ಪರೋಲ್ ಮುಗಿಸಿ ಶಶಿಕಲಾ ಇಂದು ಮರಳಿ ಜೈಲಿಗೆ

ಬೆಂಗಳೂರು, ಗುರುವಾರ, 12 ಅಕ್ಟೋಬರ್ 2017 (09:08 IST)

Widgets Magazine

ಬೆಂಗಳೂರು: ಅನಾರೋಗ್ಯಕ್ಕೊಳಗಾಗಿರುವ ಪತಿ ನಟರಾಜನ್ ಯೋಗ ಕ್ಷೇಮ ವಿಚಾರಿಸಲು ಐದು ದಿನಗಳ ಪರೋಲ್ ಪಡೆದು ಚೆನ್ನೈಗೆ ತೆರಳಿದ್ದ ಎಐಎಡಿಎಂಕೆ ಮಾಜಿ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಇಂದು ಮರಳಿ ಜೈಲು ಸೇರಲಿದ್ದಾರೆ.


 
ಬಂಧೀಖಾನೆ ಇಲಾಖೆ ಶಶಿಕಲಾಗೆ ಷರತ್ತುಬದ್ಧ ಪರೋಲ್ ನೀಡಿತ್ತು. ಅದರಂತೆ ಶಶಿಕಲಾ ಪತಿ ನಟರಾಜನ್ ಆರೋಗ್ಯ ವಿಚಾರಿಸುವುದರ ಹೊರತಾಗಿ ಯಾವುದೇ ಪಕ್ಷದ ಚಟುವಟಿಕೆ, ಸಭೆ, ಸಮಾಲೋಚನೆ ಮತ್ತು ಮಾಧ್ಯಮಗಳೊಂದಿಗೆ ಮಾತನಾಡುವಂತಿರಲಿಲ್ಲ.
 
ಈ ಐದೂ ದಿನಗಳಲ್ಲಿ ಶಶಿಕಲಾ ತಮ್ಮ ಪರೋಲ್ ಅರ್ಜಿಯಲ್ಲಿ ತಿಳಿಸಿದ್ದ ಮನೆಯಿಂದ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರು. ಈ ಸಂದರ್ಭದಲ್ಲಿ ತಮ್ಮನ್ನು ನೋಡಲು ಬರುತ್ತಿದ್ದ ಬೆಂಬಲಿಗರತ್ತ ಕೈ ಬೀಸುತ್ತಿದ್ದರು. ಅಲ್ಲದೆ, ಹೋಗುವ ದಾರಿಯಲ್ಲಿ ಜಯಲಲಿತಾ ಹೆಚ್ಚಾಗಿ ಆರಾಧಿಸುತ್ತಿದ್ದ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ತೆರಳುತ್ತಿದ್ದರು ಎನ್ನಲಾಗಿದೆ. ಇಂದು ಸಂಜೆ 6 ಗಂಟೆಯೊಳಗೆ ಶಶಿಕಲಾ ಜೈಲಿಗೆ ವಾಪಸಾಗಬೇಕಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಶಶಿಕಲಾ ನಟರಾಜನ್ ಪರೋಲ್ ಪರಪ್ಪನ ಅಗ್ರಹಾರ ರಾಜ್ಯ ಸುದ್ದಿಗಳು Parole Sasikala Natarajan Parappana Agrahara State News

Widgets Magazine

ಸುದ್ದಿಗಳು

news

ಕುಪ್ಪಣ್ಣ ಪಾರ್ಕ್ ಗೆ ಬಂತು ಮೊಸಳೆ

ಮೈಸೂರು: ಪಾರ್ಕ್ ನಲ್ಲಿ ಮೊಸಳೆ ಕಾಣಿಸಿಕೊಂಡು ಕೆಲಕಾಲ ಆತಂಕ ಸೃಷ್ಟಿಯಾದ ಘಟನೆ ಕುಪ್ಪಣ್ಣ ಪಾರ್ಕ್ ನಲ್ಲಿ ...

news

ಇನ್ನೂ ಮುಗಿದಿಲ್ಲ ಮಳೆಯ ಅಬ್ಬರ

ಬೆಂಗಳೂರು: ಮಳೆಗಾಲ ಮುಗಿಯುವ ಕಾಲ ಬಂದರೂ ರಾಜ್ಯದಲ್ಲಿ ವರುಣನ ಅಬ್ಬರ ಮುಂದುವರಿದಿದೆ. ಬೆಂಗಳೂರು ಸೇರಿದಂತೆ ...

news

ಕೇಂದ್ರ ಸರ್ಕಾರ ನೋಟು ನಿಷೇಧವನ್ನು ಸೀಕ್ರೆಟ್ ಆಗಿಟ್ಟಿದ್ದೇಕೆ ಗೊತ್ತಾ?

ನವದೆಹಲಿ: 2016 ರ ನವಂಬರ್ 8 ರಂದು ಯಾರೂ ಕೂಡಾ ಮರೆಯಲು ಸಾಧ್ಯವಿಲ್ಲ. ದಿಡೀರ್ ಎಂದು ಟಿವಿ ಪರದೆ ಮೇಲೆ ...

news

ಪ್ರವಾಸಕ್ಕೆಂದು ಬಂದು ಭಾರತದಲ್ಲಿ ಭಿಕ್ಷೆ ಬೇಡುತ್ತಿದ್ದ ರಷ್ಯಾ ಪ್ರಜೆಗೆ ಸಚಿವೆ ಸುಷ್ಮಾ ನೆರವು

ನವದೆಹಲಿ: ವಿದೇಶದಲ್ಲಿರುವ ಭಾರತೀಯರಿಗೆ ಅಥವಾ ಭಾರತದಲ್ಲಿ ಸಂಕಷ್ಟದಲ್ಲಿರುವ ವಿದೇಶಿಯರಿಗೆ ನೆರವು ...

Widgets Magazine