ಅಂಬರೀಶ್ ಗೆ ಕಬ್ಬಿನ ಅಲಂಕಾರ ಏಕೆ ಗೊತ್ತಾ?

ಮಂಡ್ಯ, ಗುರುವಾರ, 6 ಡಿಸೆಂಬರ್ 2018 (18:10 IST)

ಚಲನಚಿತ್ರ ಹಿರಿಯ ನಟ ಹಾಗೂ ಕೇಂದ್ರ ಮಾಜಿ ಸಚಿವ, ರೆಬಲ್ ಸ್ಟಾರ್ ಅಂಬರೀಶ್ ಗೆ ಅವರ ಅಭಿಮಾನಿಗಳು ವಿನೂತನವಾಗಿ ಗೌರವ ನಮನ ಸಲ್ಲಿಸುತ್ತಿದ್ದಾರೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಬಿ.ಹೊಸೂರು ಗ್ರಾಮದಲ್ಲಿ ಅಭಿಮಾನಿಗಳಿಂದ ಅಗಲಿದ ಚಿತ್ರನಟ ಅಂಬರೀಶ್ ರ ತಿಥಿ ಕಾರ್ಯ ನೆರವೇರಿತು. ಗ್ರಾಮಸ್ಥರು ಅಂಬಿಯ ಪ್ರತಿಮೆಗೆ ಕಬ್ಬಿನಿಂದ ಮಾಡಿ ಗೌರವ ಸಲ್ಲಿಸಿದರು. ಅಂಬಿ ಪ್ರತಿಮೆಗೆ ನಾಟಿ ಕೋಳಿ, ಮುದ್ದೆ ಎಡೆಯಿಟ್ಟು ನಮನ ಸಲ್ಲಿಸಿದರು.

ಅಂಬಿ ಪ್ರತಿಮೆಯನ್ನು ಕಬ್ಬಿನಿಂದ ಅಲಂಕರಿಸಿ, ಕಬ್ಬಿನ ಹಾರ ಹಾಕಿ ವಂದನೆ ಸಲ್ಲಿಸಲಾಯಿತು. ಅಂಬಿಯನ್ನು ನೆನೆದು ಭಾವುಕರಾಗುತ್ತಿರುವ ಅಭಿಮಾನಿಗಳು, ತಮ್ಮ ಮೆಚ್ಚಿನ ನಟನ ಗುಣಗಾನ ಮಾಡಿದರು.

ಅಂಬಿ ಮೃತಪಟ್ಟ ನಂತರ ಬಿ.ಹೊಸೂರು ಗ್ರಾಮದಲ್ಲಿ ಪ್ರತಿಮೆಯನ್ನು ಗ್ರಾಮಸ್ಥರು ಸ್ಥಾಪಿಸಿದ್ದಾರೆ. ಪ್ರತಿಮೆಗೆ ಕಬ್ಬಿನಿಂದ ಅಲಂಕಾರ ಮಾಡಿ, ಕಬ್ಬಿನ ಹಾರ ಹಾಕಿ ತವರು ಜಿಲ್ಲೆಯ ಗೌರವ ಸಲ್ಲಿಸುತ್ತಿರುವ ಅಭಿಮಾನಿಗಳು, ಅಗಲಿದ ಚೇತನಕ್ಕೆ ನಮನ ಸಲ್ಲಿಸಿದರು.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನ್ಯೂ ಇಂಡಿಯಾ ಸಮ್ಮಿಟ್- 2018ಕ್ಕೆ ಅದ್ಧೂರಿ ಚಾಲನೆ

ದೇಶದ ಸಾವಿರಕ್ಕೂ ಅಧಿಕ ರಿಯಲ್ ಎಸ್ಟೇಟ್ ಉದ್ಯಮಿಗಳು ಸೇರಿ ಆಯೋಜಿಸಿರುವ ಸಮಾವೇಶವಾಗಿರುವ ನ್ಯೂ ಇಂಡಿಯಾ ...

news

ಮಹಿಳಾ ಪೊಲೀಸರು ಸೈಕಲ್ ಜಾಥಾ ನಡೆಸಿದ್ಯಾಕೆ?

ರಾಜ್ಯ ಮಹಿಳಾ ಪೊಲೀಸ್ ವತಿಯಿಂದ ಸೈಕಲ್ ಜಾಥಾ ನಡೆಯಿತು.

news

ರೆಡ್ ಹ್ಯಾಂಡ್ ಆಗಿ ಹೇಗೆ ಸರಗಳ್ಳ ಸಿಕ್ಕಿಬಿದ್ದ ಗೊತ್ತಾ?

ವಿಳಾಸ ಕೇಳುವ ನೆಪದಲ್ಲಿ ಸರಗಳ್ಳತನಕ್ಕೆ ಯತ್ನಿಸಿದ್ದ ಕಳ್ಳನೊಬ್ಬ ರೆಡ್ ಹ್ಯಾಂಡ್ ಆಗಿ ...

news

ಅಂಬರೀಶ್ ಸ್ವಗ್ರಾಮದಲ್ಲಿ ತಿಥಿ ಕಾರ್ಯ

ನಟ ಅಂಬರೀಶ್ ನಿಧನದ ಹಿನ್ನೆಲೆಯಲ್ಲಿ ಅವರ ಸ್ವಗ್ರಾಮ ದೊಡ್ಡರಸಿನಕೆರೆ ಗ್ರಾಮದಲ್ಲಿ ಅಂಬಿ ತಿಥಿ ಕಾರ್ಯ ...

Widgets Magazine
Widgets Magazine