ಖಮರುಲ್ ಇಸ್ಲಾಂ ನಿಧನ ಹಿನ್ನೆಲೆ: ಸುಲಫುಲ ಮಠದ ಶ್ರೀಗಳ ಸಂತಾಪ

ಕಲಬುರ್ಗಿ, ಸೋಮವಾರ, 18 ಸೆಪ್ಟಂಬರ್ 2017 (14:19 IST)

ಕಲಬುರ್ಗಿ: ಮಾಜಿ ಸಚಿವ ಖಮರುಲ್ ಇಸ್ಲಾಂ ನಿಧನ ವಾರ್ತೆ ಕೇಳಿ ಅವರ ಮನೆಗೆ ಬೆಂಬಲಿಗರು, ಮಠಾಧೀಶರು, ಸಂಬಂಧಿಗಳ ದಂಡು ಹರಿದು ಬರುತ್ತಿದೆ.


ಖಮರುಲ್ ಇಸ್ಲಾಂ ನಿಧನ ಹೊಂದಿದ ವಿಷಯ ಕೇಳಿ ಅಭಿಮಾನಿಗಳ ದುಃಖದ ಕಟ್ಟೆ ಒಡೆದಿದ್ದು, ಅಗಲಿದ ತಮ್ಮ ನಾಯಕನನ್ನು ನೆನೆದು ಕಣ್ಣಿರಿಡುತ್ತಿದ್ದಾರೆ. ನಗರದ ನೊಬೆಲ್ ಶಾಲೆಯ ಸಮೀಪವಿರುವ ಖಮರುಲ್ ಇಸ್ಲಾಂ ಅವರ ಮನೆಗೆ ಜನ ಸಾಗರವೇ ಹರಿದು ಬರುತ್ತಿದೆ. ಮುಸ್ಲಿಂ ಬಡಾವಣೆಗಳು ಸೇರಿದಂತೆ ಕೆಲವೆಡೆ ಅಂಗಡಿ ಮುಂಗಟ್ಟು ಮುಚ್ಚಿ ಜನರು ಖಮರುಲ್ ಅವರ ಮನೆಯತ್ತ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದಾರೆ. ಶಾಂತಿ ಕಾಪಾಡುವಂತೆ ಕುಟುಂಬದವರು ಮನವಿ ಮಾಡಿದ್ದಾರೆ.

ಖಮರುಲ್ ಇಸ್ಲಾಂ ಎಂದರೆ ಭಾವೈಕ್ಯತೆಯ ನಿಧಿ. ಅವರಲ್ಲಿ ಜಾತಿ ಮನೋಭಾವ ಇರಲಿಲ್ಲ. ಅವರಿಗೆ ಸರ್ವಧರ್ಮ ಸಮ್ಮೇಳನ ಮಾಡುವ ಆಸೆಯಿತ್ತು. ಖಮರುಲ್ ಇಸ್ಲಾಂ ಸುಲಫುಲ ಮಠಕ್ಕೆ ಭದ್ರ ಬುನಾದಿ ಹಾಕಿದ್ದು, ಪ್ರತಿಯೊಂದು ಕಲ್ಲು ಸಹ ಅವರ ಹೆಸರು ಹೇಳುತ್ತೆ. ಖಮರುಲ್ ಇಸ್ಲಾಂ ಅಗಲಿಕೆಯಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬಸ್ಥರು ಮತ್ತು ಬೆಂಬಲಿಗರಿಗೆ ನೋವು ಸಹಿಸುವ ಶಕ್ತಿ ದೇವರು ನೀಡಲಿ ಎಂದು ಸುಲಫುಲ ಮಠದ ಶ್ರೀಗಳು ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  
ಸುಲಫುಲ ಮಠ ಖಮರುಲ್ ಇಸ್ಲಾಂ Sulaphula Mutt Qumarul Islam

ಸುದ್ದಿಗಳು

news

ಖಾಸಗಿ ವಾಹಿನಿ ವರದಿಗಾರ ಮಂಜು ಹೊನ್ನಾವರ ಸಾವು

ಉತ್ತರ ಕನ್ನಡ: ಖಾಸಗಿ ವಾಹಿನಿ ವರದಿಗಾರ ಬಂದರಿನಲ್ಲಿ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಮೃತಪಟ್ಟಿರುವ ಘಟನೆ ...

news

ಯಡಿಯೂರಪ್ಪ ಸ್ಪರ್ಧಿಸುವ ಬಗ್ಗೆ ಗೊಂದಲವಿದೆ: ಉಲ್ಟಾ ಹೊಡೆದ ಕರಂದ್ಲಾಜೆ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್.ಯಡಿಯೂರಪ್ಪ ಎಲ್ಲಿಂದ ಸ್ಪರ್ಧಿಸಬೇಕು ಎನ್ನುವ ಬಗ್ಗೆ ...

news

ಮುಂದಿನ 2 ದಿನ ರಾಜ್ಯದಲ್ಲಿ 60-100 ಮಿ.ಮೀ ಮಳೆ ಸಾಧ್ಯತೆ: ಪರಿಸ್ಥಿತಿ ಎದುರಿಸಲು ಸಜ್ಜಾಗುತ್ತಿರುವ ಸರ್ಕಾರ

ಕಳೆದ ಎರಡು ವಾರಗಳಿಂದ ರಾಜ್ಯದ ಹಲವೆಡೆ ಮಳೆಯ ಅಬ್ಬರ ಜೋರಾಗಿದೆ. ಉದ್ಯಾನನಗರಿ ಬೆಂಗಳೂರು ಸಹ ಮಳೆಯಿಂದ ...

news

ಮಾಜಿ ಸಚಿವ ಖಮರುಲ್ ಇಸ್ಲಾಂ ನಿಧನ

ಬೆಂಗಳೂರು: ಮಾಜಿ ಸಚಿವ, ಕಲಬುರ್ಗಿಉತ್ತರ ಮತಕ್ಷೇತ್ರದ ಶಾಸಕ ಖಮರುಲ್ ಇಸ್ಲಾಂ(69) ಹೃದಯಾಘಾತದಿಂದ ...

Widgets Magazine
Widgets Magazine