ಗೃಹಸಚಿವರ ಮನೆ ಮುಂದೆಯೇ ದರೋಡೆ!

ಬೆಂಗಳೂರು, ಬುಧವಾರ, 11 ಜುಲೈ 2018 (18:03 IST)ಹೋಂ ಮಿನಿಸ್ಟರ್ ಆದ್ರೆನೂ, ಪವರ್ ಮಿನಿಸ್ಟರ್ ಆದ್ರೆನೂ, ನಮ್ದೆ ಹವಾ... ಅಂತ ಕೈ ಚಳಕ ತೋರೊ ಕಳ್ಳರು. ಗೃಹಸಚಿವರ ಮನೆ ಮುಂದೆಯೇ ದರೋಡೆ ನಡೆಸಿದ್ದಾರೆ.
 
ಚಾಕು ತೋರಿಸಿ ಹಣ, ಮೊಬೈಲ್ ಕಿತ್ತ ಕಿರಾತಕರು ಪರಾರಿಯಾಗಿದ್ದಾರೆ. ಗೃಹಸಚಿವ ಪರಮೇಶ್ವರ ಸದಾಶಿವನಗರ ನಿವಾಸದ ಮುಂದೆಯೇ ಘಟನೆ ನಡೆದಿದೆ. ಹೋಂ ಮಿನಿಸ್ಟರ್ ಮನೆ ಮುಂದೇನೆ ಹೀಗಾದ್ರೆ ರಾಜ್ಯದ ಬೇರೆ ಭಾಗಗಳಲ್ಲಿ ಪೊಲೀಸ್ ಭದ್ರತೆ ಹೇಗೆ..? ಎಂಬ ಪ್ರಶ್ನೆ ಜನರನ್ನು ಕಾಡಲಾರಂಭಿಸಿದೆ. ಹೋಂ ಮಿನಿಸ್ಟರ್ ಮನೆಮುಂದೆ ಪೊಲೀಸ್ ಎಸ್ಕಾರ್ಟ್ ವಾಹನ ಇದ್ರು ಡೊಂಟ್ ಕೇರ್ ಎಂದ ಕಳ್ಳರು. ಸದಾಶಿವನಗರ  ರಾಜಕೀಯ ನಾಯಕರು, ಉದ್ಯಮಿಗಳು ಸಿನಿಮಾತಾರೆಯರು ವಾಸವಾಗಿರೋ ಪ್ರತಿಷ್ಟಿತ ಏರಿಯಾ ಆಗಿದೆ.
 
ಕಳೆದ ಜುಲೈ 6 ರಾತ್ರಿ 9.30 ರ ವೇಳೆಗೆ ರಘು ಎಂಬಾತ ಗೃಹಮಂತ್ರಿಗಳ ಭೇಟಿಯಾಗಿ ಹೊರಬಂದಿದ್ದಾರೆ. ಗೃಹಮಂತ್ರಿಗಳ ಸ್ವಕ್ಷೇತ್ರ ಕೊರಟಗೆರೆಯಿಂದ ಬಂದಿದ್ದ ರಘು. ಮನೆಯಿಂದ ಹೊರಬಂದು ಮೆಜೆಸ್ಟಿಕ್'ಗೆ ತೆರಳಲು ಓಲಾ ಕ್ಯಾಬ್ ಬುಕ್ ಮಾಡಿ ನಿಂತಿದ್ದ. ಈ ವೇಳೆ ಡಿಯೋ ಬೈಕ್‌ನಲ್ಲಿ ಬಂದಿದ್ದ ಇಬ್ಬರು ಕಳ್ಳರಿಂದ ಚಾಕು ತೋರಿಸಿ ದರೋಡೆ ಮಾಡಿ, ಕೈ ಚಳಕ ತೋರಿದ್ದಾರೆ.

ರಘು ಬಳಿಯಿದ್ದ ಓಪೊ ಫೊನ್ ಜೇಬಲಿದ್ದ ಹತ್ತು ಸಾವಿರ ಹಣ ಕಿತ್ತೊಯ್ದ ಕಳ್ಳರು. ಪ್ರಕರಣ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಆಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಹೆಣ್ಣು ಶಿಶು ಅಪಹರಣ

ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶು ಅಪಹರಣವಾಗಿದೆ. ಹೆಣ್ಣು ಕೂಸು ಅಪಹರಣಕ್ಕೆ ಆಸ್ಪತ್ರೆ ಸಿಬಂದಿ ...

news

ಸಮುದಾಯ ಭವನ ಅಕ್ರಮ ನಿರ್ಮಾಣ: ಹೋರಾಟ

ಗ್ರಾಮಪಂಚಾಯಿತಿ ಮತ್ತು ಜನ ಪ್ರತಿನಿಧಿಗಳಿಂದ ಮಹಾ ಮೋಸವಾಗಿದೆಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಮೋಸ ಹೋದ ಚಿನ್ನದ ವ್ಯಾಪಾರಿ: ಸೆಲ್ಫಿ ವಿಡಿಯೋ ಸಾವಿನ ಸುಳಿವು ನೀಡಿ ಕಾಣೆ

ತನ್ನ ಆಸ್ತಿಯನ್ನ ಅಡವಿಟ್ಟು ಹಣ ಪಡೆಯದೆ ಮೋಸ ಹೋದ ಚಿನ್ನದ ವ್ಯಾಪಾರಿಯೊಬ್ಬ ಮನನೊಂದು ವಾಟ್ಸ್ ಆಪ್ ನಲ್ಲಿ ...

news

ಉಚಿತ ಬಸ್‍ಗಾಗಿ ಪ್ರತಿಭಟನೆ; ಲಾಠಿ ಏಟಿಗೆ ಬೆದರಿದ್ದ ವಿದ್ಯಾರ್ಥಿಗಳು ಹಾಜರ್

ಉಚಿತ ಬಸ್ ಪಾಸ್ ಗಾಗಿ ಪೊಲೀಸರ ಲಾಠಿ ಏಟಿಗೆ ಬೆದರಿದ್ದ ವಿದ್ಯಾರ್ಥಿ ಮುಖಂಡರು ಮಾಧ್ಯಮಗಳ ಮುಂದೆ ...

Widgets Magazine