ಕೋಟೆನಾಡಿನಿಂದ ರಣಕಹಳೆ ಊದಲು ಕೈಪಾಳೆಯ ರೆಡಿ

ಬೀದರ್, ಶುಕ್ರವಾರ, 10 ಆಗಸ್ಟ್ 2018 (12:58 IST)

ಲೋಕಸಭಾ ಹಾಗೂ ಸ್ಥಳೀಯ ಚುನಾವಣೆ ಹಿನ್ನಲೆಯಲ್ಲಿ ರಾಷ್ಟ್ರೀಯ ಪಕ್ಷಗಳ ರಣಕಹಳೆ ಜೋರಾಗಿದೆ. ಗಡಿನಾಡಿನಿಂದ ಬಿಜೆಪಿ ರಾಜ್ಯಾಧ್ಯಕ್ಷರ ಪ್ರವಾಸದ ಬೆನ್ನಲ್ಲೇ ಈಗ ಕಾಂಗ್ರೆಸ್ ಅಧ್ಯಕ್ಷ ಭೇಟಿ ನೀಡಿದ್ದಾರೆ.
 
ಗಡಿನಾಡು ಬೀದರನಿಂದಲೆ ರಣಕಹಳೆ ಮೊಳಗಿಸಲು ರಾಷ್ಟ್ರೀಯ ಪಕ್ಷಗಳು ಮುಂದಾಗಿವೆ.
ಲೋಕಸಭಾ ಹಾಗೂ ಸ್ಥಳೀಯ ಚುನಾವಣೆಗೆ ಹಿನ್ನಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ  ಬಿ.ಎಸ್. ಯಡಿಯೂರಪ್ಪ ರಾಜ್ಯ ಪ್ರವಾಸ ನಡೆಸುತ್ತಿರುವ ಬೆನ್ನಲ್ಲೆ ಈಗ ಕೋಟೆ ನಗರಿ ಬೀದರ್ ಗೆ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ದಿನೇಶ್ ಗುಂಡೂರಾವ್ ಭೇಟಿ ನೀಡಿದ್ದಾರೆ. ನಗರದ ರಾಘವೇಂದ್ರ  ದೇವಸ್ಥಾನಕ್ಕೆ ಭೇಟಿ ನೀಡಿ ಸ್ವಾಮಿ ದರ್ಶನ  ಮಾಡಿದರು.

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್  ಗಾಂಧಿ ಇದೇ ತಿಂಗಳ 13 ರಂದು ಬೀದರ್ ಗೆ ಆಗಮಿಸಲಿದ್ದಾರೆ.  ಲೋಕಸಭೆ ಹಾಗೂ ಸ್ಥಳೀಯ ಚುನಾವಣೆ ಹಿನ್ನಲೆ ಬೀದರನಿಂದ ರಾಹುಲ್‌ ಗಾಂಧಿ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ. ಹೀಗಾಗಿ ಬೀದರ ನಗರಕ್ಕೆ ಭೇಟಿ ನೀಡಿರುವ ಕೆಪಿಸಿಸಿ  ರಾಜ್ಯ ಅದ್ಯಕ್ಷ ದಿನೇಶ್ ಗುಂಡುರಾವ್,  ನೆಹರು ಕ್ರೀಡಾಂಗಣದಲ್ಲಿ ವೇದಿಕೆ ಪೂರ್ವಭಾವಿ ತಯಾರಿ ವೀಕ್ಷಣೆ ಮಾಡಿದರು.
 


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ದೇಶಕ್ಕೆ ನೆಹರೂ ಮನೆತನ ಶಾಪವಾಯ್ತು ಎಂದ ಬಿಜೆಪಿ ಶಾಸಕ

ಕಾಂಗ್ರೆಸ್, ಆಡಳಿತ ಹಾಗೂ ನೆಹರೂ ಮನೆತನದ ಆಡಳಿತ ಈ ದೇಶಕ್ಕೆ ವರವಾಗಿಲ್ಲ ಶಾಪವಾಯ್ತು. ಹೀಗಂತ ಬಿಜೆಪಿ ...

news

ಜೈಲ್ ಭರೋ ನಡೆಸಿದ ನೌಕರರು…

ಕನಿಷ್ಠ ವೇತನ ಜಾರಿಗೊಳಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಪೊಲೀಸರು ವಶಕ್ಕೆ ...

news

ಸಹಕಾರಿ ಸಂಘಗಳ 9448 ಕೋಟಿ ರೂ. ಚಾಲ್ತಿ ಸಾಲ ಮನ್ನಾ

ಸಹಕಾರಿ ಬ್ಯಾಂಕಿನ 10-7-2018ರ ವರೆಗಿನ ರೈತರ 1 ಲಕ್ಷ ರೂ. ವರೆಗಿನ ಚಾಲ್ತಿ ಸಾಲ ಸಂಪೂರ್ಣ ಮನ್ನಾ ಮಾಡಲು ...

news

ನಾಟಿ ಮಾಡಲು ಕೂಲಿಗೆ ಬನ್ನಿ ಎಂದು ಸಿಎಂ ಎಚ್ ಡಿಕೆಗೇ ಆಹ್ವಾನ ನೀಡಿದ ರೈತ!

ಮಂಡ್ಯ: ರೈತರನ್ನು ಹುರಿದುಂಬಿಸಲು ನಾಟಿ ಮಾಡಲು ಗದ್ದೆಗೆ ಇಳಿಯಲು ಹೊರಟಿರುವ ಸಿಎಂ ಕುಮಾರಸ್ವಾಮಿಗೆ ಮಂಡ್ಯದ ...

Widgets Magazine