ಪ್ರಧಾನಿ ಮೋದಿ ಆಗಮನಕ್ಕೆ ಕ್ಷಣಗಣನೆ: ಧರ್ಮಸ್ಥಳ-ಉಜಿರೆಯಲ್ಲಿ ಹೈ ಅಲರ್ಟ್

ಧರ್ಮಸ್ಥಳ, ಭಾನುವಾರ, 29 ಅಕ್ಟೋಬರ್ 2017 (09:10 IST)

Widgets Magazine

ಧರ್ಮಸ್ಥಳ: ಪ್ರಧಾನಿ ನರೇಂದ್ರ ಮೋದಿ ಧರ್ಮಸ್ಥಳಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಉಜಿರೆಯಲ್ಲಿ ಹೈ ಅಲರ್ಟ್ ಮಾಡಲಾಗಿದೆ.


ದೇವಾಲಯಕ್ಕೆ ಆಗಮಿಸಲಿರುವ ಮೋದಿಯವರು, ಮಂಜುನಾಥ ದೇವರಿಗೆ ರುದ್ರಾಭೀಷೇಕ ಮಾಡಿಸಲಿದ್ದಾರೆ. ನಂತರ ಅಣ್ಣಪ್ಪ ದೇವರ ದರ್ಶನ ಪಡೆಯಲಿದ್ದಾರೆ. ಇದಾದ ಬಳಿಕ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರೊಂದಿಗೆ ಚರ್ಚೆ ನಡೆಸಿ ಅಲ್ಲಿಂದ ಉಜಿರೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಭದ್ರತಾ ದೃಷ್ಟಿಯಿಂದ ಸಿಬ್ಬಂದಿ ಬೆಳಗ್ಗೆಯಿಂದಲೇಧರ್ಮಸ್ಥಳ ಮಂಜುನಾಥ ದೇವಾಲಯದ ಸುತ್ತ ಭದ್ರತಾ ಕಾರ್ಯ ಚುರುಕುಗೊಳಿಸಿದ್ದಾರೆ. ಭಕ್ತರಿಗೆ ದೇವಾಲಯ ಪ್ರವೇಶ ನಿಷೇಧಿಸಿದೆ. ಈಗಾಗಲೇ ಬಾಂಬ್ ಪತ್ತೆದಳದಿಂದ ದೇವಾಲಯದ ಸುತ್ತ ತಪಾಸಣೆ ನಡೆದಿದೆ. ಮುಂಜಾಗ್ರತಾ ಕ್ರಮವಾಗಿ ಧರ್ಮಸ್ಥಳ-ಉಜಿರೆ ರಸ್ತೆಯಲ್ಲಿ ಎಎನ್ಎಫ್ ನಿಂದ ಕೂಂಬಿಂಗ್ ನಡೆಸಿದೆ.

ಮೋದಿ ಆಗಮನ ಹಿನ್ನೆಲೆಯಲ್ಲಿ 2,500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನ ನೇಮಕ ಮಾಡಲಾಗಿದೆ. 10 ಎಸ್ಪಿ, 150 ಡಿವೈಎಸ್ಪಿ ದರ್ಜೆ ಅಧಿಕಾರಿಗಳು, ಎನ್ಎಸ್ ಜಿ, ಎಸ್ ಪಿಜಿ, ಎಎನ್ಎಫ್, ಬಾಂಬ್ ಪತ್ತೆದಳ ಭದ್ರತೆಗಾಗಿ ನಿಯೋಜನೆಗೊಂಡಿದೆ. ಅಲ್ಲದೆ ಧರ್ಮಸ್ಥಳ-ಉಜಿರೆ ರಸ್ತೆಯಲ್ಲಿ ಕಿಲೋಮೀಟರ್ ಗೆ ಇಬ್ಬರು ಪಿಎಸ್ಐ ಸೇರಿ 40 ಪೊಲೀಸ್ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ. ಈ ಮಾರ್ಗದಲ್ಲಿ ಮಾರ್ಗದಲ್ಲಿ ಸಾರ್ವಜನಿಕರಿಗೆ ಸಂಚಾರ ನಿಷೇಧಿಸಲಾಗಿದೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಪ್ರಧಾನಿ ಮೋದಿ ಆಗಮನ ಹಿನ್ನಲೆ: ಖುದ್ದು ತಯಾರಿ ಪರಿಶೀಲಿಸಿದ ಧರ್ಮಾಧಿಕಾರಿ

ಮಂಗಳೂರು: ಪ್ರಧಾನಿ ಮೋದಿ ಇಂದು ಧರ್ಮಸ್ಥಳ ಕ್ಷೇತ್ರಕ್ಕೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಕಾರ್ಯಕ್ರಮಗಳ ...

news

ಪ್ರಧಾನಿ ಮೋದಿ ಇಂದಿನ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಸಾಥ್ ಕೊಡಲ್ಲ!

ಬೆಂಗಳೂರು: ಪ್ರಧಾನಿ ಮೋದಿ ಇಂದು ರಾಜ್ಯಕ್ಕೆ ಆಗಮಿಸುತ್ತಿದ್ದು, ಹಲವು ಕಾರ್ಯಕ್ರಮಗಳಲ್ಲಿ ...

news

ಬೆಳಗ್ಗೆ ನಿಯತ್ತಿನ ಆಟೋ ಚಾಲಕ… ರಾತ್ರಿಯಾಗುತ್ತಿದ್ದಂತೆ ಏನ್ ಮಾಡ್ತಿದ್ದ ಗೊತ್ತಾ…?

ಮೈಸೂರು: ಈಗಿನ ಕಾಲದಲ್ಲಿ ಯಾರನ್ನ ನಂಬೋದು ಬಿಡೋದು ಅನ್ನೋದೆ ತಿಳಿಯುತ್ತಿಲ್ಲ. ಬೆಳಗ್ಗೆ ಆಟೋರಿಕ್ಷಾ ...

news

ಹರಕೆ ತೀರಿಸಿದ ಭಕ್ತ… ಚಾಮುಂಡೇಶ್ವರಿ ಗರ್ಭಗುಡಿಗೆ ಚಿನ್ನದಪಟ್ಟಿ ಬಾಗಿಲು

ಮೈಸೂರು: ನಾಡ ಅಧಿದೇವತೆ ಚಾಮುಂಡೇಶ್ವರಿ ಗರ್ಭಗುಡಿ ಬಾಗಿಲಿಗೆ ಚಿನ್ನದ ಪಟ್ಟಿ ಬಾಗಿಲು ಅರ್ಪಿಸಲು ಹರಕೆ ...

Widgets Magazine