ಸಿದ್ದರಾಮಯ್ಯ ಮತ್ತೆ ಸಿಎಂ ಆಗೋದು ಡೌಟು?!

ಬೆಂಗಳೂರು, ಮಂಗಳವಾರ, 15 ಮೇ 2018 (05:53 IST)

ಬೆಂಗಳೂರು: ಇನ್ನೇನು ಕೆಲವೇ ಕ್ಷಣಗಳಲ್ಲಿ ರಾಜ್ಯದ ನೂತನ ಸಾರಥಿ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ. ಮತದಾರ ಬರೆದಿರುವ ರಾಜಕಾರಣಿಗಳ ಭವಿಷ್ಯ ಕೆಲವೇ ಗಂಟೆಗಳಲ್ಲಿ ತಿಳಿಯಲಿದೆ.
 
ಇದುವರೆಗೆ ಮತ್ತೊಮ್ಮೆ ಸಿದ್ದರಾಮಯ್ಯ ಅವರೇ ಸಿಎಂ ಆಗಬಹುದು ಎಂದು ಲೆಕ್ಕಾಚಾರ ಹಾಕಲಾಗುತ್ತಿತ್ತು. ಆದರೆ ಒಂದು ವೇಳೆ ಕಾಂಗ್ರೆಸ್ ಗೆ ಬಹುಮತ ಬಾರದೇ ಮೈತ್ರಿ ಸರ್ಕಾರ ರಚಿಸುವ ಹಾಗಾದರೆ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗುವುದು ಡೌಟು.
 
ಕಾಂಗ್ರೆಸ್ ಜೆಡಿಎಸ್ ಬೆಂಬಲ ಕೋರಬೇಕಾದರೆ, ಜೆಡಿಎಸ್ ನಾಯಕರು ಬಹುಶಃ ಇದೇ ಬೇಡಿಕೆ ಮುಂದಿಡಬಹುದು. ಜೆಡಿಎಸ್ ನಾಯಕರ ಮೇಲೆ ಚುನಾವಣೆ ಪ್ರಚಾರ ಸಂದರ್ಭದಲ್ಲೇ ಸಿದ್ದರಾಮಯ್ಯ ವಾಚಮಗೋಚರವಾಗಿ ಟೀಕೆ ಮಾಡಿದ್ದರು. ಜೆಡಿಎಸ್ ಗೂ ಸಿದ್ದರಾಮಯ್ಯ ಮೇಲೆ ಅಸಮಾಧಾನವಿದೆ. ಹೀಗಾಗಿ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆಂದರೆ ಜೆಡಿಎಸ್ ಒಪ್ಪಲಾರದು. ಅನಿವಾರ್ಯವಾಗಿ ಹೊಸ ಮುಖ್ಯಮಂತ್ರಿಯನ್ನು ಆರಿಸಬೇಕಾಗುತ್ತದೆ. ಒಂದು ವೇಳೆ ಜೆಡಿಎಸ್ ಗೆ 40 ಕ್ಕಿಂತ ಹೆಚ್ಚು ಸ್ಥಾನ ಬಂದಲ್ಲಿ ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾದರೂ ಅಚ್ಚರಿಯಿಲ್ಲ!
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ವಾರ್ಷಿಕ ಶ್ರೀಮಂತರ ಪಟ್ಟಿ ಯಲ್ಲಿ ಅಗ್ರ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಇಳಿದ ಹಿಂದೂಜಾ ಸಹೋದರರು

ಲಂಡನ್ : 'ಸಂಡೇ ಟೈಮ್ಸ್’ ಬ್ರಿಟನ್ ನ ವಾರ್ಷಿಕ ಶ್ರೀಮಂತರ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಹಲವು ...

news

ಈ ಬಾರಿ ಕರ್ನಾಟಕದಲ್ಲಿ ಸರ್ಕಾರ ರಚನೆ ಮಾಡುತ್ತೇವೆ - ಬಿ.ಎಸ್. ಯಡಿಯೂರಪ್ಪ

ಬೆಂಗಳೂರು : ಬಿಜೆಪಿ 125-130 ಸ್ಥಾನಗಳನ್ನು ಗೆಲ್ಲುವುದು ಖಚಿತ, ನಾವೇ ಈ ಬಾರಿ ಕರ್ನಾಟಕದಲ್ಲಿ ಸರ್ಕಾರ ...

news

ಫಲಿತಾಂಶ ಬರಲಿ ನಾಳೆ ನೋಡೋಣ: ಗುಟ್ಟು ಬಿಟ್ಟುಕೊಡದ ದೇವೇಗೌಡರು

ಬೆಂಗಳೂರು: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ಎದುರಾದರೆ ಕಾಂಗ್ರೆಸ್ ಜತೆ ಮೈತ್ರಿ ...

news

ಫಲಿತಾಂಶಕ್ಕೂ ಮೊದಲೇ ಸೋಲೊಪ್ಪಿಕೊಂಡರೇ ಸಿಪಿ ಯೋಗೇಶ್ವರ್?

ಬೆಂಗಳೂರು: ಚನ್ನಪಟ್ಟಣದ ಪ್ರತಿಷ್ಠಿತ ಕಣದಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಸಿಪಿ ಯೋಗೇಶ್ವರ್ ...

Widgets Magazine
Widgets Magazine