ಶಶಿಕಲಾ ನಟರಾಜನ್ ಪರೋಲ್ ಆಸೆ ಇನ್ನೂ ಜೀವಂತ

ಬೆಂಗಳೂರು, ಬುಧವಾರ, 4 ಅಕ್ಟೋಬರ್ 2017 (10:04 IST)

ಬೆಂಗಳೂರು: ಅಕ್ರಮ ಆಸ್ಥಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾ ನಟರಾಜನ್ ಮತ್ತೆ ತುರ್ತು ಪರೋಲ್ ಗೆ ಅರ್ಜಿ ಸಲ್ಲಿಸಲಿದ್ದಾರೆ.


 
ಎರಡು ದಿನಗಳ ಹಿಂದೆ ಶಶಿಕಲಾ ನಟರಾಜನ್ ಪರೋಲ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಕಾರಾಗೃಹ ಇಲಾಖೆ ಅದನ್ನು ತಿರಸ್ಕರಿಸಿತ್ತು. ಪತಿ ವಿ ನಟರಾಜನ್ ಅನಾರೋಗ್ಯಕ್ಕೊಳಗಾಗಿರುವುದರಿಂದ ಅವರನ್ನು ನೋಡಲು ಪರೋಲ್ ಮೇಲೆ ಬಿಡುಗಡೆ ಮಾಡುವಂತೆ ಶಶಿಕಲಾ ಮನವಿ ಸಲ್ಲಿಸಿದ್ದರು.
 
ಆದರೆ ಅದು ತಿರಸ್ಕೃತವಾಗಿತ್ತು. ಇದೀಗ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದರೆ ಪರೋಲ್ ನೀಡುವುದರ ಬಗ್ಗೆ ಪರಿಶೀಲನೆ ನಡೆಸುವುದಾಗಿ ಕಾರಾಗೃಹ ಇಲಾಖೆ ಹೇಳಿದೆ. ಈ ಹಿನ್ನಲೆಯಲ್ಲಿ ಶಶಿಕಲಾ ಇಂದು ಮತ್ತೆ ಪರೋಲ್ ಗೆ ಅರ್ಜಿ ಸಲ್ಲಿಸಲಿದ್ದಾರೆ ಎನ್ನಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿಸಿಬಿ ಅಧಿಕಾರಿಗಳ ಎದುರು ಶರಣಾದ ಆರೋಪಿ ಗೀತಾ ವಿಷ್ಣು

ಬೆಂಗಳೂರು: ಪೊಲೀಸರ ಕಣ್ತಪ್ಪಿಸಿ ಮಲ್ಯ ಆಸ್ಪತ್ರೆಯಿಂದ ಪರಾರಿಯಾಗಿದ್ದ ಉದ್ಯೋಗಿ ದಿ.ಆದಿಕೇಶವುಲು ಮೊಮ್ಮಗ ...

news

ವೈದ್ಯರ ಸಹಾಯಕ್ಕೆ ಬಂದ ಬಾಹುಬಲಿ!

ಹೈದರಾಬಾದ್: ಬಾಹುಬಲಿ ಸಿನಿಮಾ ದೇಶಾದ್ಯಂತ ಎಂತಹಾ ಹವಾ ಸೃಷ್ಟಿಸಿತ್ತು ಎಂದು ನಾವೆಲ್ಲಾ ನೋಡಿದ್ದೇವೆ. ಇದೀಗ ...

news

ಹುಬ್ಬಳ್ಳಿಯಲ್ಲಿರುವ ಹೆಚ್ಡಿಕೆ ಮನೆಯಲ್ಲಿ ಅಗ್ನಿ ದುರಂತ

ಹುಬ್ಬಳ್ಳಿ: ನಗರದಲ್ಲಿರುವ ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನಿವಾಸದಲ್ಲಿ ...

news

ಶಶಿಕಲಾ ನಟರಾಜನ್ ಆಸೆಗೆ ಭಂಗ ತಂದ ಕಾರಾಗೃಹ ಇಲಾಖೆ

ಬೆಂಗಳೂರು: ಅಕ್ರಮ ಆಸ್ಥಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ವಾಸ ಅನುಭವಿಸುತ್ತಿರುವ ಎಐಎಡಿಎಂಕೆ ಮಾಜಿ ...

Widgets Magazine
Widgets Magazine