ಪ್ರತಿಷ್ಠಿತ 10 ರಿಯಲ್ ಎಸ್ಟೇಟ್ ಕಂಪನಿಯಿಂದ ವಂಚನೆ: 100 ಜನರ ಬಂಧನ

ಬೆಂಗಳೂರು, ಶನಿವಾರ, 29 ಜುಲೈ 2017 (18:01 IST)

ಬೆಂಗಳೂರು:ಕಡಿಮೆ ಮೊತ್ತಕ್ಕೆ ನಿವೇಶನ ನೀಡುವುದಾಗಿ ಹೇಳಿ ಸಾರ್ವಜನಿಕರಿಗೆ ವಂಚಿಸುತ್ತಿದ್ದ 10 ಪ್ರತಿಷ್ಠಿತ ಕಂಪೆನಿಗಳನ್ನು ಜಪ್ತಿ ಮಾಡಲಾಗಿದೆ. ವಂಚನೆ ನಡೆಸಿರುವ 10 ಕಂಪನಿಗಳ ವಿರುದ್ದ ಇಲ್ಲಿಯವರೆಗೆ 422 ಪ್ರಕರಣಗಳನ್ನು ದಾಖಲಿಸಿ 100 ಮಂದಿಯನ್ನು ಬಂಧಿಸಲಾಗಿದೆ ಎಂದು ಸಿಐಡಿ ಪೊಲೀಸ್ ಮಹಾನಿರ್ದೇಶಕ ಕಿಶೋರ್‌ ಚಂದ್ರ ತಿಳಿಸಿದ್ದಾರೆ.
 
ಅಗ್ರಿ ಗೋಲ್ಡ್ - 1,640 ಕೋಟಿ ರೂ, ಹಿಂದೂಸ್ಥಾನ್ ಇನ್ ಫ್ರಾಸ್ಟ್ರಕ್ಚರ್ - 389 ಕೋಟಿ ರೂ, ಮೈತ್ರಿ ಪ್ಲಾಂಟೇಶನ್ - 9.82 ಕೋಟಿ ರೂ, ಗ್ರೀನ್ ಬರ್ಡ್ ಆಗ್ರೋ ಫಾರಂ ಲಿಮಿಟೆಡ್ - 53 ಕೋಟಿ ರೂ, ಹರ್ಷಾ ಎಂಟರ್ ಟೈನ್ ಮೆಂಟ್- 136 ಕೋಟಿ ರೂ, ಡ್ರೀಮ್ಸ್ ಇನ್ ಫ್ರಾ - 573 ಕೋಟಿ ರೂ,ಟಿಜಿಎಸ್ - 260 ಕೋಟಿ ರೂ,ಗೃಹ - 277 ಕೋಟಿ ರೂ, ಸೆವೆನ್ ಹಿಲ್ಸ್ - 81 ಕೋಟಿ ರೂ ವಂಚನೆ ಮಾಡಿದ ಕಂಪನಿಗಳಾಗಿವೆ
 
ಈ ಕಂಪನಿಗಳು ಸಾಮಾಜಿಕ ಜಾಲತಾನಗಳಲ್ಲಿ ಆಕರ್ಷಕ ಜಾಹೀರಾತು ನೀಡಿ, ಸಾರ್ವಜನಿಕರನ್ನು ತಮ್ಮತ್ತ ಸೆಳೆಯುತ್ತಿದ್ದರು, ಈ ಕಂಪನಿಗಳು ಸಿನಿಮಾತಾರೆಯರು, ಪ್ರಮುಖ ವ್ಯಕ್ತಿಗಳನ್ನು ಜಾಹೀರಾತಿಗೆ ಬಳಸಿಕೊಂಡಿದ್ದವು. ನಿವೃತ್ತ ಅಧಿಕಾರಿಗಳು, ಇಂಜಿನಿಯರ್‌ಗಳು, ಸರ್ಕಾರಿ ನೌಕರರು, ನಿವೃತ್ತ ಮಿಲಿಟರಿ ಅಧಿಕಾರಿಗಳು, ನಿವೃತ್ತ ನ್ಯಾಯಾಧೀಶರು, ಮಹಿಳೆಯರು ಸೇರಿದಂತೆ ಹಲವಾರು ಪ್ರಜ್ಞಾವಂತರೇ ಹಣ ಕಳೆದುಕೊಂಡಿದ್ದಾರೆ. ಇವರಲ್ಲಿ ಕೆಲವರು ಮಾತ್ರ ದೂರು ನೀಡಿದ್ದು, ಇನ್ನೂ ಹಲವರು ದೂರು ನೀಡಿಲ್ಲ. ವಂಚನೆಗೊಳಗಾಗಿ ದೂರು ನೀಡದೇ ಇರುವವರು ಕೂಡಲೇ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ನೀಡಬಹುದು ಎಂದು ಸಿಐಡಿ ಅಧಿಕರೈ ತಿಳಿಸಿದ್ದಾರೆ. 
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕೇಂದ್ರ ಸಚಿವೆ ಸ್ಮೃತಿ ಇರಾನಿ ಒಟ್ಟು ಆಸ್ತಿ ಎಷ್ಟು ಗೊತ್ತಾ?

ನವದೆಹಲಿ: ಗುಜರಾತ್‌ನಿಂದ ರಾಜ್ಯಸಭೆ ಕಣಕ್ಕಿಳಿದಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೇಂದ್ರ ಚುನಾವಣೆ ...

news

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಒಟ್ಟು ಆಸ್ತಿ ಎಷ್ಟು ಗೊತ್ತಾ?

ನವದೆಹಲಿ: ಕಳೆದ ಐದು ವರ್ಷಗಳ ಅವಧಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಸಂಪತ್ತಿನಲ್ಲಿ ...

news

ತಿಗಣೆ ಕೊಲ್ಲಲು ಮಹಿಳೆ ಮಾಡಿದ ಎಡವಟ್ಟಿನಿಂದ ಅಪಾರ್ಟ್ ಮೆಂಟ್ ಗೆ ಬಿತ್ತು ಬೆಂಕಿ

ತಿಗಣೆ ಕಾಟ ತಾಳಲಾರದೆ ಮಹಿಳೆಯೊಬ್ಬರು ಮನೆಯಲ್ಲಿದ್ದ ತಿಗಣೆಯನ್ನು ಲೈಟರ್ ನಿಂದ ಕೊಲ್ಲಲು ಲೈಟರ್ ನಿಂದ ...

ತಿಗಣೆ ಕೊಲ್ಲಲು ಮಹಿಳೆ ಮಾಡಿದ ಎಡವಟ್ಟಿನಿಂದ ಅಪಾರ್ಟ್ ಮೆಂಟ್ ಗೆ ಬಿತ್ತು ಬೆಂಕಿ

ತಿಗಣೆ ಕಾಟ ತಾಳಲಾರದೆ ಮಹಿಳೆಯೊಬ್ಬರು ಮನೆಯಲ್ಲಿದ್ದ ತಿಗಣೆಯನ್ನು ಲೈಟರ್ ನಿಂದ ಕೊಲ್ಲಲು ಲೈಟರ್ ನಿಂದ ...

Widgets Magazine
Widgets Magazine