ತುಳುವಿನಲ್ಲಿ ಸದಾನಂದ ಗೌಡರ ಇಂಟರೆಸ್ಟಿಂಗ್ ಟ್ವೀಟ್

ಬೆಂಗಳೂರು, ಶುಕ್ರವಾರ, 11 ಆಗಸ್ಟ್ 2017 (10:33 IST)

ಬೆಂಗಳೂರು: ಕೇಂದ್ರ ಸಚಿವ ಸದಾನಂದ ಗೌಡರು ಮೂಲತಃ ತುಳುನಾಡಿನವರು ಎಂಬುದು ಎಲ್ಲರಿಗೂ ಗೊತ್ತು. ಅವರು ತಮ್ಮ ಟ್ವಿಟರ್ ಪೇಜ್ ನಲ್ಲಿ ಮಾಡಿರುವ ತುಳು ಭಾಷೆಯ ಟ್ವೀಟ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.


 
ತುಳು ಭಾಷೆಯನ್ನು 8 ನೇ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆ ಟ್ವೀಟ್ ಮಾಡಿರುವ ಅವರು ತುಳು ಭಾಷೆಯಲ್ಲಿ ತಮ್ಮ ಜಲ ನೆಲದ ಬಗ್ಗೆ ಸಂದೇಶ ಬರೆದುಕೊಂಡಿದ್ದಾರೆ. ತುಳು ಭಾಷೆಯನ್ನು ಸಂವಿಧಾನದ 8 ನೇ ಪರಿಚ್ಛೇದಕ್ಕೆ ಸೇರಿಸುವುದಕ್ಕೆ ನನ್ನ ಸಹಮತವಿದೆ ಎಂದು ಕನ್ನಡದಲ್ಲಿ ಬರೆದುಕೊಂಡಿರುವ ಗೌಡರು ನಂತರ ತುಳುವಿನಲ್ಲಿ ಟ್ವೀಟ್ ಮಾಡಿದ್ದಾರೆ.
 
ತುಳು ಅಪ್ಪೆನ, ಪುಟ್ಟಾಯಿನ ಅಪ್ಪೆನ ಋಣ ತೀರಿಸಾವೆರ ಸಾಧ್ಯ ಇಜ್ಜಿ. ನಮ ಸೇವೆ ಮಲ್ಪುಗ. ತುಳು ಅಪ್ಪೆ ಜೋಕ್ಲು ಒಟ್ಟಾದ್ ನಮ ಹಕ್ಕುನ ಪಡೆಕ್ಕ (ತುಳು ತಾಯಿಯ, ಜನ್ಮದಾತೆಯ ಋಣ ತೀರಿಸಲು ಸಾಧ್ಯವಿಲ್ಲ. ನಾವು ಅವಳ ಸೇವೆ ಮಾಡೋಣ. ತುಳು ತಾಯಿಯ ಮಕ್ಕಳೆಲ್ಲಾ ಒಂದುಗೂಡಿ ನಮ್ಮ ಹಕ್ಕು ಪಡೆಯೋಣ) ಎಂದು ಗೌಡರು ಮಾಡಿರುವ ಟ್ವೀಟ್ ಗೆ ಭಾರೀ ಲೈಕ್ಸ್ ಬಂದಿದೆ. ನಟ ಜಗ್ಗೇಶ್ ಸೇರಿದಂತೆ ಸೆಲೆಬ್ರಿಟಿಗಳು ಇದನ್ನು ರಿಟ್ವೀಟ್ ಮಾಡಿದ್ದಾರೆ.
 
ಇದನ್ನೂ ಓದಿ… ಉಷಾಪತಿ ಇದೀಗ 13 ನೇ ಉಪರಾಷ್ಟ್ರಪತಿ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಸದಾನಂದ ಗೌಡ ಟ್ವಿಟರ್ ತುಳುಭಾಷೆ ರಾಜ್ಯ ಸುದ್ದಿಗಳು Twitter Sadananda Gowda Tulu Language State News

ಸುದ್ದಿಗಳು

news

ಉಷಾಪತಿ ಇದೀಗ 13 ನೇ ಉಪರಾಷ್ಟ್ರಪತಿ

ನವದೆಹಲಿ: ದೇಶದ 13 ನೇ ಉಪರಾಷ್ಟ್ರಪತಿಯಾಗಿ ಇಂದು ವೆಂಕಯ್ಯನಾಯ್ಡು ಪ್ರಮಾಣವಚನ ಸ್ವೀಕರಿಸಿದರು. ...

news

ಅನಾರೋಗ್ಯ ಹಿನ್ನಲೆ: ಎಚ್ ಡಿ ಕುಮಾರಸ್ವಾಮಿ ಸಿಂಗಾಪುರ್ ಗೆ

ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಅನಾರೋಗ್ಯದಿಂದ ...

news

ಚೀನಾದೊಂದಿಗೆ ಯುದ್ಧವೇ? ಭಾರತೀಯ ಸೇನೆ ಉತ್ತರವೇನು ಗೊತ್ತಾ?

ನವದೆಹಲಿ: ಭಾರತ ಮತ್ತು ಚೀನಾ ಸೇನೆ ಡೋಕ್ಲಾಂ ಗಡಿಯಲ್ಲಿ ಯಾವುದೇ ಕ್ಷಣದಲ್ಲೂ ಯುದ್ಧಕ್ಕೆ ಸಿದ್ಧವಾಗುತ್ತಿದೆ ...

news

ನಿರ್ಗಮನದ ಸಮಯದಲ್ಲಿ ವಿವಾದ ಮೈಮೇಲೆಳೆದುಕೊಂಡ ಉಪರಾಷ್ಟ್ರಪತಿ

ನವದೆಹಲಿ: ಭಾರತದ ಉಪರಾಷ್ಟ್ರಪತಿಯಾಗಿ ಎರಡು ಅವಧಿಗೆ ಕಾರ್ಯ ನಿರ್ವಹಿಸಿ ಇದೀಗ ನಿರ್ಗಮಿತವಾಗುತ್ತಿರುವ ...

Widgets Magazine