ರಾಜ್ಯ ಬಿಜೆಪಿ ಘಟಕದ ಕಾರ್ಯವೈಖರಿಗೆ ಅಮಿತ್ ಶಾ ಅಸಮಾಧಾನ

ಬೆಂಗಳೂರು, ಭಾನುವಾರ, 13 ಆಗಸ್ಟ್ 2017 (11:30 IST)

Widgets Magazine

ರಾಜ್ಯ ಘಟಕದೊಳಗಿನ ಪಕ್ಷಪಾತ, ದ್ವೇಷದ ವಿರುದ್ಧ ತೀವ್ರವಾದ ಎಚ್ಚರಿಕೆಯನ್ನು ನೀಡಿ ಮತ್ತು ಜಾತಿ ಧ್ರುವೀಕರಣದ ವಿಚಾರಗಳ ಬಗ್ಗೆ ಬಿಜೆಪಿ ಮುಖಂಡರ ಕಾರ್ಯವೈಖರಿಯ ಬಗ್ಗೆ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚುನಾವಣೆಗೆ ರಾಜ್ಯ ಘಟಕವನ್ನು ಹುರಿದುಂಬಿಸಲು ಮೂರು ದಿನಗಳ ಭೇಟಿಗಾಗಿ ಬೆಂಗಳೂರಿನಲ್ಲಿ ಆಗಮಿಸಿದ ಶಾ, ಕಾದಾಡುತ್ತಿದ್ದ ಬಣಗಳ ಮೇಲೆ ಚಾವಟಿ ಹಾಕಿ, ಪಕ್ಷಕ್ಕೆ ನಿಷ್ಠರಾಗಿರುವಂತೆ ಕಟ್ಟು ನಿಟ್ಟಿನ ಆದೇಶ ನೀಡಿದ್ದಾರೆ.
 
"ಪಕ್ಷವು ಯಾವುದೇ ರೀತಿಯ ಅಶಿಸ್ತಿನನ್ನೂ ತಡೆದುಕೊಳ್ಳುವುದಿಲ್ಲ. ಎಲ್ಲ ಕಾರ್ಯಕರ್ತರು ಪಕ್ಷದ ರೇಖೆಯಲ್ಲಿ ಒಂದು ಕುಟುಂಬವಾಗಿ ಕೆಲಸ ಮಾಡಬೇಕು ಎಂದು ಬಿ.ಎಸ್. ಯಡಿಯೂರಪ್ಪ ಮತ್ತು ಕೆ ಎಸ್ ಈಶ್ವರಪ್ಪ ಸೇರಿದಂತೆ ಹಿರಿಯ ರಾಜ್ಯ ಘಟಕದ ನಾಯಕರಿಗೆ ಪರೋಕ್ಷವಾಗಿ ಚಾಟಿ ಬೀಸಿದರು.
 
ಕೆಲವು ರಾಜ್ಯ ಪದಾಧಿಕಾರಿಗಳು ದ್ವೇಷವನ್ನು ಅಂತ್ಯಗೊಳಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಲು ಯತ್ನಿಸಿದಾಗ, ನಾವು ಅದನ್ನು ನೋಡಿಕೊಳ್ಳುತ್ತೇವೆ, ಚಿಂತೆ ಬೇಡ. ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವಲ್ಲಿ ಗಮನಹರಿಸಿರಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಲಹೆ ನೀಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಅಮಿತ್ ಶಾ ಬಿಜೆಪಿ ಭ್ರಷ್ಟಾಚಾರ ಕಾಂಗ್ರೆಸ್ ವಿಧಾನಸಭೆ ಚುನಾವಣೆ Amit Shah Bjp Corruption Congress Assembly Election

Widgets Magazine

ಸುದ್ದಿಗಳು

news

ಉಗ್ರರ ನಿಗ್ರಹಕ್ಕೆ ರೋಬೋ ಸೈನಿಕರು?!

ನವದೆಹಲಿ: ಪಾಕ್ ಗಡಿಯಲ್ಲಿ ಉಗ್ರರ ಉಪಟಳ ದಿನೇ ದಿನೇ ಹೆಚ್ಚುತ್ತಿದೆ. ಹೀಗಾಗಿ ಉಗ್ರರ ನಿಗ್ರಹಕ್ಕೆ ಭಾರತೀಯ ...

news

ಚೀನಾ ಗಡಿ ಕಿರಿಕ್ ಭಾರತಕ್ಕೆ ಸಿಕ್ಕಿದೆ ಬೂಸ್ಟ್!

ನವದೆಹಲಿ: ಡೋಕ್ಲಾಂ ಗಡಿ ವಿವಾದದಲ್ಲಿ ಭಾರತದ ವಿರುದ್ಧ ಪದೇ ಪದೇ ಚೀನಾ ಕಿಡಿ ಕಾರುತ್ತಿದ್ದರೆ, ಭಾರತ ಮಾತ್ರ ...

news

ಡಿಕೆಶಿಯೊಂದಿಗೆ ಐಟಿ ದಾಳಿಯ ಬಗ್ಗೆ ವಿಚಾರಿಸಿದ ರಾಹುಲ್ ಗಾಂಧಿ

ರಾಯಚೂರು: ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಮೇಲೆ ನಡೆದ ಐಟಿ ದಾಳಿಯ ಬಗ್ಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ...

news

ರಾಜ್ಯದಲ್ಲಿ ಅಧಿಕಾರಕ್ಕೆ ತರುವಂತೆ ಅಮಿಕ್ ಶಾ ಸೂಚನೆ ನೀಡಿದ್ದಾರೆ: ಈಶ್ವರಪ್ಪ

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ...

Widgets Magazine