ಮೀಟೂ ಅಭಿಯಾನಕ್ಕೆ ಬೆಂಬಲ ಸೂಚಿಸಿದ ಸಂಸದೆ ಶೋಭಾ ಕರಂದ್ಲಾಜೆ

ಬೆಂಗಳೂರು, ಶನಿವಾರ, 13 ಅಕ್ಟೋಬರ್ 2018 (14:25 IST)

ಬೆಂಗಳೂರು : ಮಹಿಳೆಯರು ತಮ್ಮ ಜೀವನದಲ್ಲಿ ನಡೆದ ಲೈಂಗಿಕ ಕಿರುಕುಳದ ಘಟನೆಗಳನ್ನು ಬಹಿರಂಗಪಡಿಸುವ  ಸಲುವಾಗಿ ಇರುವ ಮೀಟೂ(#MeToo) ಅಭಿಯಾನಕ್ಕೆ ಇದೀಗ ಸಂಸದೆ ಶೋಭಾ ಕರಂದ್ಲಾಜೆ ಅವರು ಸೂಚಿಸಿದ್ದಾರೆ.


ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯ ವೇಳೆ ಈ ಬಗ್ಗೆ ಮಾತನಾಡಿದ ಅವರು ಕಾನೂನಿನ ಅಡಿಯಲ್ಲಿ ಮಹಿಳೆಯರಿಗೆ ನ್ಯಾಯ ಸಿಗಬೇಕು. ಕಾನೂನಿನಲ್ಲಿ ಮಹಿಳೆಯರಿಗೆ ನ್ಯಾಯ ಪಡೆಯುವ ಹಕ್ಕು ಇದೆ. ಈ ಮೂಲಕ ಅವರು ತಮ್ಮ ಅನ್ಯಾಯ ಹೊರಗಡೆ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.


ಈ ಹಿಂದೆಯೂ ಜಿಲ್ಲೆಗಳಲ್ಲಿ ಎಸ್ಪಿ ಕಚೇರಿಯಲ್ಲಿ ದೂರು ಕೇಂದ್ರ ತೆರೆಯಲಾಗಿತ್ತು. ನ್ಯಾಯ ಪಡೆಯಲು ಬೇರೆ ಬೇರೆ ವೇದಿಕೆಗಳಿವೆ. ತಪ್ಪಿತಸ್ಥರು ಯಾರು ಅಂತಾ ತನಿಖೆ ಮಾಡಿ ಕಾನೂನಿನಡಿ ಕ್ರಮ ಕೈಗೊಳ್ಳಬೇಕು. ಇದರ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಯಾವುದೇ ಹೆಣ್ಣು ಮಕ್ಕಳಿಗೆ ಅನ್ಯಾಯವಾದರೆ ಹೇಳಿಕೊಳ್ಳಲು ವೇದಿಕೆ, ಸಂಸ್ಥೆ, ಕಾನೂನು ಇದೆ ಎಂದು ತಿಲಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಯುವ ದಸರಾ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಕಣ್ಣೀರು ಹಾಕಿದ ಸಿಎಂ ಕುಮಾರಸ್ವಾಮಿ

ಮೈಸೂರು : ಮೈಸೂರು ದಸರಾ ಅಂಗವಾಗಿ ನಡೆದ ಯುವ ದಸರಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹೆಚ್.ಡಿ. ...

news

"ವೀರ ಮದಕರಿ ನಾಯಕ" ಚಿತ್ರಕ್ಕೆ ವೇದಿಕೆ ಆಯ್ತಾ ಶರಣ ಸಂಸ್ಕೃತಿ ಉತ್ಸವ..?

"ವೀರ ಮದಕರಿ ನಾಯಕ" ಚಿತ್ರಕ್ಕೆ ವೇದಿಕೆ ಆಯ್ತಾ ಶರಣ ಸಂಸ್ಕೃತಿ ಉತ್ಸವ..? ಹೀಗೊಂದು ಪ್ರಶ್ನೆ ...

news

ಆಕಸ್ಮಿಕ ಬೆಂಕಿಗೆ ಮಗು ಸಜೀವ ದಹನ

ಆಕಸ್ಮಿಕವಾಗಿ ಗುಡಿಸಲಿಗೆ ಬೆಂಕಿ ಬಿದ್ದ ಕಾರಣ 8 ತಿಂಗಳ ಮಗು ಸಜೀವವಾಗಿ ಸುಟ್ಟು ಕರುಕಲಾಗಿರುವ ಹೃದಯ ...

news

ದುರುದ್ದೇಶಪೂರಿತ ಪ್ರಕರಣ: ಪೊಲೀಸ್ ಅಧಿಕಾರಿಗಳಿಗೆ ಬಿತ್ತು ದಂಡ

ದುರುದ್ದೇಶಪೂರಿತ ಪ್ರಕರಣ ದಾಖಲಿಸಿ, ಮಾನಹಾನಿ ಮಾಡಿದ್ದ ಪೊಲೀಸ್ ಅಧಿಕಾರಿಗಳಿಗೆ 7,62,268 ರೂ.ದಂಡ ವಿಧಿಸಿ ...

Widgets Magazine