ಕಡಲ್ಕೊರೆತ: ಎಕೈಕ ರಸ್ತೆ ಸಂಪರ್ಕ ಕಳೆದುಕೊಳ್ಳುವ ಭೀತಿ

ಉಡುಪಿ, ಶುಕ್ರವಾರ, 13 ಜುಲೈ 2018 (12:48 IST)


ಉಡುಪಿಯ ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕನ ಕೋಡ ಪಡುಕರೆ ಭಾಗದಲ್ಲಿ ಕಡಲು ಕೊರೆತ ತೀವ್ರಗೊಂಡಿದೆ.  ಹೀಗಾಗಿ  ಕಡಲೆಕಿನಾರೆಯಲ್ಲಿ ಸಾಗುವ ಹೆಜಮಾಡಿ ಕಾಪುವಿನಿಂದ ಮಲ್ಪೆವರೆಗಿನ ಏಕೈಕ ಸಂಪರ್ಕ ರಸ್ತೆ ಕಡಿದು ಹೋಗುವ ಭೀತಿಯಲ್ಲಿದೆ. ಕಡಲ್ಕೊರೆತ ಭಾದಿಸದಂತೆ ಇರಿಸಲಾದ ಬೃಹತ್ ಗಾತ್ರದ ಬಂಡೆ ಕಲ್ಲುಗಳು ಅಲೆಗಳ ಅರ್ಭಟಕ್ಕೆ ತಡೆಯಲು ವಿಫಲವಾಗ್ತ ಇದೆ.

ಕಳೆದ 2 ದಿನಗಳಿಂದ ಈ ಭಾಗದಲ್ಲಿ  ಕಡಲ್ಕೊರೆತ ತೀವ್ರಗೊಂಡಿದ್ದು, ಕಡಲ್ಕೊರೆತ ತಡೆಯಲು ಹಾಕಲಾದ ಬಂಡೆಕಲ್ಲು  ಸಮುದ್ರ ಪಾಲಾಗುತ್ತಿದೆ. ಸಮುದ್ರದ ತೆರೆಗಳು ಕಡಲ ಕಿನಾರೆಯಲ್ಲಿರುವ ಕಾಂಕ್ರಿಟ್ ರಸ್ತೆಯನ್ನು ದಾಟಿ ಬರುತ್ತಿವೆ.

 ಕಡಲ ತೀರದಲ್ಲಿರುವ ತೋಟ ಮನೆಗಳಿಗೆ ಸಮುದ್ರದ ನೀರು  ನುಗ್ಗಿ ಪಕ್ಕದ ಹೊಳೆ ಸೇರುತ್ತಿದ್ದು ಅಪಾಯದ ಭೀತಿ ಸೃಷ್ಟಿ ಮಾಡಿದೆ. ಇನ್ನೂ ಕಾಂಕ್ರಿಟ್ ರಸ್ತೆಯ ಮೇಲೆ  ಕಸದ ರಾಶಿ ಹಾಗೂ ಮರಳಿನ ರಾಶಿಗಳು ಬಿದ್ದಿದ್ದು ರಸ್ತೆ ಸಂಪೂರ್ಣವಾಗಿ ಕಡಲ ಕೊರೆತಕ್ಕೆ ಒಳಗಾಗಿ ಸಂಪರ್ಕ ಕಡಿದು ಹೋಗುವ ಭೀತಿ ಎದುರಾಗಿದೆ.  ಇದರಲ್ಲಿ ಇನ್ನಷ್ಟು ಓದಿ :  
ಕಡಲಕೊರೆತ ರಸ್ತೆ ಸಂಪರ್ಕ ಭೀತಿ ತೊಂದರೆ ಆತಂಕ Seafaring Fear Trouble Anxiety Road Connectivity

ಸುದ್ದಿಗಳು

news

ರಾಜ್ಯದಲ್ಲಿ ಎಸೆತ್ತಿರುವ ಕೇರಳದ ಕೋಳಿ ತ್ಯಾಜ್ಯ?

ಕೇರಳ ರಾಜ್ಯದಿಂದ ಲಾರಿಯಲ್ಲಿ ತಂದು ಕೋಳಿ ತಾಜ್ಯ ಎಸೆಯುತ್ತಿರುವ ಶಂಕೆಯನ್ನು ಸ್ಥಳೀಯರು ...

news

ಮಾದಕ ವ್ಯಸನಿಗಳ ಬಗ್ಗೆ ಬೆಚ್ಚಿ ಬೀಳಿಸುವ ವರದಿ ಕೊಟ್ಟ ಶಾಸಕ ಆರ್ ಅಶೋಕ್

ಬೆಂಗಳೂರು: ರಾಜಧಾನಿ ಬೆಂಗಳೂರು ಮತ್ತೊಂದು ಉಡ್ತಾ ಪಂಜಾಬ್ ಆಗುತ್ತಿದೆಯೇ? ಇಂದು ವಿಧಾನಸಭೆ ಕಲಾಪದಲ್ಲಿ ...

news

ಕದ್ದ ಚಿನ್ನದ ಜತೆಗೆ ಕ್ಷಮಾಪಣೆ ಪತ್ರ ಬರೆದಿಟ್ಟು ಮರಳಿಸಿದ ಕಳ್ಳ!

ತಿರುವನಂತಪುರಂ: ಕಳ್ಳನ ಕೈಗೆ ಚಿನ್ನ ಸಿಕ್ಕರೆ ಮರಳಿ ಸಿಗುವುದುಂಟೆ? ಪೊಲೀಸರು ಹುಡುಕಿಕೊಟ್ಟರೆ ಕೆಲವೊಮ್ಮೆ ...

news

ಪಾಸ್ ಪೋರ್ಟ್ ಪರೀಕ್ಷೆ ಸಂದರ್ಭ ಮಹಿಳೆಯನ್ನು ತಬ್ಬಿಕೊಂಡ ಪೊಲೀಸ್ !

ನವದೆಹಲಿ: ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸಿದ್ದರೆ ಆಯಾ ಪ್ರದೇಶದ ಪೊಲೀಸ್ ಠಾಣೆಯಿಂದ ಪೊಲೀಸ್ ಪೇದೆಯೊಬ್ಬರು ...

Widgets Magazine