಥಾನ: ಕುಮಾರಸ್ವಾಮಿ ಭರವಸೆ

ಬೆಂಗಳೂರು: ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ವಿಧಾನ ಪರಿಷತ್‌ಗೆ ಆಟೋರಿಕ್ಷಾ ಅಥವಾ ಕ್ಯಾಬ್ ಡ್ರೈವರ್‌ ...

news

ಮ್ಯಾನ್‌ ಹೋಲ್‌‌ಗಿಳಿದ್ರೆ ಏಡ್ಸ್ ಬರುತ್ತೆ: ಬಿಜೆಪಿ ಶಾಸಕ

ಬೆಂಗಳೂರು: ಮ್ಯಾನ್‌ಹೋಲ್ ಸ್ವಚ್ಚಗೊಳಿಸುವವರಿಗೆ ಎಚ್‌ಐವಿ ಅಥವಾ ಏಡ್ಸ್ ಬರುತ್ತದೆ ಎಂದು ಬಿಜೆಪಿ ...

Widgets Magazine
Widgets Magazine