ಪ್ರೀತಿಸಲು ನಿರಾಕರಿಸಿದ ಯುವತಿಯ ಫೋಟೋ ಅಶ್ಲೀಲ ವೆಬ್‌ಸೈಟ್‌ಗೆ ಹಾಕಿದ ಭೂಪ

ಅಹ್ಮದಾಬಾದ್, ಶನಿವಾರ, 15 ಜುಲೈ 2017 (15:07 IST)

ಕಳೆದ ನಾಲ್ಕು ತಿಂಗಳುಗಳಿಂದ ಹಿಂಬಾಲಿಸಿ 22 ವರ್ಷದ ಯುವತಿಯನ್ನು ಪ್ರೀತಿಸಲು ಹೋಗಿ ಮುಖಭಂಗ ಅನುಭವಿಸಿದ್ದ ಎರಡು ಮಕ್ಕಳ ತಂದೆಯೊಬ್ಬ, ಆಕೆಯ ಮೇಲೆ ಸೇಡು ತೀರಿಸಿಕೊಂಡ ಘಟನೆ ವರದಿಯಾಗಿದೆ. 
 
ಆರೋಪಿ ನಿಲೇಶ್ ಪಟೇಲ್, ತನ್ನ ಮೊಬೈಲ್‌ನಿಂದ ಸಾಮಾಜಿಕ ಜಾಲ ತಾಣದಲ್ಲಿ ಯುವತಿಯ ನಕಲಿ ಪ್ರೊಫೈಲ್ ಸೃಷ್ಟಿಸಿ, ಅದರಲ್ಲಿ ಯುವತಿಯ ಫೋಟೋ ದೊಂದಿಗೆ ಅಶ್ಲೀಲ ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದಾನೆ. ನಂತರ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಆಕೆಯ ಮಾನ ಕಳೆಯುವ ಸಂಚು ರೂಪಿಸಿದ್ದ ಎಂದು ಪೊಲೀಸ್ ಆಯುಕ್ತ ರಾಜದೀಪ್ ಸಿನ್ಹಾ ಝಾಲಾ ತಿಳಿಸಿದ್ದಾರೆ.
 
ಕೆಲ ದಿನಗಳ ನಂತರ ಯುವತಿಗೆ ಅಶ್ಲೀಲ ಬೇಡಿಕೆಗಳ ಕರೆಗಳು ಆರಂಭಿಸಿವೆ. ಕೆಲ ಸಂಬಂಧಿಕರು ಕೂಡಾ ಆಕೆಯ ಪ್ರೊಫೈಲ್ ನೋಡಿ ಮಾಹಿತಿ ನೀಡಿದ್ದಾರೆ. ನಂತರ ಯುವತಿಯ ಕುಟುಂಬದವರು ಪೊಲೀಸರನ್ನು ಸಂಪರ್ಕಿಸದೇ ಬೇರೆ ದಾರಿಯಿರಲಿಲ್ಲ ಎಂದು ಸೈಬರ್ ಪೊಲೀಸ್ ಅಧಿಕಾರಿ ಜೆ.ಎಸ್.ಗೆಡ್ಡಮ್ಮ ಮಾಹಿತಿ ನೀಡಿದ್ದಾರೆ.
 
ಸಾಮಾಜಿಕ ಅಂತರ್ಜಾಲ ತಾಣದ ಕಚೇರಿಯನ್ನು ಸಂಪರ್ಕಿಸಿದ ಸೈಬರ್ ವಿಭಾಗದ ಪೊಲೀಸರು, ನಕಲಿ ಪ್ರೊಫೈಲ್ ಐಪಿ ಅಡ್ರೆಸ್ ನೀಡುವಂತೆ ಕೋರಿದ್ದಾರೆ. ಐಪಿ ಅಡ್ರೆಸ್ ಪಡೆದಾಗ ಆ ಮೊಬೈಲ್ ನಿಲೇಶ್ ಪಟೇಲ್‌ರದ್ದಾಗಿರುತ್ತದೆ.
 
ಪೊಲೀಸರು ನಿಲೇಶ್ ಪಟೇಲ್‌ರನ್ನು ವಿಚಾರಣೆ ನಡೆಸಿದಾಗ ತಾನು ಮಾಡಿದ ತಪ್ಪು ಒಪ್ಪಿಕೊಂಡಿದ್ದಾನೆ. ಯುವತಿಗೆ ಕೆಟ್ಟಹೆಸರು ತರಲು ತಾನು ಹೀಗೆ ಮಾಡಿದ್ದಾಗಿ ತಿಳಿಸಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಆರೋಪಿ ಯುವತಿ ಫೇಸ್‌ಬುಕ್ ಪ್ರೊಫೈಲ್ Spurn X-rated Girl Facebook Profile

ಸುದ್ದಿಗಳು

news

ದೇವೇಗೌಡರಿಗೆ ಪ್ರಧಾನಿ ನರೇಂದ್ರ ಮೋದಿಯಿಂದ ಬುಲಾವ್

ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ನವದೆಹಲಿಗೆ ಬರುವಂತೆ ಪ್ರಧಾನಿ ಮೋದಿ ಆಹ್ವಾನ ...

news

ಹೆಣ್ಣು ಹೆತ್ತದ್ದಕ್ಕಾಗಿ ವರದಕ್ಷಿಣೆ ನೆಪವೊಡ್ಡಿ ಬಾಣಂತಿಗೆ ಥಳಿತ

ಹೆಣ್ಣು ಮಗುವಿಗೆ ಜನ್ಮ ನೀಡಿದಳು ಎಂಬ ಕಾರಣಕ್ಕೆ ಹಸಿ ಬಾಣಂತಿಯೊಬ್ಬಳ ಮೇಲೆ ಆಕೆಯ ಮೈದುನ ಮತ್ತು ಸ್ನೇಹಿತ ...

news

ಪರಪ್ಪನ ಅಗ್ರಹಾರ ಜೈಲಾಗಿ ಉಳಿದಿಲ್ಲ, ಅದೊಂದು ಬಾರ್: ಆರ್.ಅಶೋಕ್

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲು ಜೈಲಾಗಿ ಉಳಿದಿಲ್ಲ ಅದೊಂದು ಬಾರ್ ಎನ್ನುವಂತಾಗಿದೆ ಎಂದು ಬಿಜೆಪಿ ಮುಖಂಡ ...

news

ಉಪರಾಷ್ಟ್ರಪತಿಯಾಗಲಿದ್ದಾರಾ ಎಸ್ ಎಂ ಕೃಷ್ಣ?

ಬೆಂಗಳೂರು: ಕಾಂಗ್ರೆಸ್ ತ್ಯಜಿಸಿ ಇತ್ತೀಚೆಗೆ ಬಿಜೆಪಿ ಸೇರಿದ್ದ ಮಾಜಿ ಕೇಂದ್ರ ಸಚಿವ ಎಸ್ ಎಂ ಕೃಷ್ಣ ...

Widgets Magazine