ಜಮೀರ್ ವಿರುದ್ಧ ಜೆಡಿಎಸ್ ಮುಖಂಡ ಶರವಣ ವಾಗ್ದಾಳಿ

ಬೆಂಗಳೂರು, ಸೋಮವಾರ, 16 ಅಕ್ಟೋಬರ್ 2017 (13:51 IST)

ದುಡ್ಡಿನ ತೆವಲಿಗಾಗಿ ಜೆಡಿಎಸ್ ಪಕ್ಷ ನಿಮ್ಮನ್ನು ಹೊರಹಾಕಿದೆ ಎಂದು ರೆಬೆಲ್ ಶಾಸಕ ಜಮೀರ್ ಅಹ್ಮದ್ ಖಾನ್ ವಿರುದ್ಧ ಜೆಡಿಎಸ್ ಮುಖಂಡ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜಿನೆಸ್ ಮಾಡಿಕೊಂಡಿದ್ದ ನೀವು ವ್ಯವಹಾರಗೋಸ್ಕರ ಏನೇನು ಮಾಡಿದ್ದೀರಿ ಎನ್ನುವುದು ನಮಗೆ ಗೊತ್ತಿದೆ. ಕೇವಲ ಹಣಕ್ಕಾಗಿ ನಿಮ್ಮ ಮತಗಳನ್ನು ಮಾರಿಕೊಂಡಿದ್ದೀರಿ ಎಂದು ಗುಡುಗಿದ್ದಾರೆ.
 
ನಿಮ್ಮ ವಿರುದ್ಧ ಎಚ್.ಡಿ. ಸ್ಪರ್ಧಿಸುವುದು ಬಿಡಿ. ನಮ್ಮಂತಹ ಕಾರ್ಯಕರ್ತರು ಸಾಕು. ದೇವೇಗೌಡರು ನಿಮ್ಮಂತಹ ಅನೇಕರಿಗೆ ಆಶ್ರಯ ಕೊಟ್ಟು ನಾಯಕರಾಗಿಸಿದ್ದಾರೆ ಎನ್ನುವುದು ಸುಳ್ಳಾ ಎಂದು ಪ್ರಶ್ನಿಸಿದ್ದಾರೆ. 
 
ನಿಮಗೆ ಮಾನ ಮರ್ಯಾದೆ ನಾಚಿಕೆ ಇದೆಯಾ? ನಿಮ್ಮ ತಾಯಿ ದೇವೇಗೌಡರ ಕಾಲಿಗೆ ಬಿದ್ದು ಸೀಟು ಕೇಳಿದ್ದು ಮರೆತುಹೋಯ್ತಾ? ಗೌಡರ ಕುಟುಂಬದ ವಿರುದ್ಧ ಆರೋಪ ಮಾಡುವ ಮೊದಲು ನಿಮ್ಮ ನೀವು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಜೆಡಿಎಸ್ ಮುಖಂಡ ಶರವಣ ಕಿವಿಮಾತು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿ.ಜಿ. ಪುಟ್ಟಸ್ವಾಮಿಗೆ ನೇಣು ಹಾಕಿಕೊಳ್ಳಲು ಹೇಳಿ: ಸಿಎಂ ತಿರುಗೇಟು

ಬೆಂಗಳೂರು: ಬಿಜೆಪಿ ಮುಖಂಡ ಬಿ.ಜಿ.ಪುಟ್ಟಸ್ವಾಮಿ ನಾನು ಮಾಡಿದ ಆರೋಪಗಳು ಸುಳ್ಳು ಎಂದಾದಲ್ಲಿ ವಿಧಾನಸೌಧದ ...

news

ಕಾಂಗ್ರೆಸ್ ಗೊಡ್ಡೆಮ್ಮೆ ಅಲ್ಲ ಒಳ್ಳೇ ಹಾಲು ಕೊಡುವ ಎಮ್ಮೆ: ಸಚಿವ ಅಂಜನೇಯ

ಚಿತ್ರದುರ್ಗ: ಕಾಂಗ್ರೆಸ್ ಗೊಡ್ಡೆಮ್ಮೆ ಅಲ್ಲ ಹಾಲು ಕೊಡುವ ಹಸು ಎಂದು ಸಮಾಜ ಕಲ್ಯಾಣ ಖಾತೆ ಸಚಿವ ...

news

ಕಟ್ಟಡ ದುರಂತದಲ್ಲಿ ಬದುಕುಳಿದ 3 ರ ಬಾಲೆ!

ಬೆಂಗಳೂರು: ಈಜಿಪುರದಲ್ಲಿ ಇಂದು ಬೆಳಿಗ್ಗೆ ಬಹುಮಹಡಿ ಕಟ್ಟಡ ಕುಸಿದು ನಾಲ್ವರು ದುರ್ಮರಣಕ್ಕೀಡಾದ ಘಟನೆ ...

news

ಆರುಷಿ ಕೊಲೆ ಪ್ರಕರಣ: ತಲ್ವಾರ್ ದಂಪತಿ ಇಂದು ಮನೆಗೆ

ನವದೆಹಲಿ: ಆರುಷಿ ಕೊಲೆ ಪ್ರಕರಣದಲ್ಲಿ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆ ರದ್ದುಗೊಂಡ ಹಿನ್ನಲೆಯಲ್ಲಿ ...

Widgets Magazine
Widgets Magazine